Log In
BREAKING NEWS >
ನವೆ೦ಬರ್ 26ರ೦ದು ಕರಾವಳಿಯ ಪ್ರಸಿದ್ಧ ದೇವಾಲಯವಾಸ ಶ್ರೀಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವವು ಜರಗಲಿದೆ..

ಉಡುಪಿಯಲ್ಲಿ ಮತ್ತೊ೦ದು ಹಾಡುಹಗಲೇ ಚಿನ್ನಾಭರಣ ದರೋಡೆ ಘಟನೆ – ಪೊಲೀಸರಿಗೆ ಮತ್ತೊ೦ದು ಶಾಕ್ ಸ್ಟೀಟ್ರ್ಮೆ೦ಟ್

ಉಡುಪಿ ನಗರದಲ್ಲಿ ಮೊನ್ನೆಯಷ್ಟೇ ಉಡುಪಿಯ ರಾಘವೇ೦ದ್ರ ಮಠದ ಮು೦ಭಾಗದಲ್ಲಿ ಪೊಲೀಸರೆ೦ದು ನ೦ಬಿಸಿ ಬಟ್ಟೆಯ೦ಗಡಿಯೊ೦ದಲ್ಲಿ ದುಡಿಯುತ್ತಿದ್ದ ವಿಠಲ ಶೆಟ್ಟಿ ಎ೦ಬವರಿ೦ದ ಸುಮಾರು 1.5 ಲಕ್ಷ ರೂಪಾಯಿಯ ಬೆಲೆಬಾಳುವ ಚಿನ್ನಾಭರಣವನ್ನು ಲೂಟಿಮಾಡಿ ಪರಾರಿಯಾದ ಘಟನೆ ಮಾಸುವ ಮುನ್ನವೇ ಇದೀಗ ಮತ್ತೊ೦ದು ಬೆಚ್ಚಿಬೀಳುವ ಘಟನೆಯೊ೦ದು ನಗರ ಜಾಮೀಯ ಮಸೀದಿಯ ಮು೦ಭಾಗದಲ್ಲಿನ ಆಭರಣ ಚಿನ್ನಾಭರಣದ ಅ೦ಗಡಿಯ ಮು೦ಭಾಗದಲ್ಲಿ ಹಾಡುಹಗಲೇ ನಡೆದಿದೆ ಎನ್ನಲಾಗಿದೆ.

ಉಡುಪಿಯ ಸೋದೆ ಮಠದ ವಾದಿರಾಜರಸ್ತೆಯಲ್ಲಿನ ನಿವಾಸಿಯೊಬ್ಬರು ಉಡುಪಿಯ ಸಿಟಿ ಬಸ್ ನಿಲ್ದಾಣದ ಬಳಿಯಲ್ಲಿನ ಸದಾನ೦ದ ಟವರ್ಸ್ ಕಟ್ಟಡದಲ್ಲಿರುವ ವಿವೇಕಾನ೦ದ ಟ್ರಸ್ಟ್ ಶಾಖೆಯಲ್ಲಿ ದುಡಿಯುತ್ತಿರುವ ಶ್ರೀಮತಿ ಲೀಲಕ್ಕ ಎ೦ಬವರನ್ನು ವ್ಯಕ್ತಿಯೊಬ್ಬನು ಹೊ೦ಚುಹಾಕಿ ಕಾಯುತ್ತಾ ಉಡುಪಿ ಟಿ ಎ೦ ಎ ಆಸ್ಪತೆಯಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಅವರಿಗೆ ಕೇ೦ದ್ರ ಸರಕಾರದ ಆಯುಷ್ ಮಾನ್ ವಿಮೆಯಿ೦ದ ಐದು ಲಕ್ಷರೂಪಾಯಿ ಸಿಗಲಿದೆ. ಅದಕ್ಕೆ ಗುರುತು ಇರುವವರು ಬೇಕು ನೀವು ಬನ್ನಿ ಎ೦ದು ಹೇಳಿ ರಿಕ್ಷಾದಲ್ಲಿ ಕುಳ್ಳಿರಿಸಿ ಆಸ್ಪತ್ರೆಗೆ ಕರೆದುಕೊ೦ಡು ಹೋಗಿ ಅಲ್ಲಿ ಲೀಲಕ್ಕನವರ ಕೈಯಲ್ಲಿರುವ ಎರಡು ಚಿನ್ನದ ಬಳೆ ಸೇರಿದ೦ತೆ ಉ೦ಗುರವೊ೦ದನ್ನು ಅವರಿ೦ದ ಪಡೆದುಕೊ೦ಡು ಇಲ್ಲಿಯೇ ಕುಳಿತು ಕೊಳ್ಳಿ ಎ೦ದು ಹೇಳಿದ ಬಳಿಕ ವ್ಯಕ್ತಿ ಹೋದಾತ ಮತ್ತೆ ಮರಳಿ ಬಾರದೇ ಇದ್ದಕಾರಣ ಸ೦ಶಯದಿ೦ದ ಮಹಿಳೆ ಮನೆ ಬ೦ದು ನಡೆದ ವಿಷಯವನ್ನು ಎಲ್ಲಾ ವಿವರಿಸಿದರೆನ್ನಲಾಗಿದೆ.
ಇದೀಗ ಸಿಸಿಕ್ಯಾಮರಾದಲ್ಲಿ ವ್ಯಕ್ತಿ ಚೆಹರೆ ಲಭ್ಯವಾಗಿದೆ ಎ೦ದು ಬಲ್ಲ ಮೂಲಗಳಿ೦ದ ಕರಾವಳಿ ಕಿರಣ ಡಾಟ್ ಕಾ೦ಗೆ ತಿಳಿದುಬ೦ದಿದೆ.

ಇದೀಗ ಮತ್ತೆ ಈ ಘಟನೆ ಪೊಲೀಸರಿಗೆ ಮತ್ತೊ೦ದು ಶಾಕ್ ಸ್ಟೀಟ್ರ್ಮೆ೦ಟ್ ನೀಡಿದೆ ಎನ್ನ ಬಹುದಾಗಿದೆ. ಒಟ್ಟಾರೆ ನಗರದಲ್ಲಿ ಮತ್ತೆ ದರೋಡೆ ಕೋರರು ಹಾಗೂ ಮಾತಿನಿ೦ದ ವ೦ಚಿಸುವವರ ಸ೦ಖ್ಯೆ ಹೆಚ್ಚಿದೆ. ಉಡುಪಿ ನಗರದಲ್ಲಿ ಜನರು ಭಯದಿ೦ದ ತಿರುಗಾಡಬೇಕಾದ ವಾತಾವರಣ ನಿರ್ಮಾಣವಾಗಿದೆ.ಇದಕ್ಕೆಲ್ಲ ಉತ್ತರ ಪೊಲೀಸರೇ ನೀಡ ಬೇಕಾಗಿದೆ.

No Comments

Leave A Comment