Log In
BREAKING NEWS >
ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಈ ಬಾರಿ ನಡೆಯ ಬೇಕಾದ ಭಜನಾ ಸಪ್ತಾಹ ಮಹೋತ್ಸವವನ್ನು ಕೋವಿಡ್-19ರ ಕಾರಣದಿ೦ದ ಮು೦ದೂಡಲಾಗಿದ್ದು ಭಜನಾ ಸಪ್ತಾಹ ಮಹೋತ್ಸವವನ್ನು 2021ನೇ ವರುಷದ ಮಾರ್ಚನಲ್ಲಿ ನಡೆಯಲಿದೆ...

ಖಿನ್ನತೆಯಿಂದ ಬಳಲುತ್ತಿದ್ದ ದಂಪತಿ ನೇಣಿಗೆ ಶರಣು

ಶಿವಮೊಗ್ಗ: ಖಿನ್ನತೆಯಿಂದ ಬಳಲುತ್ತಿದ್ದ ದಂಪತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಭದ್ರಾವತಿ ತಾಲೂಕಿನ ಆಗರದಳ್ಳಿ ಕ್ಯಾಂಪ್ ನಲ್ಲಿ ರವಿವಾರ ಸಂಜೆ ನಡೆದಿದೆ.

ಸಂತೋಷ (32) ಹಾಗೂ ಪಾರ್ವತಿ (27) ಮೃತರು.

ಕಳೆದ ಒಂದುವರೆ ವರ್ಷದ ಹಿಂದೆ ಮದುವೆಯಾಗಿದ್ದ ಇವರಿಬ್ಬರು ರವಿವಾರ ಸಂಜೆ ಭೂಮಿ ಹುಣ್ಣಿಮೆ ಹಬ್ಬ ಆಚರಿಸಲು ತಾವೇ ಅಡುಗೆ ಸಿದ್ಧಪಡಿಸಿದ್ದರು. ನಂತರ ಮನೆಯವರನ್ನು ಗದ್ದೇಗೆ ಕಳುಹಿಸಿ ಗಂಡ ಹೆಂಡತಿ ಮನೆಯಲ್ಲಿ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೈದಿದ್ದಾರೆ.

ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No Comments

Leave A Comment