Log In
BREAKING NEWS >
ದಾವಣಗೆರೆ ಮಹಾನಗರ ಪಾಲಿಕೆ: ಬಿಜೆಪಿಗೆ ಅಧಿಕಾರದ ಚುಕ್ಕಾಣಿ.....ಟಿ20 ವಿಶ್ವಕಪ್‌ ಅಭ್ಯಾಸ ಪಂದ್ಯ : ಭಾರತ ವನಿತೆಯರಿಗೆ ರೋಚಕ ಗೆಲುವು...

59ನೇ ಅಥ್ಲೇಟಿಕ್ಸ್ ಚಾಂಪಿಯನ್ ಶಿಪ್: ದ್ಯುತಿಗೆ ಡಬಲ್ ಸ್ವರ್ಣ

ರಾಂಚಿ: ಸ್ಟಾರ್ ಓಟಗಾರ್ತಿ ದ್ಯುತಿ ಚಾಂದ್ ಅವರು 59ನೇ ಅಥ್ಲೇಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದು, ಎರಡು ಸ್ವರ್ಣ ಪದಕ ಗೆದ್ದು ಸಾಧನೆ ಮಾಡಿದ್ದಾರೆ.

ದ್ಯುತಿ ಅವರು 200 ಮೀಟರ್ 23.17 ಸೆಕೆಂಡ್ ಗಳಲ್ಲಿ ಕ್ರಮಿಸಿ ಚಿನ್ನ ಗೆದ್ದರು. ಇದು ಪ್ರಸಕ್ತ ಋತುವಿನಲ್ಲಿ ದ್ಯುತಿ ಅವರು ವೇಗವಾಗಿ ಕ್ರಮಿಸಿದರು. ದ್ಯುತಿ ಅವರು 100 ಮೀಟರ್ ನಲ್ಲಿ ರಾಷ್ಟ್ರೀಯ ದಾಖಲೆ ಬರೆದು, 200 ಮೀಟರ್ ಓಟವನ್ನೂ ಸಹ ಮೊದಲಿಗರಾಗಿ ಗೆದ್ದು ಬೀಗಿದ್ದಾರೆ.

ಕಾರ್ತಿಕ್ ಉನ್ನೀಕೃಷ್ಣ ಅವರು ತಮ್ಮ ಕೊನೆಯ ಪ್ರಯತ್ನದಲ್ಲಿ 16.78 ಮೀಟರ್ ಜಿಗಿದು ಸ್ವರ್ಣ ಗೆದ್ದರು. ಚಿಂತಾ ಯಾದವ್ 3000 ಮೀಟರ್ ಓಟದಲ್ಲಿ 10 ನಿಮಿಷ 11.70 ಸೆಕೆಂಡ್ ಗಳಲ್ಲಿ ಕ್ರಮಿಸಿದರು. ರೈಲ್ವೆಯ ಪಿಯು ಚಿತ್ರಾ 1500 ಮೀಟರ್ ಹಾಗೂ 800 ಮೀಟರ್ ನಲ್ಲಿ ಚಿನ್ನ ಗೆದ್ದರು.

No Comments

Leave A Comment