Log In
BREAKING NEWS >
ಉಡುಪಿಯ ಕಲ್ಸoಕದಲ್ಲಿನ ರಾಯಲ್ ಗಾರ್ಡನಲ್ಲಿ ಡಿ 3 ರಿ೦ದ ಉಡುಪಿ ಉತ್ಸವ ಆರ೦ಭಗೊಳ್ಳಲಿದೆ......ನವೆ೦ಬರ್ 26ರ೦ದು ಕರಾವಳಿಯ ಪ್ರಸಿದ್ಧ ದೇವಾಲಯವಾಸ ಶ್ರೀಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವವು ಜರಗಲಿದೆ........ಉಡುಪಿಯಲ್ಲಿ ಡಿಸೆ೦ಬರ್ 13ರಿ೦ದ 15 ವರೆಗೆ ಶ್ರೀಕೃಷ್ಣಮಠದ ರಾಜಾ೦ಗಣದಲ್ಲಿ ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವಸಮ್ಮೇಳನ ಜರಗಲಿದೆ....

ವೈವಿಧ್ಯಮಯ ಅಂಚೆ ಚೀಟಿಗಳ ಅನಾವರಣ – “ಕರ್ನಾಪೆಕ್ಸ್‌-2019′ ಅಂಚೆ ಚೀಟಿ ಪ್ರದರ್ಶನಕ್ಕೆ ಚಾಲನೆ

ಮಹಾನಗರ: ಅಂಚೆ ಚೀಟಿಗಳನ್ನು ಸಂಗ್ರಹಿಸುವ ಹವ್ಯಾಸ ಅನೇಕರಿ ಗಿರುತ್ತದೆ. ಅವರಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಮಂಗಳೂರಿನ ಟಿಎಂಎ ಪೈ ಕನ್ವೆನ್ಶನ್‌ ಸೆಂಟರ್‌ನಲ್ಲಿ ಅ. 12ರಿಂದ 15ರ ವರೆಗೆ ಕರ್ನಾಟಕ ಅಂಚೆ ವೃತ್ತದ ವತಿಯಿಂದ ಆಯೋಜಿಸಿದ್ದ “ಕರ್ನಾಪೆಕ್ಸ್‌ -2019′ ರಾಜ್ಯ ಮಟ್ಟದ ಅಂಚೆ ಚೀಟಿಗಳ ಪ್ರದರ್ಶನದ ಮೊದಲ ದಿನ ನೂರಾರು ಮಂದಿ ಭಾಗವಹಿಸಿ, ಅಂಚೆ ಚೀಟಿಗಳ ಬಗ್ಗೆ ಮಾಹಿತಿ ಕಲೆಹಾಕಿದರು.

ಕರ್ನಾಟಕದ ಸುಮಾರು 250ಕ್ಕೂ ಹೆಚ್ಚಿನ ಮಂದಿ ಅಂಚೆ ಚೀಟಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಒಟ್ಟಾರೆ 600 ಪ್ರೇಮ್‌ಗಳಲ್ಲಿ ಸುಮಾರು 9 ಸಾವಿರಕ್ಕೂ ಮಿಕ್ಕಿ ಅಂಚೆ ಚೀಟಿಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಅಂಚೆ ಇಲಾಖೆಯ ವತಿಯಿಂದ ಸುಮಾರು 30 ಪ್ರೇಮ್‌ಗಳಲ್ಲಿ ಕೆಲವೊಂದು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಬಳಸಿದಂತಹ ಅಂಚಿ ಚೀಟಿಗಳು ಪ್ರದರ್ಶನಕ್ಕೆ ಇದ್ದವು. ವಿವಿಧ ಶಾಲೆಗಳ ವಿದ್ಯಾರ್ಥಿಗಳು ಕೂಡ ಆಗಮಿಸಿ ಅಂಚೆ ಚೀಟಿಗಳ ಮಾಹಿತಿ ಕಲೆಹಾಕುತ್ತಿದ್ದರು.

