Log In
BREAKING NEWS >
ಘರ್ಷಣೆ, ಹಿಂಸಾಚಾರಕ್ಕೆ ತಿರುಗಿದ ಟ್ರ್ಯಾಕ್ಟರ್ ಪರೇಡ್: ಪೊಲೀಸರಿಂದ ಅಶ್ರುವಾಯು, ಲಾಠಿಚಾರ್ಜ್ ಪ್ರಯೋಗ, ದೆಹಲಿಯಲ್ಲಿ ಪರಿಸ್ಥಿತಿ ಉದ್ವಿಗ್ನ ...

ಯಕ್ಷಗಾನ ಕಲಾರಂಗ ಪ್ರಶಸ್ತಿ-2019ಕ್ಕೆ ಆಯ್ಕೆ:17 ಮಂದಿ ಹಿರಿಯ ಯಕ್ಷಗಾನ ಕಲಾವಿದರಿಗೆ ನಗದು ಪುರಸ್ಕಾರ ಸಹಿತ ಗೌರವ

ಉಡುಪಿ: ಈ ವರ್ಷದ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ ಪ್ರದಾನ ಸಮಾರಂಭ ನವೆಂಬರ್ 17, 2019 ಭಾನುವಾರ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಸಂಪನ್ನಗೊಳ್ಳಲಿದ್ದು ಅಂದು 17 ಮಂದಿ ಹಿರಿಯ ಯಕ್ಷಗಾನ ಕಲಾವಿದರಿಗೆ ತಲಾ 20,000/- ನಗದು ಪುರಸ್ಕಾರ ಸಹಿತ ಗೌರವಿಸಲಾಗುವುದು.
ಪ್ರಶಸ್ತಿ ಮತ್ತು ಪ್ರಶಸ್ತಿಗೆ ಆಯ್ಕೆಯಾದ ಕಲಾವಿದರು:-
ಡಾ. ಬಿ.ಬಿ. ಶೆಟ್ಟಿ ಸ್ಮರಣಾರ್ಥ ಪ್ರಶಸ್ತಿ : ಶ್ರೀ ಪೊಲ್ಯ ಲಕ್ಷ್ಮೀ ನಾರಾಯಣ ಶೆಟ್ಟಿ
ಪ್ರೊ. ಬಿ.ವಿ. ಆಚಾರ್ಯ ಸ್ಮರಣಾರ್ಥ ಪ್ರಶಸ್ತಿ : ಶ್ರೀ ಚೇರ್ಕಾಡಿ ಮಂಜುನಾಥ ಪ್ರಭು
ನಿಟ್ಟೂರು ಸುಂದರ ಶೆಟ್ಟಿ-ಮಹೇಶ ಡಿ. ಶೆಟ್ಟಿ ಸ್ಮರಣಾರ್ಥ ಪ್ರಶಸ್ತಿ : ಶ್ರೀ ಪೆರುವಾಯಿ ನಾರಾಯಣ ಭಟ್
ಬಿ. ಜಗಜ್ಜೀವನ್‍ದಾಸ್ ಶೆಟ್ಟಿ ಸ್ಮರಣಾರ್ಥ ಪ್ರಶಸ್ತಿ : ಶ್ರೀ ಕೆ. ನಾರಾಯಣ ಪೂಜಾರಿ, ಉಜಿರೆ
ಕೆ. ವಿಶ್ವಜ್ಞ ಶೆಟ್ಟಿ ಸ್ಮರಣಾರ್ಥ ಪ್ರಶಸ್ತಿ : ಶ್ರೀ ಕೆ. ಅಣ್ಣಿ ಗೌಡ, ಬೆಳ್ತಂಗಡಿ
