Log In
BREAKING NEWS >
ದಾವಣಗೆರೆ ಮಹಾನಗರ ಪಾಲಿಕೆ: ಬಿಜೆಪಿಗೆ ಅಧಿಕಾರದ ಚುಕ್ಕಾಣಿ.....ಟಿ20 ವಿಶ್ವಕಪ್‌ ಅಭ್ಯಾಸ ಪಂದ್ಯ : ಭಾರತ ವನಿತೆಯರಿಗೆ ರೋಚಕ ಗೆಲುವು...

ವಿಜಯ್ ಯಾರು ಅಂತಾ ನನಗೆ ಗೊತ್ತೆ ಇಲ್ಲ: ಬಿರುಗಾಳಿ ಎಬ್ಬಿಸಿದ ತಮನ್ನಾ ಹೇಳಿಕೆ!

ತಮಿಳಿನ ಇಳೈ ದಳಪತಿ ವಿಜಯ್ ಯಾರು ಅಂತಾ ನನಗೆ ಗೊತ್ತಿಲ್ಲ ಎಂದು ನಟಿ ತಮನ್ನಾ ಭಾಟಿಯಾ ನೀಡಿರುವ ಹೇಳಿಕೆ ಇದೀಗ ಬಿರುಗಾಳಿ ಎಬ್ಬಿಸಿದ್ದು ವಿಜಯ್ ಅಭಿಮಾನಿಗಳು ತಮನ್ನಾ ವಿರುದ್ಧ ತಿರುಗಿ ಬಿದ್ದಿದ್ದಾರೆ.

ತಮನ್ನಾ ಅಭಿನಯದ ಪೆಟ್ರೋಮ್ಯಾಕ್ಸ್ ಚಿತ್ರದ ಪ್ರಚಾರದ ವೇಳೆ ವಿಜಯ್ ಕುರಿತು ತಮನ್ನಾ ಭಾಟಿಯಾ ಹೇಳಿಕೆ ನೀಡಿದ್ದು ದಳಪತಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಪ್ರಚಾರ ಕಾರ್ಯಕ್ರಮದ ವೇಳೆ ವಿಜಯ್ ಕುರಿತು ಹೇಳಿ ಎಂದಾಗ ನಾನು ವಿಜಯ್ ಜೊತೆ ನಟಿಸುವಾಗ ಬಹಳ ಚಿಕ್ಕವಳು. ಆ ಚಿತ್ರದಲ್ಲಿ ನನ್ನದು ಸಣ್ಣ ಪಾತ್ರ. ನಾನೊಬ್ಬ ಅಭಿಮಾನಿಯಂತೆ ನಟಿಸಿದ್ದೆ. ಹೆಚ್ಚಾಗಿ ಮಾತನಾಡುತ್ತಿರಲಿಲ್ಲ. ನಿಜ ಹೇಳಬೇಕು ಅಂದರೆ ಅವರ ಬಗ್ಗೆ ನನಗೆ ಹೆಚ್ಚಾಗಿ ಗೊತ್ತಿಲ್ಲ. ಹೀಗಾಗಿ ನಾನು ಅವರ ಬಗ್ಗೆ ಹೆಚ್ಚಾಗಿ ಹೇಳಲು ಸಾಧ್ಯವಿಲ್ಲ ಎಂದಿದ್ದರು.

ಇದಕ್ಕೆ ವಿಜಯ್ ಅಭಿಮಾನಿಗಳು ಗರಂ ಆಗಿದ್ದು ಒಂದು ಕಾಲದಲ್ಲಿ ಎಂಜಿ ರಾಮಚಂದ್ರನ್, ಶಿವಾಜಿ, ಆ ಬಳಿಕ ಸೂಪರ್ ಸ್ಟಾರ್ ರಜನಿಕಾಂತ್, ಕಮಲ್ ಹಾಸನ್… ಈಗ ವಿಜಯ್ ಆ ಕ್ರೇಜ್ ಹೊಂದಿದ್ದಾರೆ. ಅಂತ ವಿಜಯ್ ಜೊತೆ ಸಿನಿಮಾವೊಂದರಲ್ಲಿ ನಟಿಸಿದ್ದು ಅವರು ನನಗೆ ಗೊತ್ತಿಲ್ಲ ಎಂದು ಹೇಳುವುದು ಸರಿಯಿಲ್ಲ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

No Comments

Leave A Comment