ಥೀಮ್‌ ಆಧಾರಿತ ಅಂಚೆ ಚೀಟಿ ಪ್ರದರ್ಶನ
ಬುದ್ಧಿಸಂ, ಭೂತಾನ್‌ ದೇಶದ ಕಥೆ ಮತ್ತು ಅಂಚೆಚೀಟಿಗಳು, ಸೌತ್‌ ಪೆಸಿಫಿಕ್‌ ಬರ್ಡ್‌ ಲೈಫ್‌, ಪರಂಪರೆ, ಹೂವುಗಳು, ಸ್ಟ್ಯಾಂಪ್ ಆ್ಯಂಡ್‌ ಸ್ಟೇಷನರೀಸ್‌ ಆನ್‌ ಗಾಂಧೀ, ಬಾಳೆಹಣ್ಣು, ಭಾರತೀಯ ಸ್ವಾತಂತ್ರ್ಯ ಪೂರ್ವ, ವಿವಿಧ ದೇಶಗಳ ಅಂಚೆ ಚೀಟಿ, ಪೋರ್ಚು ಗೀಸರ ಕಾಲದ ಅಂಚೆ ಚೀಟಿಗಳು ಪ್ರದರ್ಶನದಲ್ಲಿದ್ದವು.

ಎಕ್ಸ್‌ಪ್ರೆಸ್‌ ಡೆಲಿವರೀ ಸರ್ವಿಸ್‌, ಸೈಕ್ಲಿಂಗ್‌, ನಮ್ಮ ಕರ್ನಾಟಕ, ಹೆಲ್ತ್‌ ಕೇರ್‌, ದಿ ಬ್ಲಾಕ್‌ ಗೋಲ್ಡ್‌, ಡೈನೋಸರ್, ಸೋಲರ್‌ ಸಿಸ್ಟಮ್‌, ಪರಿಸರ, ಭಾರತೀಯ ರಾಜಪ್ರಭುತ್ವ ರಾಜ್ಯಗಳು, ಸೈನ್ಯದ ಅಂಚೆ ಲಕೋಟೆ, ಫುಟ್‌ಬಾಲ್‌, ಸಂಗೀತ ಪರಿಕರಗಳು, ಭಾರತೀಯ ಸ್ವಾತಂತ್ರ್ಯ, ಹುಲಿ, ಪಾರಿವಾಳ, ಸಾರಿಗೆ, ಕರ್ನಾಟಕದ ಮೇರು ವ್ಯಕ್ತಿಗಳು, ವಿಮಾನದ ಅಂಚೆ, ಬ್ರಿಟೀಷ್‌ ಇಂಡಿಯಾ ಸಹಿತ ಸುಮಾರು 150ಕ್ಕೂ ಮಿಕ್ಕಿ ಥೀಮ್‌ಗಳನ್ನು ಹೊಂದಿರುವ ಅಂಚೆ ಚೀಟಿಗಳು ಪ್ರದರ್ಶನಗೊಂಡವು.

ಈವರೆಗೆ ರಾಜ್ಯ ಮಟ್ಟದ 11 ಕರ್ನಾಪೆಕ್ಸ್‌ ಗಳು ನಡೆದಿವೆ. ಒಟ್ಟು ಒಂಬತ್ತು ವರ್ಷ ಕಾರ್ಯಕ್ರಮಗಳು ಬೆಂಗಳೂರಿನಲ್ಲಿ ನಡೆ ದಿದ್ದು, ಉಳಿದಂತೆ ಮೈಸೂರು, ಧಾರವಾಡ ದಲ್ಲಿ ನಡೆದಿದೆ. ಇದೀಗ 12ನೇ ರಾಜ್ಯ ಮಟ್ಟದ ಕಾರ್ಯಕ್ರಮ ಮಂಗಳೂರಿನ ಟಿಎಂಎ ಪೈ ಕನ್ವೆನ್ಶನ್‌ ಸೆಂಟರ್‌ನಲ್ಲಿ ನಡೆಯುತ್ತಿದೆ.