ಕುತ್ಪಾಡಿ ಆನಂದ ಗಾಣಿಗ ಸ್ಮರಣಾರ್ಥ ಪ್ರಶಸ್ತಿ : ಶ್ರೀ ಶೀನ ನಾಯ್ಕ, ಬ್ರಹ್ಮೇರಿ
ಭಾಗವತ ನಾರ್ಣಪ್ಪ ಉಪ್ಪೂರ ಸ್ಮರಣಾರ್ಥ ಪ್ರಶಸ್ತಿ : ಶ್ರೀ ಕೆ. ಪಿ. ಹೆಗಡೆ, ಕೋಟ
ದಶಾವತಾರಿ ಮಾರ್ವಿ ರಾಮಕೃಷ್ಣ ಹೆಬ್ಬಾರ್-ಭಾಗವತ ವಾದಿರಾಜ ಹೆಬ್ಬಾರ್ ಸ್ಮರಣಾರ್ಥ ಪ್ರಶಸ್ತಿ : ಶ್ರೀ ನಿಡ್ಲೆ ಗೋವಿಂದ ಭಟ್
ಶಿರಿಯಾರ ಮಂಜು ನಾಯ್ಕ್ ಸ್ಮರಣಾರ್ಥ ಪ್ರಶಸ್ತಿ : ಶ್ರೀ ಆಜ್ರಿ ಗೋಪಾಲ ಗಾಣಿಗ
ಕೋಟ ವೈಕುಂಠ ಸ್ಮರಣಾರ್ಥ ಪ್ರಶಸ್ತಿ : ಶ್ರೀ ಮೂರೂರು ವಿಷ್ಣು ಭಟ್
ಪಡಾರು ನರಸಿಂಹ ಶಾಸ್ತ್ರಿ ಸ್ಮರಣಾರ್ಥ ಪ್ರಶಸ್ತಿ : ಶ್ರೀ ಮಹಾಬಲ ದೇವಾಡಿಗ, ಕಟ್‍ಬೆಲ್ತೂರ್
ಕಡಿಯಾಳಿ ಸುಬ್ರಾಯ ಉಪಾಧ್ಯ ಸ್ಮರಣಾರ್ಥ ಪ್ರಶಸ್ತಿ : ಶ್ರೀ ಪಡ್ರೆ ಕುಮಾರ
ಮಲ್ಪೆ ಶಂಕರನಾರಾಯಣ ಸಾಮಗ ಸ್ಮರಣಾರ್ಥ ಪ್ರಶಸ್ತಿ : ಶ್ರೀ ಅನಂತ ಹೆಗಡೆ, ನಿಟ್ಟೂರು
ಐರೋಡಿ ರಾಮ ಗಾಣಿಗ ಸ್ಮರಣಾರ್ಥ ಪ್ರಶಸ್ತಿ : ಶ್ರೀ ಎಂ. ಶ್ರೀಧರ ಹೆಬ್ಬಾರ್
ಶ್ರೀ ಕೋಳ್ಯೂರು ರಾಮಚಂದ್ರ ರಾವ್ ಗೌರವಾರ್ಥ ಪ್ರಶಸ್ತಿ : ಶ್ರೀ ತೋಡಿಕಾನ ವಿಶ್ವನಾಥ ಗೌಡ
ಶ್ರೀಮತಿ ಪ್ರಭಾವತಿ ವಿ. ಶೆಣೈ, ಶ್ರೀ ಯು. ವಿಶ್ವನಾಥ ಶೆಣೈ ಗೌರವಾರ್ಥ ಪ್ರಶಸ್ತಿ : ಶ್ರೀ ನಾಗಪ್ಪ ಗೌಡ, ಗುಣವಂತೆ
ಎಮ್. ತಿಮ್ಮಯ್ಯ ಗೌರವಾರ್ಥ ಪ್ರಶಸ್ತಿ : ಶ್ರೀ ಲಕ್ಷ್ಮಣ ಕೋಟ್ಯಾನ್, ಸುಂಕದಕಟ್ಟೆ
ಯಕ್ಷಚೇತನ ಪ್ರಶಸ್ತಿ : ಶ್ರೀ ರಮೇಶ ರಾವ್, ಸಾಲಿಗ್ರಾಮ

No Comments

Leave A Comment