Log In
BREAKING NEWS >
ದಾವಣಗೆರೆ ಮಹಾನಗರ ಪಾಲಿಕೆ: ಬಿಜೆಪಿಗೆ ಅಧಿಕಾರದ ಚುಕ್ಕಾಣಿ.....ಟಿ20 ವಿಶ್ವಕಪ್‌ ಅಭ್ಯಾಸ ಪಂದ್ಯ : ಭಾರತ ವನಿತೆಯರಿಗೆ ರೋಚಕ ಗೆಲುವು...

ಬಾಲಿವುಡ್ ನಟಿ ಅಮಿಷಾ ಪಟೇಲ್ ವಿರುದ್ಧ ಬಂಧನ ವಾರಂಟ್ ಜಾರಿ

ರಾಂಚಿ: ಬಾಲಿವುಡ್ ನಟಿ ಅಮಿಷಾ ಪಟೇಲ್ ಗೆ ಬಂಧನ ಭೀತಿ ಶುರುವಾಗಿದ್ದು, ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿಯ ವಿರುದ್ಧ ಬಂಧನ ವಾರಂಟ್ ಜಾರಿಯಾಗಿದೆ.

ಚೀಟಿಂಗ್​ ಮತ್ತು ಚೆಕ್​ ಬೌನ್ಸ್​ ಪ್ರಕರಣವೊಂದರಲ್ಲಿ ಅಮೀಷಾ ವಿರುದ್ಧ ರಾಂಚಿ ಕೋರ್ಟ್​ ಅರೆಸ್ಟ್​ ವಾರೆಂಟ್​ ಹೊರಡಿಸಿದೆ. ರಾಂಚಿ ಡಿಸ್ಟ್ರಿಕ್ಟ್​ ಕೋರ್ಟ್​​ನಲ್ಲಿ ಕಳೆದ ವರ್ಷ ಅಜಯ್​ ಕುಮಾರ್​ ಸಿಂಗ್​ ಎಂಬುವವರು ನಟಿ ವಿರುದ್ಧ ದೂರು ನೀಡಿದ್ದರು. ಇದರನ್ವಯ ಅರೆಸ್ಟ್​ ವಾರೆಂಟ್​ ಜಾರಿಯಾಗಿದೆ ಅಂತಾ ರಾಂಚಿ ಪೊಲೀಸರು ಹೇಳಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ ನಟಿ ಅಮೀಷಾ ಪಟೇಲ್​ ಮತ್ತು ಆಕೆಯ ಬ್ಯುಸಿನೆಸ್​ ಪಾರ್ಟ್ನರ್ ಕುನಾಲ್​ ಎನ್ನುವವರು ಚಿತ್ರ ನಿರ್ಮಿಸುವುದಾಗಿ ನನ್ನ ಬಳಿ 2.50ರೂ ಕೋಟಿ ಸಾಲ ಪಡೆದಿದ್ದರು. ಆಗ ಈ ಸಿನಿಮಾ 2018ಕ್ಕೆ ರಿಲೀಸ್​ ಆಗುತ್ತೆ. ನಂತರ ನಾವು ನಿಮಗೆ ನಿಮ್ಮ ಹಣವನ್ನು ನೀಡುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ ಆ ಸಿನಿಮಾ ರಿಲೀಸ್​ ಆಗಲೇ ಇಲ್ಲ.

ಈ ಬಗ್ಗೆ ಅವರನ್ನ ಅಪ್ರೋಚ್​ ಮಾಡಿದಾಗ ನಟಿ ನನಗೆ 3 ಕೋಟಿ ರೂ ಚೆಕ್​ವೊಂದನ್ನು ನೀಡಿದ್ದರು, ಅದು ಬೌನ್ಸ್​ ಆಗಿದೆ. ಅಲ್ಲದೆ ನಟಿ ಮತ್ತು ಕುನಾಲ್​ ಇಬ್ರು ನನ್ನ ಪೋನ್​ ಕರೆ​ಗಳನ್ನು ನಿರ್ಲಕ್ಷಿಸತೊಡಗಿದರು. ಈ ಬಗ್ಗೆ ನಾನು ಉತ್ತರಿಸುವಂತೆ ಲೀಗಲ್​ ನೊಟೀಸ್​ ಕೂಡ ನೀಡಿದ್ದೆ. ಅದಕ್ಕೂ ಆಕೆ ಉತ್ತರಸಿದ ಕಾರಣ ನಾನು ದೂರು ಕೊಟ್ಟೆ ಎಂದು ಅಜಯ್ ಆರೋಪಿಸಿದ್ದಾರೆ.

No Comments

Leave A Comment