Log In
BREAKING NEWS >
ಅರ್ಧಕ್ಕೆ ನಿಂತ ಪರ್ಕಳ ರಾ. ಹೆದ್ದಾರಿ ಕಾಮಗಾರಿ: ಅಂಗಡಿ, ಮನೆಯೊಳಗೆ ಕೆಸರು ನೀರು....

ಬೆಳ್ಳಂಬೆಳಗ್ಗೆ ಶೂಟೌಟ್; ಮೂವರು ಸರಗಳ್ಳರು ದೆಹಲಿ ಪೊಲೀಸರ ವಶಕ್ಕೆ

ನವದೆಹಲಿ:ದೆಹಲಿಯ ಜನನಿಭಿಡ ಕನೌಟ್ ಮತ್ತು ಶಂಕರ್ ಮಾರ್ಕೆಟ್ ಪ್ರದೇಶದಲ್ಲಿ ದೆಹಲಿ ಪೊಲೀಸರು ಶೂಟೌಟ್ ನಡೆಸುವ ಮೂಲಕ ಮೂವರು ಸರಗಳ್ಳರನ್ನು ಸೆರೆ ಹಿಡಿದಿರುವ ಘಟನೆ ಬುಧವಾರ ನಡೆದಿದೆ.

ಸರಣಿ ಸರಗಳ್ಳತನ ರಾಕೆಟ್ ನಡೆಸುತ್ತಿದ್ದ ಕೃತ್ಯದಲ್ಲಿ ಭಾಗಿಯಾಗಿದ್ದಾರೆಂದು ಶಂಕಿಸಿರುವ ಮೂವರು ಕ್ರಿಮಿನಲ್ಸ್ ಗಳನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ ಎಂದು ವರದಿ ತಿಳಿಸಿದೆ.

ಶಂಕಿತ ಸರಗಳ್ಳರನ್ನು ಬಂಧಿಸಲು ಹೋದ ಸಂದರ್ಭದಲ್ಲಿ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಇದಕ್ಕೆ ಪ್ರತಿಯಾಗಿ ಪೊಲೀಸರು ಸರಗಳ್ಳರ ಎಡಕಾಲಿಗೆ ಗುಂಡು ಹೊಡೆದು ಮೂವರನ್ನು ಬಂಧಿಸಿರುವುದಾಗಿ ವರದಿ ವಿವರಿಸಿದೆ.

ಸರಗಳ್ಳರನ್ನು ಮೊಹಮ್ಮದ್ ಇಸ್ಮಾಯಿಲ್, ಸಲೀಂ ಹಾಗೂ ಸಾವುದ್ ಎಂದು ಗುರುತಿಸಲಾಗಿದೆ. ರಾಜಧಾನಿಯಲ್ಲಿ ಮೊಬೈಲ್ ಫೋನ್ ಹಾಗೂ ಹಲವಾರು ಸರಗಳ್ಳತನ ಪ್ರಕರಣಗಳಲ್ಲಿ ಈ ಮೂವರು ಶಾಮೀಲಾಗಿದ್ದು, ಈ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

No Comments

Leave A Comment