Log In
BREAKING NEWS >
ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಈ ಬಾರಿ ನಡೆಯ ಬೇಕಾದ ಭಜನಾ ಸಪ್ತಾಹ ಮಹೋತ್ಸವವನ್ನು ಕೋವಿಡ್-19ರ ಕಾರಣದಿ೦ದ ಮು೦ದೂಡಲಾಗಿದ್ದು ಭಜನಾ ಸಪ್ತಾಹ ಮಹೋತ್ಸವವನ್ನು 2021ನೇ ವರುಷದ ಮಾರ್ಚನಲ್ಲಿ ನಡೆಯಲಿದೆ...

ಮಂಗಳೂರು: ಕರಾವಳಿಗೆ ‘ಕ್ಯಾರ್ ‘ ಚಂಡಮಾರುತದ ಭೀತಿ

 ಮಂಗಳೂರು: ಅರಬ್ಭಿ ಸಮುದ್ರ ಮತ್ತು ಲಕ್ಷದ್ವೀಪದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು ಇದು ಚಂಡಮಾರುತವಾಗಿ ಪರಿವರ್ತನೆಯಾಗಿದ್ದು, ಪರಿಣಾಮ ಅವಿಭಜಿತ ಜಿಲ್ಲೆಯಲ್ಲಿ 48 ಗಂಟೆಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ಅರಬ್ಭಿ ಸಮುದ್ರ ಪೂರ್ವ ಮಧ್ಯಭಾಗದಲ್ಲಿ ಹುಟ್ಟಿದ ಚಂಡಮಾರುತಕ್ಕೆ “ಕ್ಯಾರ್ ” ಎಂದು ಹೆಸರಿಸಲಾಗಿದೆ. ಅ.25ರವರೆಗೆ ಪೂರ್ವ ಮಧ್ಯದ ಮೂಲಕ ಪೂರ್ವ- ಈಶಾನ್ಯದತ್ತ ಚಲಿಸಲಿದ್ದು, ಆ ನಂತರ ಪಶ್ಚಿಮ ಈಶಾನ್ಯದತ್ತ ಸಾಗಿ ಓಮನ್‌ನತ್ತ ಅಪ್ಪಳಿಸುವ ಸಾಧ್ಯತೆಯಿದೆ. ಇದರ ಪರಿಣಾಮ ಮುಂದಿನ ಎರಡು ದಿನ ಕರ್ನಾಟಕ ಕರಾವಳಿ, ಕೊಂಕಣ ಮತ್ತು ಗೋವಾ ಪ್ರದೇಶದಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮಂಗಳೂರು ನಗರ ಸೇರಿದಂತೆ ಹಲವೆಡೆ ಗುರುವಾರವೆಡೆ ಸಾಧಾರಣದಿಂದ ಉತ್ತಮ ಮಳೆ ಸುರಿದಿದೆ. ಮುಂಜಾಗ್ರತಾ ಕ್ರಮವಾಗಿ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.

No Comments

Leave A Comment