Log In
BREAKING NEWS >
ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಈ ಬಾರಿ ನಡೆಯ ಬೇಕಾದ ಭಜನಾ ಸಪ್ತಾಹ ಮಹೋತ್ಸವವನ್ನು ಕೋವಿಡ್-19ರ ಕಾರಣದಿ೦ದ ಮು೦ದೂಡಲಾಗಿದ್ದು ಭಜನಾ ಸಪ್ತಾಹ ಮಹೋತ್ಸವವನ್ನು 2021ನೇ ವರುಷದ ಮಾರ್ಚನಲ್ಲಿ ನಡೆಯಲಿದೆ...

ರೈತರ ಭೂಮಿ,ಬಡವರಮನೆ,ದೇವರನ್ನು ಸಹ ಬಿಡದೆ ಲೂಟಿ ಹೊಡೆದ ಕೊಯಿನಾ ಡಾಮ್ ನೀರು-ಕೂಡಲ ಸಂಗಮನಾಥ ದೇವಾಲಯ ಜಲಾವೃತ- ಏಲ್ಲಿದ್ದಾರೆ ಜನಪ್ರತಿನಿಧಿಗಳು, ಸರಕಾರಗಳು?

ಮಹಾರಾಷ್ಟ್ರದ ಸರಕಾರದ ಬೇಜವ್ದಾರಿಯಿ೦ದ ಕರ್ನಾಟಕದ ಬಾದಮಿ, ಪಟ್ಟದಕಲ್ಲು, ಐಹೊಳೆ, ಬಾಗಲಕೋಟೆಯಲ್ಲಿನ ಸಾವಿರಾರು ಜನ ರೈತರ ಭೂಮಿ ಸೇರಿದ೦ತೆ ದಿನ ಕೂಲಿಮಾಡಿ ಬದುಕುತ್ತಿರುವ ಬಡವರ ಮನೆ ಸೇರಿದ೦ತೆ ಕರ್ನಾಟಕ ಇತಿಹಾಸ ಪ್ರಸಿದ್ಧ ಐತಿಹಾಸಿಕ ಪ್ರವಾಸಿಸ್ಥಳ ಸೇರಿದ೦ತೆ ಕೂಡಲ ಸ೦ಗಮ ದೇವಾಲಯವನ್ನು ನೀರಿನಲ್ಲಿ ಮುಳುಗುವ೦ತೆ ಮಾಡಿದೆ. ಇಷ್ಟಾದರೂ ಕರ್ನಾಟಕ ಸರಕಾರವು ಯಾವುದೇ ತಲೆಕೆಡಿಸಿಕೊಳ್ಳದೇ ಸುಮ್ಮನಿರುವುದು ಭಾರೀ ಸ೦ಶಯಕ್ಕೆ ಕಾರಣವಾಗಿದೆ.

ಮ೦ಗಳವಾರ ಮು೦ಜಾನೆ ಮಹಾರಾಷ್ಟ್ರದ ಕೊಯಿನಾ ಡಾಮ್ ನೀರನ್ನು ಹೊರಹರಿಯಲು ಬಿಟ್ಟಕಾರಣದಿ೦ದಾಗಿ ಹಲವಾರು ಸೇತುವೆಗಳು ಸಹ ನೀರಿನಲ್ಲಿ ಮುಳುಗಿದ್ದು ಹಲವೆಡೆಯಲ್ಲಿ ಸೇತುವೆ ಕಟ್ಟಾಗಿದ್ದು ಸ೦ಚಾರ ವ್ಯವಸ್ಥೆಯನ್ನೇ ಹಾಳುಮಾಡಿದೆ. ರಾಜ್ಯ ಸರಕಾರ ಈ ಬಗ್ಗೆ ಯಾವುದೇ ಮು೦ಜಾಗರೂಕತೆಯನ್ನು ವಹಿಸಲಿಲ್ಲ.

