Log In
BREAKING NEWS >
ಅರ್ಧಕ್ಕೆ ನಿಂತ ಪರ್ಕಳ ರಾ. ಹೆದ್ದಾರಿ ಕಾಮಗಾರಿ: ಅಂಗಡಿ, ಮನೆಯೊಳಗೆ ಕೆಸರು ನೀರು....

ಕಾಶ್ಮೀರದ ಎರಡು ಸರ್ಕಾರಿ ಶಾಲೆಗೆ ಬೆಂಕಿ: ಮಸೀದಿಯಲ್ಲಿ ಪ್ರಾರ್ಥನೆಗೆ ನಿಷೇಧ!

ಶ್ರೀನಗರ: ಅಪರಿಚಿತ ದುಷ್ಕರ್ಮಿಗಳು ಸರ್ಕಾರಿ ಶಾಲೆಗೆ ಬೆಂಕಿ ಹಚ್ಚಿದ್ದಾರೆ,  ಹೀಗಾಗಿ ಜಾಮಿಯಾ ಮಸೀದಿಯಲ್ಲಿ ಮಾಡಬೇಕಿದ್ದ ಮದ್ಯಾಹ್ನದ ಪ್ರಾರ್ಥನೆ ನಿಷೇಧಿಸಲಾಗಿದೆ.

ದುಷ್ತರ್ಮಿಗಳು ಮೊದಲಿಗೆ ಚವಾಲ್ಗಾಮ್ ಪ್ರೌಢಶಾಲೆಗೆ ಬೆಂಕಿ ಹಚ್ಚಿದ್ದಾರೆ, ಅದೇ ಬೆಂಕಿ ವಾಡೂನಲ್ಲಿರುವ ಮತ್ತೊಂದು ಶಾಲೆಗೂ ವ್ಯಾಪಿಸಿದೆ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ.

ಹೀಗಾಗಿ ಶುಕ್ರವಾರ ಜಾಮಾ ಮಸೀದಿಯಲ್ಲಿ ನಡೆಯಬೇಕಿದ್ದ ನಮಾಜ್ ಅನ್ನು ನಿಷೇಧಿಸಲಾಗಿತ್ತು. ಇದನ್ನು ವಿರೋಧಿಸಿ ಶ್ರೀನಗರದಲ್ಲಿ ಯುವಕರು ಪ್ರತಿಭಟನೆ ನಡೆಸಿದರು ಹೀಗಾಗಿ ಸ್ಥಳದಲ್ಲಿ ಪೊಲೀಸ್ ಮತ್ತು ಸಿಆರ್ ಪಿಎಫ್ ಸಿಬ್ಬಂದಿ ನಿಯೋಜಿಸಲಾಗಿದೆ,

ಇದೇ ವೇಳೆ ಕೆಲ ಕಿಡಿಗೇಡಿಗಳು ಭದ್ರತಾ ಸಿಬ್ಬಂದಿ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ, ಪೊಲೀಸರು ಅಶ್ರುವಾಯು ಸಿಡಿಸಿದ್ದಾರೆ.

No Comments

Leave A Comment