Log In
BREAKING NEWS >
ಮಂಡ್ಯ ಸಂಸದೆ ಸುಮಲತಾ ಅಂಬರೀಶ್‌ಗೂ ಕೊರೊನಾ ಪಾಸಿಟೀವ್‌!...

ಒಡಿಶಾ ಹೋಟೆಲ್ ನಲ್ಲಿ ಆರ್ ಬಿಐ ಜನರಲ್ ಮ್ಯಾನೇಜರ್ ನೇಣಿಗೆ ಶರಣು; ತನಿಖೆ ಆರಂಭ

ಭುವನೇಶ್ವರ್: ಗುವಾಹಟಿಯ ಭಾರತೀಯ ರಿಸರ್ವ್ ಬ್ಯಾಂಕ್ ಆಫ್ (ಆರ್ ಬಿಐ) ಇಂಡಿಯಾ ಶಾಖೆಯ ಜನರಲ್ ಮ್ಯಾನೇಜರ್ ಹೋಟೆಲ್ ರೂಂನಲ್ಲಿ ನೇಣಿಗೆ ಶರಣಾಗಿರುವ ಘಟನೆ ಒಡಿಶಾದ ಜೈಪುರದಲ್ಲಿ ನಡೆದಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಜೈಪುರ್ ಜಿಲ್ಲೆಯ ನರಹರಿಪುರ್ ಗ್ರಾಮದ ನಿವಾಸಿಯಾಗಿರುವ ಅಶೀಶ್ ರಂಜನ್ ಸಾಮಾಲ್ ಶುಕ್ರವಾರ ಹೋಟೆಲ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿ ಹೇಳಿದೆ.

ಗುರುವಾರ ಊರಿಗೆ ಆಗಮಿಸಿದ್ದ ಅಶೀಶ್ ರಂಜನ್ ತಾಯಿಯನ್ನು ಭೇಟಿಯಾಗಿದ್ದರು. ನಂತರ ಭುವನೇಶ್ವರ್ ಕ್ಕೆ ತೆರಳಿ ಕಳಿಂಗ ಇನ್ಸ್ ಟಿಟ್ಯೂಟ್ ಆಫ್ ಮೆಡಿಕಲ್ ಸಾಯನ್ಸ್ ನಲ್ಲಿ ವೈದ್ಯರಾಗಿರುವ ಪತ್ನಿ ಹಾಗೂ ಪುತ್ರನನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.

ನಂತರ ಗುರುವಾರ ಮಧ್ಯಾಹ್ನ ಹೋಟೆಲ್ ಸಾಮಾಲ್ ಹೋಟೆಲ್ ಗೆ ಆಗಮಿಸಿದ್ದರು. ಶುಕ್ರವಾರ ಬೆಳಗ್ಗೆ ಹೋಟೆಲ್ ಸಿಬ್ಬಂದಿ ಬಾಗಿಲು ಬಡಿದಾಗ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲವಾಗಿತ್ತು. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಹೋಟೆಲ್ ಕೋಣೆಯ ಬಾಗಿಲು ಒಡೆದು ಒಳ ಹೋದಾಗ ಸಾಮಾಲ್ ನೇಣಿಗೆ ಶರಣಾಗಿರುವುದು ಪತ್ತೆಯಾಗಿರುವುದಾಗಿ ವರದಿ ವಿವರಿಸಿದೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಸಾಮಾಲ್ ಯಾವ ಕಾರಣಕ್ಕೆ ನೇಣಿಗೆ ಶರಣಾಗಿದ್ದಾರೆಂಬುದು ತಿಳಿದು ಬಂದಿಲ್ಲ.

No Comments

Leave A Comment