Log In
BREAKING NEWS >
ಉಡುಪಿಯ ಕಲ್ಸoಕದಲ್ಲಿನ ರಾಯಲ್ ಗಾರ್ಡನಲ್ಲಿ ಡಿ 3 ರಿ೦ದ ಉಡುಪಿ ಉತ್ಸವ ಆರ೦ಭಗೊಳ್ಳಲಿದೆ......ನವೆ೦ಬರ್ 26ರ೦ದು ಕರಾವಳಿಯ ಪ್ರಸಿದ್ಧ ದೇವಾಲಯವಾಸ ಶ್ರೀಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವವು ಜರಗಲಿದೆ........ಉಡುಪಿಯಲ್ಲಿ ಡಿಸೆ೦ಬರ್ 13ರಿ೦ದ 15 ವರೆಗೆ ಶ್ರೀಕೃಷ್ಣಮಠದ ರಾಜಾ೦ಗಣದಲ್ಲಿ ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವಸಮ್ಮೇಳನ ಜರಗಲಿದೆ....

ಬಾರಿ ಮಳೆಗೆ ಕುಸಿದ ರಸ್ತೆ, ಪೆರ್ಡೂರು ಹರಿಖಂಡಿಗೆ ಸಂಪರ್ಕ ಕಡಿತ

ಹೆಬ್ರಿ: ಮಂಗಳವಾರ ಸುರಿದ ಭಾರೀ ಮಳೆಯಿಂದ ಉಡುಪಿ ಜಿಲ್ಲೆಯ ಬೈರಂಪಳ್ಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಹರಿಖಂಡಿಗೆ – ಪೆರ್ಡೂರು ರಸ್ತೆಯು ದೂಪದಕಟ್ಟೆಯ ಬಳಿ ಜನರ ಕಣ್ಣೆದುರೇ ಸಂಪೂರ್ಣ ಕೊಚ್ಚಿ ಹೋಗಿದ್ದು, ಸಂಪರ್ಕ ಕಡಿತಗೊಂಡಿದೆ.

ರಸ್ತೆಯ ಎರಡೂ ಮಗ್ಗಲುಗಳಲ್ಲಿ ಗದ್ದೆಗಳಿದ್ದು, ಭಾರೀ ಮಳೆಯಿಂದ ಗುಡ್ಡದ ನೀರು ಗದ್ದೆಗೆ ವೇಗವಾಗಿ ಹರಿದ ಪರಿಣಾಮ ರಸ್ತೆಯ ಅಡಿಭಾಗದಲ್ಲಿದ್ದ ಮೋರಿ ಕೊಚ್ಚಿ ಹೋಗಿ ಸಮಾರು 5 ಅಡಿಗಳಷ್ಟು ರಸ್ತೆ ಕುಸಿದು ಬಿದ್ದಿದೆ.

ತಪ್ಪಿದ ಭಾರೀ ಅನಾಹುತ
ರಸ್ತೆ ಕುಸಿಯುವ ಮುನ್ಸೂಚನೆ ಗೊತ್ತಾದ ಕಾರಣ ಸ್ಥಳದಲ್ಲಿ ಜಮಾಯಿಸಿ, ವಾಹನ ಮತ್ತು ಜನರನ್ನು ಸಂಚರಿಸಲು ಬಿಡದೆ ಮುನ್ನೆಚ್ಚರಿಕೆ ವಹಿಸಿದ್ದರಿಂದ ಅನಾಹುತ ತಪ್ಪಿದಂತಾಗಿದೆ.

ಗದ್ದೆಗೆ ನುಗ್ಗಿದ ನೀರು; ಅಪಾರ ಬೆಳೆ ಹಾನಿ
ಭಾರೀ ಮಳೆಯಿಂದ ನೀರು ನುಗ್ಗಿ ಬೈರಂಪಳ್ಳಿ ಪ್ರದೇಶದಲ್ಲಿ ಸುಮಾರು 25 ಎಕ್ರೆ ಗದ್ದೆಗಳಿಗೆ ಹಾನಿಯಾಗಿದೆ. ಕಟಾವಾದ ಬೆಳೆ ನೀರಿನಲ್ಲಿ ಕೊಚ್ಚಿ ಹೋಗಿ ಅಪಾರ ನಷ್ಟ ಸಂಭವಿಸಿದೆ. ಭತ್ತ ಕಟಾವು ಮಾಡಿ ಗದ್ದೆಯಲ್ಲಿ ಇತ್ತು, ಒಂದೇ ಸಮನೆ ಬಂದ ಮಳೆಯಿಂದ ಭತ್ತದ ಸೂಡಿಗಳು ಕೊಚ್ಚಿ ಹೋಗಿವೆ ಎಂದು ಕೃಷಿಕರೊರ್ವರು “ಉದಯವಾಣಿ’ಗೆ ತಿಳಿಸಿದ್ದಾರೆ.

ಆವರಣ ಗೋಡೆ ಕುಸಿತ
ಮಳೆಯಿಂದ ಸಂತ್ಯಾರು ಮಹಾಲಿಂಗೇಶ್ವರ ದೇವಸ್ಥಾನದ ಆವರಣ ಗೋಡೆ ಕುಸಿದು ಬಿದ್ದಿದೆ. ಬೈರಂಪಳ್ಳಿ ಗ್ರಾ.ಪಂ. ಅಧ್ಯಕ್ಷ ಸದಾಶಿವ ಪೂಜಾರಿ, ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

No Comments

Leave A Comment