Log In
BREAKING NEWS >
ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಈ ಬಾರಿ ನಡೆಯ ಬೇಕಾದ ಭಜನಾ ಸಪ್ತಾಹ ಮಹೋತ್ಸವವನ್ನು ಕೋವಿಡ್-19ರ ಕಾರಣದಿ೦ದ ಮು೦ದೂಡಲಾಗಿದ್ದು ಭಜನಾ ಸಪ್ತಾಹ ಮಹೋತ್ಸವವನ್ನು 2021ನೇ ವರುಷದ ಮಾರ್ಚನಲ್ಲಿ ನಡೆಯಲಿದೆ...

ಲಂಡನ್: ಟ್ರಕ್ ಕಂಟೈನರ್ ನಲ್ಲಿ 39 ಶವಗಳು ಪತ್ತೆ, ಚಾಲಕ ಪೊಲೀಸರ ವಶಕ್ಕೆ

ಲಂಡನ್: ಬಲ್ಗೇರಿಯಾದಿಂದ ಆಗಮಿಸಿದ್ದ ಟ್ರಕ್ ಕಂಟೈನರ್ ನಲ್ಲಿ ಬುಧವಾರ 39 ಶವಗಳು ಪತ್ತೆಯಾಗಿರುವ ಘಟನೆ ಲಂಡನ್ ಸಮೀಪ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಎಸ್ಸೆಕ್ಸ್ ಪೊಲೀಸರ ಪ್ರಕಾರ, ಪೂರ್ವ ಲಂಡನ್ ನ ಇಂಡಸ್ಟ್ರೀಯಲ್ ಪಾರ್ಕ್ ನಲ್ಲಿ ಟ್ರಕ್ ಕಂಟೈನರ್ ನಲ್ಲಿ ಪತ್ತೆಯಾಗಿರುವ 39 ಜನರೂ ಸಾವನ್ನಪ್ಪಿದ್ದಾರೆ. ಇದರಲ್ಲಿ 38 ವಯಸ್ಕರ ಹಾಗೂ ಒಂದು ಅಪ್ರಾಪ್ತನ ಶವಗಳು ಇದ್ದಿರುವುದಾಗಿ ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಐರ್ಲ್ಯಾಂಡ್ ನ 25 ವರ್ಷದ ಯುವಕನನ್ನು ಶಂಕೆಯ ಮೇಲೆ ಬಂಧಿಸಲಾಗಿದೆ. ಇದೊಂದು ದುರಂತದ ಘಟನೆ, ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಎಸ್ಸೆಕ್ಸ್ ಪೊಲೀಸ್ ವರಿಷ್ಠಾಧಿಕಾರಿ ಆ್ಯಂಡ್ರ್ಯೂ ಪ್ರಕಟಣೆಯಲ್ಲಿ ಹೇಳಿದ್ದಾರೆ.

No Comments

Leave A Comment