Log In
BREAKING NEWS >
ದಾವಣಗೆರೆ ಮಹಾನಗರ ಪಾಲಿಕೆ: ಬಿಜೆಪಿಗೆ ಅಧಿಕಾರದ ಚುಕ್ಕಾಣಿ.....ಟಿ20 ವಿಶ್ವಕಪ್‌ ಅಭ್ಯಾಸ ಪಂದ್ಯ : ಭಾರತ ವನಿತೆಯರಿಗೆ ರೋಚಕ ಗೆಲುವು...

ಉಡುಪಿಯ ಸೃಷ್ಟಿ ನೃತ್ಯ ಕಲಾ ಕುಟೀರ(ರಿ) ಇದರ ನೃತ್ಯೋತ್ಸವ-2019ಕ್ಕೆ ಪಲಿಮಾರು ಕಿರಿಯ ಶ್ರೀಗಳಿ೦ದ ಚಾಲನೆ

ಉಡುಪಿ: ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಪಲಿಮಾರು ಮಠದ ಆಶ್ರಯದಲ್ಲಿ ಉಡುಪಿಯ ಸೃಷ್ಟಿ ನೃತ್ಯ ಕಲಾ ಕುಟೀರ(ರಿ) ಇದರ ನೃತ್ಯೋತ್ಸವ-2019 ಕಾರ್ಯಕ್ರಮವನ್ನು ಪಲಿಮಾರು ಕಿರಿಯ ಮಠಾಧೀಶರಾದ ಶ್ರೀ ವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿಯವರು ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಶ್ರೀಮತಿ ತುಳಸಿ ದೇವಾಡಿಗ, ಶ್ರೀ ಅಣ್ಣಯ್ಯ ಶೇರಿಗಾರ್, ಮೇಜರ್ ಜಿ.ಸಿ.ರಾಜಶೇಖರ್, ಶ್ರೀ ಎಂ.ಎಸ್.ವಿಷ್ಣು , ಶ್ರೀಮತಿ ಪದ್ಮಲತಾ ಎಂ. ಹಾಗು ವಿದುಷಿ ಡಾ. ಮಂಜರಿ ಚಂದ್ರ ಪುಷ್ಪರಾಜ್ ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಂಗವಾಗಿ ಕು.ಜೇತ್ರ ಮೈಯ್ಯ ಇವರಿಂದ ನೃತ್ಯಭಿಕ್ರಮ (ಸೋಲೊ) ನೃತ್ಯ ಕಾರ್ಯಕ್ರಮ ನಡೆಯಿತು.ಗಾಯನದಲ್ಲಿ ವಿದ್ವಾನ್ ಬಾಲಸುಬ್ರಮಣ್ಯಂ ಶರ್ಮ, ಮ್ರಿದಂಗಂನಲ್ಲಿ ವಿದ್ವಾನ್ ಜನಾರ್ಧನ್ ರಾವ್, ಕೊಳಲಿನಲ್ಲಿ ವಿದ್ವಾನ್ ನಿತೀಶ್ ಅಮ್ಮಣ್ಣಯ್ಯ ಹಾಗು ನಟುವಾಂಗದಲ್ಲಿ ಗುರು ವಿದುಷಿ ಡಾ.ಮಂಜರಿ ಚಂದ್ರ ಪುಷ್ಪರಾಜ್ ಸಹಕರಿಸಿದರು.

No Comments

Leave A Comment