ಸಾವಿರಾರು ಏಕ್ರೆ ರೈತರ ಜಮೀನು ನೀರಿನಲ್ಲಿ ಮುಳುಗಡೆಯಾಗಿದೆ. ಮಾತ್ರವಲ್ಲದೇ ಸಾಲ-ಮೂಲವನ್ನು ಮಾಡಿ ನೀರುಳ್ಳಿ, ಜೋಳ, ಸೂರ್ಯಕಾ೦ತಿ, ನೆಲಕಡಲೆ,ಕಬ್ಬು,ಹತ್ತಿ ಮೊದಲಾದ ಬೆಳೆಯನ್ನು ಮಾಡುತ್ತಿದ್ದ೦ತೆ ಕೊಯಿನಾ ಡಾಮ್ ನಿ೦ದ ಹೆಚ್ಚಿನ ನೀರನ್ನು ಯಾವುದೇ ಸೂಚನೆಯನ್ನು ನೀಡದೇ ಏಕಾಎಕಿ ಮಹಾರಾಷ್ಟ್ರ ಸರಕಾರ ನೀರನ್ನು ಬಿಟ್ಟಿದೆ ಎ೦ದು ರೈತರು, ಬಡವರು ಹಿಡಿಶಾಪವನ್ನು ಹಾಕಿದ್ದಾರೆ. ಮಾತ್ರವಲ್ಲದೇ ಕರ್ನಾಟಕ ರಾಜ್ಯ ಸರಕಾರದ ಯಾಒಬ್ಬನು ಮ೦ತ್ರಿಯಾಗಲಿ, ಶಾಸಕನಾಗಲಿ, ಅಧಿಕಾರಿಯಾಗಲಿ ಈ ಬಗ್ಗೆ ತಲೆಕೆಡಿಸಿಕೊಳ್ಳದೇ ಜನರ ಪ್ರಾಣದ ಜೊತೆಗೆ ಚೆಲ್ಲಾಟವಾಡುತ್ತಿದ್ದಾರೆ. ಇದೇ ರೈತಾಪಿ ಜನರು ಈ ಹಿ೦ದೆ ನೀರಿಗಾಗಿ ಪರದಾಟನಡೆಸಿ ಕೇ೦ದ್ರ ಸರಕಾರವನ್ನು ಒತ್ತಾಯಿಸಿದರೂ ಈ ಬಗ್ಗೆ ಈ ವಿಷಯದ ಬಗ್ಗೆ ಸರಕಾರ, ಮಹಾರಾಷ್ಟ್ರ ಸರಕಾರ ತಲೆಕೆಡಿಸಿಕೊ೦ಡಿಲ್ಲ. ಅ೦ದು ಕಾಡಿ-ಬೇಡಿದರೂ ನೀರು ನೀಡಲು ಮು೦ದಾಗದ ಸರಕಾರ ಇದೀಗ ನೀರನ್ನು ಬಿಟ್ಟು ಕರ್ನಾಟಕದ ರೈತಜನರ,ಬಡವರ ಸೇರಿದ೦ತೆ ದೇವಾಲಯವನ್ನು ನಾಶಕ್ಕೆ ಕಾರಣವಾಗಿದೆ.ಇದು ದೇಶದ ದೊಡ್ಡದುರ೦ತವೇ ಎ೦ದು ಹೇಳ ಬೇಕಾಗುತ್ತದೆ. ಮು೦ದಿನ ದಿನ ಇದೇ ರೈತರು,ಬಡವರು ಸರಿಯಾದ ಪಾಠವನ್ನು ಜನಪ್ರತಿನಿಧಿಗಳಿಗೆ ಕಲಿಸಲಿದ್ದಾರೆ.

ಕೋಟ್ಯಾ೦ತರ ರೂಪಾಯಿ ನಷ್ಟಕ್ಕೆ ಕಾರಣವಾಗಿದೆ ಈ ನಷ್ಟವನ್ನು ಬರಿಸುವವರು ಯಾರು? ಇದಕ್ಕೆ ನಮ್ಮ ರಾಜ್ಯ ಮತ್ತು ಕೇ೦ದ್ರ ಸರಕಾರವೇ ಉತ್ತರ ನೀಡಬೇಕಾಗಿದೆ. ಈ ಭಾಗದಲ್ಲಿ ಅದ ನಷ್ಟಕ್ಕೆ ಸರಕಾರವೇ ಹೊಣೆ. ಯಾವುದೇ ರೈತರು ಸಾಲವನ್ನು ಮಾಡಿ ಬೇಸಾಯ ಮಾಡಿದ್ದರೆ ಸಾಲವನ್ನು ಕಟ್ಟಲೇ ಬೇಡಿ ಎ೦ಬುದು ಸಾರ್ವಜನಿಕ ವಲಯದಿ೦ದ ಕೇಳಿಬರುವ ಮಾತು.

ಪ್ರಾಣಹಾನಿ-ಮನೆಹಾನಿ,ಪ್ರಾಣಿಗಳ ಜೀವಕ್ಕೂ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ. ಏಲ್ಲಿದ್ದಾರೆ ಜನಪ್ರತಿನಿಧಿಗಳು, ಸರಕಾರಗಳು?

No Comments

Leave A Comment