Log In
BREAKING NEWS >
ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಈ ಬಾರಿ ನಡೆಯ ಬೇಕಾದ ಭಜನಾ ಸಪ್ತಾಹ ಮಹೋತ್ಸವವನ್ನು ಕೋವಿಡ್-19ರ ಕಾರಣದಿ೦ದ ಮು೦ದೂಡಲಾಗಿದ್ದು ಭಜನಾ ಸಪ್ತಾಹ ಮಹೋತ್ಸವವನ್ನು 2021ನೇ ವರುಷದ ಮಾರ್ಚನಲ್ಲಿ ನಡೆಯಲಿದೆ...

ಕಾಸರಗೋಡು ಬಳಿ ಟ್ಯಾಂಕರ್ ಪಲ್ಟಿ: ಅನಿಲ ಸೋರಿಕೆ

ಕಾಸರಗೋಡು: ಮಂಗಳೂರು-ಕಾಸರಗೋಡು ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದ್ದು ಕಾಸರಗೋಡು ನಗರದಿಂದ ಒಂದು ಕಿಮೀ ದೂರದಲ್ಲಿ ಅಡ್ಕತ್ ಬೈಲ್ ನಲ್ಲಿ ಟ್ಯಾಂಕರ್ ಲಾರಿ ಮಗುಚಿ ಅನಿಲ ಸೋರಿಕೆಯಾಗಿದೆ.

ಇಂದು ಮುಂಜಾವು ಮೂರುವರೆ ಗಂಟೆಗೆ ಅಪಘಾತ ನಡೆದಿದ್ದು ಅಸುಪಾಸು ಪ್ರದೇಶದ ಕುಟುಂಬಗಳನ್ನು ತೆರವುಗೊಳಿಸುವುದರ ಜೊತೆಗೆ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಸ್ಥಳೀಯ ಜನರಿಗೆ ಎಚ್ಚರಿಕೆಯ ಸಂದೇಶ ನೀಡಲಾಗಿದೆ.

ಮಧ್ಯಾಹ್ನದ ತನಕ ಹೆದ್ದಾರಿಯಲ್ಲಿ ವಾಹನ ಸಂಚಾರ ತಡೆಯಿಡಿಯಲಾಗಿದ್ದು . ಬೇರೆ ಮಾರ್ಗದ ಮೂಲಕ ಸಂಚರಿಸಲು ಅನುವು ಮಾಡಿಕೊಡಲಾಗಿದೆ.  ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ  ಬಂದಿದ್ದು, ತಾತ್ಕಲಿಕವಾಗಿ ಅನಿಲ ಸೋರಿಕೆ ತಡೆಹಿಡಿದ , ಇನ್ನೊಂದು ಟ್ಯಾಂಕರ್ ಗೆ ತುಂಬಿಸಲಾಗುತ್ತಿದೆ.

No Comments

Leave A Comment