Log In
BREAKING NEWS >
ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಈ ಬಾರಿ ನಡೆಯ ಬೇಕಾದ ಭಜನಾ ಸಪ್ತಾಹ ಮಹೋತ್ಸವವನ್ನು ಕೋವಿಡ್-19ರ ಕಾರಣದಿ೦ದ ಮು೦ದೂಡಲಾಗಿದ್ದು ಭಜನಾ ಸಪ್ತಾಹ ಮಹೋತ್ಸವವನ್ನು 2021ನೇ ವರುಷದ ಮಾರ್ಚನಲ್ಲಿ ನಡೆಯಲಿದೆ...

ತನ್ನ ಚಾಕರಿ ಮಾಡುತ್ತಿದ್ದವರನ್ನೇ ತಿವಿದ ದೈವಸ್ಥಾನದ ಬಸವ: ವ್ಯಕ್ತಿ ಸಾವು

ಬಜಪೆ: ಇಲ್ಲಿನ ಪೆರಾರ ಕಿನ್ನಿಮಜಲು ನಾಗಬ್ರಹ್ಮ ಶಾಸ್ತ ಬಲವಂಡಿ ದೇವ ದೈವಸ್ಥಾನದಲ್ಲಿ ಚಾಕರಿ ಮಾಡುತ್ತಿದ್ದ ಬಾಲಕೃಷ್ಣ ಶೆಟ್ಟಿ ಎಂಬವರು ದೈವಸ್ಥಾನದ ಬಸವ ಹಾಯ್ದು ಸಾವನ್ನಪ್ಪಿದ ಘಟನೆ ನಡೆದಿದೆ.

ಪೆರಾರ ಪುಣ್ಕೆದಡಿ ನಿವಾಸಿ ಬಾಲಕೃಷ್ಣ ಶೆಟ್ಟಿ (52) ಮೃತಪಟ್ಟವರು.

ಬಾಲಕೃಷ್ಣ ಶೆಟ್ಟಿಯವರೆ ಕಳೆದ ಒಂದ ವರ್ಷದಿಂದ ಬಸವನ ಚಾಕರಿ ಮಾಡುತ್ತಿದ್ದರು. ಶುಕ್ರವಾರ ಸಂಜೆ ಅದಕ್ಕೆ ಹುಲ್ಲು ಹಾಕಲು ಹೋದ ಸಂದರ್ಭ ಬಸವ ಕೊಂಬಿನಿಂದ ತಿವಿದಿದ್ದ ಎಂದು ತಿಳಿದು ಬಂದಿದೆ. ತಲೆ ಭಾಗಕ್ಕೆ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

No Comments

Leave A Comment