Log In
BREAKING NEWS >
ಕೊರೋನಾ ವೈರಸ್: ಸಾವಿನ ಸಂಖ್ಯೆ 80ಕ್ಕೆ ಏರಿಕೆ: ಭಾರತೀಯರು ಸೋಂಕುವಿಗೆ ತುತ್ತಾಗಿಲ್ಲ: ಎಂಇಎ...

ಕಾಪು: ಇಬ್ಬರು ಕುಖ್ಯಾತ ಸರಗಳ್ಳರ ಬಂಧನ

ಕಾಪು: ಇನ್ನಂಜೆ ಗ್ರಾಮದಲ್ಲಿ ಇತ್ತೀಚೆಗೆ ನಡೆದಿದ್ದ ಮಹಿಳೆಯೋರ್ವರ ಸರಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಕಾಪು ಪೊಲೀಸರು ಬಂಧಿಸಿದ್ದಾರೆ.

ಕೃಷ್ಣ ನರಸಿಂಹ ಶಾಸ್ತ್ರೀ (27) ಮತ್ತು ವಿಜಯ್ ಕುಮಾರ್ (21) ಬಂಧಿತ ಆರೋಪಿಗಳು.

ಇತ್ತೀಚೆಗೆ ಇನ್ನಂಜೆ ಗ್ರಾಮದ ಮೂಡುಮನೆಯ ಶಾಂತಾ ಆಚಾರ್ಯ ಅವರು ದನಗಳಿಗೆ ಹುಲ್ಲು ತರಲೆಂದು ಹೋಗುತ್ತಿದ್ದ ಸಮಯದಲ್ಲಿ ಇಬ್ಬರು ಆರೋಪಿಗಳು ಬೈಕ್ ನಲ್ಲಿ ಬಂದು ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಎಗರಿಸಿ ಹೋಗಿದ್ದರು. ಈ ಸಂಬಂಧ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಬಂಧಿತ ಆರೋಪಿಗಳಲ್ಲಿ ಕೃಷ್ಣ ನರಸಿಂಹ ಶಾಸ್ತ್ರಿ ಮಟ್ಟು ಗ್ರಾಮದ ಪಳ್ಲುಗುಡ್ಡೆಯಲ್ಲಿ ವಾಸವಾಗಿದ್ದು, ಮೂಲತಃ ರಾಯಚೂರು ಜಿಲ್ಲೆಯವನಾಗಿದ್ದಾನೆ. ಮತ್ತೋರ್ವ ಆರೋಪಿ ವಿಜಯ್ ಕುಮಾರ್ ಬಾಗಲಕೋಟೆ ಮೂಲದವನು ಎಂದು ತಿಳಿದುಬಂದಿದೆ.

ಆಶರೋಪಿಗಳಿಂದ ಕದ್ದಿದ್ದ 50 ಸಾವಿರ ಮೌಲ್ಯದ ಚಿನ್ನದ ಸರ, ಹೊಂಡಾ ಶೈನ್ ಬೈಕ್, ಹತ್ತು ಸಾವಿರ ನಗದನ್ನು ವಶಪಡಿಸಲಾಗಿದೆ.

No Comments

Leave A Comment