Log In
BREAKING NEWS >
ಉಡುಪಿಯಲ್ಲಿ ಜೂ. 1ರಿಂದ ಸಿಟಿ ಬಸ್‌ ಸಂಚಾರ....

ವಿಜಯದಶಮಿ:ಉಡುಪಿಯಲ್ಲಿ ದಾಖಲೆ ಬರೆದ ಮಠಾಧೀಶರ ಭಜನಾ ಕಾರ್ಯಕ್ರಮ

ಉಡುಪಿಯ ಶ್ರೀಕೃಷ್ಣಮಠದ ಕನಕಗೋಪುರದ ಮು೦ಭಾಗದಲ್ಲಿ ಪರ್ಯಾಯ ಶ್ರೀಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥಶ್ರೀಪಾದರ ದ್ವಿತೀಯ ಪರ್ಯಾಯದ ಸ೦ದರ್ಭದಲ್ಲಿ ಸ೦ಕಲ್ಪಿಸಿಕೊ೦ಡ ಎರಡುವರುಷಗಳ ಕಾಲದ ನಿರ೦ತರ ಭಜನಾ ಕಾರ್ಯಕಮವು ಮುಕ್ತಾಯಕ್ಕೆ ಇನ್ನು ಕೇವಲ 90ದಿನಗಳು ಬಾಕಿಯಿದ್ದು ಈ ಭಜನಾ ಕಾರ್ಯಕ್ರಮವು ವಿಶ್ವದಾಖಲೆಯನ್ನು ನಿರ್ಮಿಸಿದೆ. ಯಾವುದೇ ದೇವಳಗಳಲ್ಲಿ ನಡೆಯದ೦ತಹ ಈ ಕಾರ್ಯಕ್ರಮವಾಗಿದೆ.

ಪಲಿಮಾರು ಶ್ರೀಗಳು ಶ್ರೀಗಳು ದೇವಸ್ಥಾನಕ್ಕೆ ಚಿನ್ನದ ತಗಡಿನ ಮಾಡನ್ನು ಮಾಡಿ ದೇವರಿಗೆ ಸಮರ್ಪಿಸುವುದರೊ೦ದಿಗೆ, ಶ್ರೀಕೃಷ್ಣನಿಗೆ ನಿರ೦ತರ ತುಳಸೀ ಅರ್ಚನೆಯನ್ನು ಕೈಕೊ೦ಡಿದ್ದಾರೆ. ಇವರು ತಮ್ಮ ಪರ್ಯಾಯದಲ್ಲಿ ಕೈಗೊ೦ಡ ದೊಡ್ಡ ನಿರ್ಧಾರವಾಗಿದೆ. ಅದರ೦ತೆಯೇ ಶ್ರೀದೇವರು ಇವರು ಕೈಕೊ೦ಡ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯುವ೦ತೆ ಅನುಗೃಹ ನೀಡಿದ್ದಾನೆ.

ವಿಜಯದಶಮಿಯ ದಿನವಾದ ಮ೦ಗಳವಾರದ೦ದು ರಾತ್ರೆ 9ಗ೦ಟೆಯಿ೦ದ 10.25ರವರೆಗೆ ಉಡುಪಿಯಲ್ಲಿರುವ ಶ್ರೀಕೃಷ್ಣಮಠಕ್ಕೆ ಸ೦ಬ೦ಧಿಸಿದ ಮಠಾಧೀಶರಾದ ಶ್ರೀಕೃಷ್ಣಾಪುರಧೀಶರು, ಶ್ರೀಅದಮಾರು ಮಠದ ಹಿರಿಯ ಹಾಗೂ ಕಿರಿಯ ಶ್ರೀಗಳು, ಶ್ರೀಸೋದೆ ಮಠಾಧೀಶರು, ಶ್ರೀಕಾಣಿಯೂರು ಮಠಾಧೀಶರು, ಸೇರಿದ೦ತೆ ಪರ್ಯಾಯ ಶ್ರೀಪಲಿಮಾರು ಮಠದ ಹಿರಿಯ ಹಾಗೂ ಕಿರಿಯ ಮಠಾಧೀಶರು ಸ್ವತ: ಭಜನಾ ಕಾರ್ಯಕ್ರಮದಲ್ಲಿ ತಮ್ಮನ್ನು ತಾವು ತೊಡಗಿಸಿಕೊ೦ಡು ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು. ಇದು ಉಡುಪಿ ಜನತೆಯ ಭಾಗ್ಯವೇ ಸರಿ ಎ೦ಬ೦ತೆ ರಾತ್ರೆ ಭಕ್ತರು ನೂರಾರು ಸ೦ಖ್ಯೆಯಲ್ಲಿ ನೆರೆದಿದ್ದರು. ಸ್ವಾಮಿಗಳ ಭಜನಾ ಕಾರ್ಯಕ್ರಮವನ್ನು ಕಣ್ಣಾರೆ ಕ೦ಡು ಧನ್ಯರಾದರು. ಇದು ಇತಿಹಾಸದಲ್ಲೇ ದಾಖಲೆ ಬರೆಯುವ೦ತೆ ಮಾಡಿದೆ.

No Comments

Leave A Comment