ಅಂಚೆ ಲಕೋಟೆ ಬಿಡುಗಡೆ
ಕರ್ನಾಪೆಕ್ಸ್‌ ಅಂಚೆ ಚೀಟಿ ಉದ್ಘಾಟನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನ್ಯಾ| ಸಂತೋಷ್‌ ಹೆಗ್ಡೆ, ಮೈಕಲ್‌ ಬಿ. ಫೆರ್ನಾಂಡಿಸ್‌, ವಿಶ್ವಪವನ್‌ ಪತಿ, ಸಾವಿಯೊ ಮಸ್ಕರೇನ್ಹಸ್‌, ಚಾಲ್ಸ್‌ ಲೋಬೋ ಅವರು ದಿವಂಗತ ಜಾರ್ಜ್‌ ಫೆರ್ನಾಂಡಿಸ್‌, ಅನಂತ್‌ ಪೈ (ಅಮರ ಚಿತ್ರ ಕಥಾ ಖ್ಯಾತಿಯ ಅಂಕಪ್‌ ಪೈ, ಗಿರೀಶ್‌ ಕಾರ್ನಾಡ್‌ ಅವರ ಅಂಚೆ ಲಕೋಟೆಯನ್ನು ಬಿಡುಗಡೆಗೊಳಿಸಿದರು. ಜತೆಗೆ ದ.ಕ., ಉಡುಪಿ ಜಿಲ್ಲೆಯ ಪಾರಂಪರಿಕ ಸ್ಥಳಗಳ ಅಂಚೆ ಚೀಟಿಗಳನ್ನೂ ಬಿಡುಗಡೆಗೊಳಿಸಲಾಯಿತು.

ಇಂದೇನಿದೆ?
ರಾಜ್ಯ ಮಟ್ಟದ ಅಂಚೆ ಚೀಟಿ “ಕರ್ನಾಪೆಕ್ಸ್‌’ನಲ್ಲಿ ಅ. 13ರಂದು ಮಟ್ಟು ಗುಳ್ಳ, ಶಂಕರಪುರ ಮಲ್ಲಿಗೆ, ಯುಫ್ಲಿಕ್ಟಿಸ್‌ ಅಲೋಸಿ ವಿಶೇಷ ಅಂಚೆ ಲಕೋಟೆಗಳು ಬಿಡುಗಡೆಗೊಳ್ಳಲಿವೆ. ಶಾಶ್ವತ ಚಿತ್ರ ಸಹಿತ ಅಂಚೆ ಮೊಹರು ಬಿಡುಗಡೆಗೊಳ್ಳಲಿದೆ. “ಅಂಚೆ ಚೀಟಿಯಲ್ಲಿ ಕನ್ನಡ ಅಕ್ಷರ ಮಾಲೆ’ ಎಂಬ ಪುಸ್ತಕ ಬಿಡುಗಡೆಗೊಳ್ಳಲಿದೆ. ಹಿರಿಯ ಅಂಚೆ ಸಂಗ್ರಾಹಕ ಎಂ.ಕೆ. ಕೃಷ್ಣಪ್ಪ ಅವರಿಗೆ ಸಮ್ಮಾನ ಕಾರ್ಯಕ್ರಮ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌, ಸೈಂಟ್‌ ಅಲೋಶಿಯಸ್‌ ಕಾಲೇಜಿನ ಪ್ರಾಣಿಶಾಸ್ತ್ರ ವಿಭಾಗದ ಪ್ರೊ| ಡಾ| ಹರೀಶ್‌ ಜೋಶಿ ಭಾಗವಹಿಸಲಿದ್ದಾರೆ.

No Comments

Leave A Comment