Log In
BREAKING NEWS >
ಅರ್ಧಕ್ಕೆ ನಿಂತ ಪರ್ಕಳ ರಾ. ಹೆದ್ದಾರಿ ಕಾಮಗಾರಿ: ಅಂಗಡಿ, ಮನೆಯೊಳಗೆ ಕೆಸರು ನೀರು....

ಮಲೇಶ್ಯಾದಿಂದ ಬಂದವರ ಬ್ಯಾಗ್ ನಲ್ಲಿತ್ತು ಹೆಬ್ಬಾವು ಹಲ್ಲಿಗಳು: ಚೆನ್ನೈನಲ್ಲಿ ಇಬ್ಬರ ಬಂಧನ

ಚೆನ್ನೈ: ಕೌಲಾಲಾಂಪುರ್ ದಿಂದ ಚೆನ್ನೈಗೆ ಗುರುವಾರ ವಿಮಾನದಲ್ಲಿಳಿದ ಇಬ್ಬರ ಬ್ಯಾಗ್ ಗಳನ್ನು ಪರಿಶೀಲಿಸಿದ ಅಧಿಕಾರಿಗಳಿಗೆ ಆಘಾತವೊಂದು ಕಾದಿತ್ತು. ಯಾಕೆಂದರೆ ಅವರ ಬ್ಯಾಗ್ ನಲ್ಲಿ ಇದ್ದಿದ್ದು ಬಟ್ಟೆ ಬರೆಗಳಲ್ಲ, ಬದಲಾಗಿ ಹೆಬ್ಬಾವುಗಳು ಮತ್ತು ಹಲ್ಲಿಗಳು!

ಸರಿಸೃಪಗಳನ್ನು ಸಾಗಿಸುತ್ತಿದ್ದ ಇಬ್ಬರನ್ನು ಅಧಿಕಾರಿಗಳು ಬಂಧಿಸಿದ್ದಾರೆ. ರಾಮನಾಥಪುರಂ ಜಿಲ್ಲೆಯ ಮೊಹಮ್ಮದ್ ಪರ್ವೇಜ್ (36) ಮತ್ತು ಶಿವಗಂಗಾ ಜಿಲ್ಲೆಯ ಮೊಹಮ್ಮದ್ ಅಕ್ಬರ್ (28) ಬಂಧಿತರು.

ಎರಡು ಹಸಿರು ಹೆಬ್ಬಾವುಗಳು ಮತ್ತು 14 ವಿವಿಧ ಜಾತಿಯ ಹಲ್ಲಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಅಕ್ರಮ ಸಾಗಾಣಿಕೆಯ ಖಚಿತ ಮಾಹಿತಿ ಪಡೆದಿದ್ದ ಅಧಿಕಾರಿಗಳು ಪ್ರಯಾಣಿಕರನ್ನು ಜಾಗರೂಕತೆಯಿಂದ ಪರಿಶೀಲಿಸುತ್ತಿದ್ದರು. ಆ ವೇಳೆ ಇ ಇಬ್ಬರ ಚಲನವಲನದಲ್ಲಿ ಅನುಮಾನ ಬಂದು ಪರಶೀಲನೆ ನಡೆಸಿದಾಗ ಸತ್ಯ ಹೊರಬಿತ್ತು. ಕೌಲಾಲಂಪುರದ ಹೊರವಲಯದಲ್ಲಿ ನಮಗೆ ಈ ಬ್ಯಾಗ್ ಕೊಟ್ಟಿದ್ದು, ಚೈನ್ನಯನ ಹೊರವಲಯದಲ್ಲಿರುವ ವ್ಯಕ್ತಿಯೊಬ್ಬನಿಗೆ ತಲುಪಿಸುವಂತೆ ಹೇಳಲಾಗಿತ್ತು ಎಂದು ವರದಿಯಾಗಿದೆ.

No Comments

Leave A Comment