Log In
BREAKING NEWS >
ಉಡುಪಿಯಲ್ಲಿ ಜೂ. 1ರಿಂದ ಸಿಟಿ ಬಸ್‌ ಸಂಚಾರ....

ಪಾಕ್ ಮಾಜಿ ಪ್ರಧಾನಿ ನವಾಜ್ ಶರಿಫ್ ಬಂಧನ

ಇಸ್ಲಾಮಾಬಾದ್ : ಪಾಕಿಸ್ಥಾನದ ಮಾಜಿ ಪ್ರಧಾನಿ ನವಾಜ್ ಶರೀಫ್ ಅವರನ್ನು ಚೌಧರಿ ಸಕ್ಕರೆ ಕಾರ್ಖನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ. ಶುಕ್ರವಾರ ರಾಷ್ಟ್ರೀಯ ಉತ್ತರದಾಯಿತ್ವ ಬ್ಯೂರೋ ಅಧಿಕಾರಿಗಳು ನವಾಜ್ ಶರೀಫ್ ಅವರನ್ನು ವಶಕ್ಕೆ ಪಡೆದಿದ್ದಾರೆ.

ನವಾಜ್ ಶರೀಫ್ ಅವರನ್ನು ಉತ್ತರದಾಯಿತ್ವ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಅಧಿಕಾರಿಗಳು ಮಾಜಿ ಪ್ರಧಾನಿಯನ್ನು 15 ದಿನ ವಶಕ್ಕೆ ನೀಡುವಂತೆ ಕೊರ್ಟ್ ಗೆ ವಿನಂತಿಸಿದ್ದಾರೆ.

ಶರೀಫ್ ಬಂಧನವಾಗುತ್ತಿದ್ದಂತೆ ಸಾವಿರಾರು ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು ಕೋರ್ಟ್ ಮುಂಭಾಗದಲ್ಲಿ ಜಮೆಗೊಂಡಿದ್ದಾರು ಎಂದು ವರದಿಯಾಗಿದೆ.

No Comments

Leave A Comment