Log In
BREAKING NEWS >
ಕೊರೋನಾ ವೈರಸ್: ಸಾವಿನ ಸಂಖ್ಯೆ 80ಕ್ಕೆ ಏರಿಕೆ: ಭಾರತೀಯರು ಸೋಂಕುವಿಗೆ ತುತ್ತಾಗಿಲ್ಲ: ಎಂಇಎ...

ಬಾವಿಯಲ್ಲಿ ಯುವಕನ ಶವ ಪತ್ತೆ

ಉಲ್ಲಾಳ: ಪಿಲಾರು ಲಕ್ಷ್ಮೀ ಗುಡ್ಡೆ ಮನೆಯೊಂದರ ಬಾವಿಯಲ್ಲಿ ಯುವಕನ ಶವವೊಂದು  ಪತ್ತೆಯಾಗಿದ್ದು ಮೃತ ಯುವಕನನ್ನು ಚರಣ್ ರಾಜ್  (25) ಎಂದು ಗುರುತಿಸಲಾಗಿದೆ.

ತೋಟದ ಬಾವಿಗೆ ಬಿದ್ದು ಕುಂಪಲ ಆಶ್ರಯ ಕಾಲೊನಿ ನಿವಾಸಿ ಚರಣ್ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಇಲೆಕ್ಟ್ರೀಷಿಯನ್ ವೃತ್ತಿ ನಡೆಸುತ್ತಿದ್ದ ಚರಣ್ ಮೃತದೇಹ ಇಂದು ಬೆಳಿಗ್ಗೆ ಪಿಲಾರು ಲಕ್ಷ್ಮೀಗುಡ್ಡೆಯ ಶ್ರೀಧರ್ ಆಳ್ವ ಎಂಬವರ ತೋಟದ ಬಾವಿಯಲ್ಲಿ ಪತ್ತೆಯಾಗಿತ್ತು. ಕಾಲು ಜಾರಿ ಬಿದ್ದಿರುವುದೋ, ಆತ್ಮಹತ್ಯೆ ಅಥವಾ ಕೊಲೆಯೋ ಎನ್ನುವ ಕುರಿತು ಉಳ್ಳಾಲ ಪೊಲೀಸರು ತನಿಖೆ ಆರಂಭಿಸಿದ್ದಾರೆ

ಉಳ್ಳಾಲ ಠಾಣಾ ವ್ಯಾಪ್ತಿಯ ಪಿಲಾರಿನಲ್ಲಿ ಘಟನೆ ನಡೆದಿದೆ.

No Comments

Leave A Comment