Log In
BREAKING NEWS >
ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಈ ಬಾರಿ ನಡೆಯ ಬೇಕಾದ ಭಜನಾ ಸಪ್ತಾಹ ಮಹೋತ್ಸವವನ್ನು ಕೋವಿಡ್-19ರ ಕಾರಣದಿ೦ದ ಮು೦ದೂಡಲಾಗಿದ್ದು ಭಜನಾ ಸಪ್ತಾಹ ಮಹೋತ್ಸವವನ್ನು 2021ನೇ ವರುಷದ ಮಾರ್ಚನಲ್ಲಿ ನಡೆಯಲಿದೆ...

ಬೀಗ ರಿಪೇರಿ ಮಾಡುವರನ್ನು ಕರೆಸಿ ದೇವರ ಕೋಣೆ ಲಾಕರ್ ಒಡೆದ ಐಟಿ ಅಧಿಕಾರಿಗಳು!

ಚಿಕ್ಕಬಳ್ಳಾಪುರ: ನಗರದ ಪ್ರಶಾಂತ ನಗರದಲ್ಲಿ ವಾಸವಾಗಿರುವ ಮಾಜಿ ಕೇಂದ್ರ ಸಚಿವ ಆರ್.ಎಲ್.ಜಾಲಪ್ಪ ಸಂಬಂಧಿ ಜಿ.ಹೆಚ್.ನಾಗರಾಜ್ ಮನೆ ಮೇಲೆ ದಾಳಿ ನಡೆಸಿ ತೀವ್ರ ಶೋಧ ಕಾರ್ಯ ಮಾಡುತ್ತಿರುವ ಆದಾಯ ತೆರಿಗೆ ಅಧಿಕಾರಿಗಳು ಮನೆಯಲ್ಲಿರುವ ದೇವರ ಕೊಣೆಯಲ್ಲಿ ಶೋಧ ಕಾರ್ಯ ನಡೆಸುವ ಮೂಲಕ ಜಾಲಪ್ಪ ಕುಟುಂಬಕ್ಕೆ ಶಾಕ್ ಕೊಟ್ಟಿದೆ.

ಬೆಂಗಳೂರಿನಿಂದ ಎರಡು ತಂಡಗಳಲ್ಲಿ ಮೂರು ಕಾರುಗಳಲ್ಲಿ ಆಗಮಿಸಿರುವ ಐಟಿ ಅಧಿಕಾರಿಗಳು ಕೋಲಾರದ ಮೆಡಿಕಲ್ ಕಾಲೇಜು ಕಾರ್ಯದರ್ಶಿಯು ಆಗಿರುವ ಜಿ.ಹೆಚ್.ನಾಗರಾಜ್ ಮನೆಯನ್ನು ಇಂಚಿಂಚು ಬಿಡದೇ ಶೋಧ ನಡೆಸಿದ್ದಾರೆ. ಇದರ ನಡುವೆ ನಾಗರಾಜ್ ಮನೆಯ ದೇವರ ಕೊಣೆಯನ್ನು ಪರಿಶೀಲನೆ ನಡೆಸುತ್ತಿರುವ ಅಧಿಕಾರಿಗಳು, ಮನೆಗೆ ಬೀಗ ರಿಪೇರಿ ಮಾಡುವರನ್ನು ಕರೆಸಿ ದೇವರ ಮನೆಯಲ್ಲಿನ ಲಾಕರ್ ಹೊಡೆದು ಹಲವು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ.

ಮನೆ ಸುತ್ತವರೆದ ಅಧಿಕಾರಿಗಳು

ಪೂರ್ವತಯಾರಿ ಮಾಡಿಕೊಂಡು ದಾಳಿ ನಡೆಸಿರುವ ಐಟಿ ಅಧಿಕಾರಿಗಳು ಕೋಲಾರ, ದೊಡ್ಡಬಳ್ಳಾಪುರ ಹಾಗೂ ಚಿಕ್ಕಬಳ್ಳಾಪುರದಲ್ಲಿ ಮಾಜಿ ಸಂಸದ ಆರ್.ಎಲ್.ಜಾಲಪ್ಪ ಸಂಬಂಧಿಕರ ಮನೆ. ಕಾಲೇಜುಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.  ಚಿಕ್ಕಬಳ್ಳಾಪುರದಲ್ಲಿ ಹೆಚ್.ನಾಗರಾಜ್ ಮನೆಯನ್ನು ಐಟಿ ಅಧಿಕಾರಿಗಳು ಸಂಪೂರ್ಣ ಸುತ್ತವರೆದು ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.

No Comments

Leave A Comment