Log In
BREAKING NEWS >
ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಈ ಬಾರಿ ನಡೆಯ ಬೇಕಾದ ಭಜನಾ ಸಪ್ತಾಹ ಮಹೋತ್ಸವವನ್ನು ಕೋವಿಡ್-19ರ ಕಾರಣದಿ೦ದ ಮು೦ದೂಡಲಾಗಿದ್ದು ಭಜನಾ ಸಪ್ತಾಹ ಮಹೋತ್ಸವವನ್ನು 2021ನೇ ವರುಷದ ಮಾರ್ಚನಲ್ಲಿ ನಡೆಯಲಿದೆ...

ಏಷ್ಯನ್ ಪ್ಯಾರಾ ಅರ್ಚರಿ ಚಾಂಪಿಯನ್‍ಶಿಪ್: ವಿವೇಕ್ ಚಿಕಾರಗೆ ಚಿನ್ನ

ಬ್ಯಾಂಕಾಕ್:  ಇಲ್ಲಿ ನಡೆಯುತ್ತಿರುವ ಏಷ್ಯನ್ ಪ್ಯಾರಾ ಅರ್ಚರಿ ಚಾಂಪಿಯನ್‍ಶಿಪ್ ನ ಪುರುಷರ ರಿಕರ್ವ್ ಓಪನ್ ವಿಭಾಗದಲ್ಲಿ ಭಾರತದ ವಿವೇಕ್ ಚಿಕಾರ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ.

29ರ ಪ್ರಾಯದ ಚಿಕಾರ ಅವರು 7-1 ಅಂತರದಲ್ಲಿ ಚೀನಾದ ಸಿಜುನ್ ವಾಂಗ್ ವಿರುದ್ಧ ಗೆದ್ದು ಚಾಂಪಿಯನ್ ಆಗಿ ಹೊರಹೊಮ್ಮಿದರು. ಇವರ ಚಿನ್ನದ ಪದಕದ ಸಾಧನೆಗೆ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಅವರು  ಟ್ವೀಟ್ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.

ಪ್ರಸಕ್ತ ವರ್ಷದ ಆರಂಭದಲ್ಲಿ ನಡೆದಿದ್ದ ವಿಶ್ವ ಪ್ಯಾರಾ ಕ್ರೀಡಾಕೂಟದ ಪುರುಷರ ರಿಕರ್ವ್ ಓಪನ್ ನಲ್ಲಿ ವಿವೇಕ್ ಚಕಾರ ಅವರು ಒಂಬತ್ತನೇ ಸ್ಥಾನ ಪಡೆಯುವ ಮೂಲಕ 2020ರ ಟೋಕಿಯೊ ಒಲಿಂಪಿಕ್ಸ್ ಗೆ ಟಿಕೆಟ್ ಪಡೆದುಕೊಂಡಿದ್ದಾರೆ. ಟೋಕಿಯೊ ಒಲಿಂಪಿಕ್ಸ್ ರಿಕರ್ವ್ ಓಪನ್ ಸ್ಫರ್ಧೆಗೆ ಒಟ್ಟು 10 ಸ್ಥಾನಗಳಿರುತ್ತವೆ. ಇದರಲ್ಲಿ ಪುರುಷ ಹಾಗೂ ಮಹಿಳೆಯರಿಗೆ ತಲಾ ಎರಡು ಸ್ಥಾನ ನೀಡಲಾಗಿರುತ್ತದೆ.

No Comments

Leave A Comment