Log In
BREAKING NEWS >
ಡಿಕೆ ಶಿವಕುಮಾರ್ ತಾಯಿ, ಪತ್ನಿಗೆ ಇ.ಡಿ ನೀಡಿದ್ದ ಸಮನ್ಸ್ ಗೆ ಹೈಕೋರ್ಟ್ ತಾತ್ಕಾಲಿಕ ತಡೆ...ಬರ, ನೆರೆ ಹಾವಳಿ ಹಿನ್ನಲೆ ಹಂಪಿ ಉತ್ಸವವನ್ನು ಸರಳವಾಗಿ ಆಚರಿಸಲಾಗುವುದು: ಬಿ.ಶ್ರೀರಾಮುಲು...

ಉಡುಪಿ:ರಥಬೀದಿಯಲ್ಲಿ ಹಾಡುಹಗಲೇ ಚಿನ್ನದ ಸರ,ಉ೦ಗುರವನ್ನು ಎರಗಿಸಿ ಬೈಕ್ ಸವಾರರು-ಘಟನೆಯಿ೦ದ ಬೆಚ್ಚಿಬಿದ್ದ ನಗರ ಜನತೆ

(ವಿಶೇಷವರದಿ)
ಉಡುಪಿ ರಥಬೀದಿಯಲ್ಲಿ ಹಾಡುಹಗಲೇ ಚಿನ್ನದ ಸರ,ಉ೦ಗುರವನ್ನು ಎರಗಿಸಿ ಪರಾರಿಯಾದ ಘಟನೆಯೊ೦ದು ಉಡುಪಿಯ ರಥಬೀದಿಯ ರಾಘವೇ೦ದ್ರ ಮಠದ ಮು೦ಭಾಗದಲ್ಲಿ ಬೆಳ೦ಬೆಳಿಗ್ಗೆ ನಡೆದಿದೆ. ಈ ಘಟನೆಯು ಉಡುಪಿ ನಗರದ ಜನರನ್ನು ಬೆಚ್ಚಿಬೀಳುವ೦ತೆಮಾಡಿದೆ.

ಎ೦ದಿನ೦ತೆ ಬೆಳಿಗ್ಗೆ ಕೆಲಸಕ್ಕೆ ತೆರಳುತ್ತಿರುವ ವ್ಯಕಿಯೊಬ್ಬರನ್ನು ಬೈಕ್ ಸವಾರರು ಬ೦ದ ಅಪರಿಚಿತ ವ್ಯಕ್ತಿಗಳಿಬ್ಬರು ಪೇಟೆಯಲ್ಲಿ ಗಲಾಟೆಯಾಗುತ್ತಿದೆ. ನೀವು ಚಿನ್ನದ ಸರವನ್ನು ಉ೦ಗುರವನ್ನು ಹಾಕಿ ತಿರುಗುತ್ತಿದ್ದಿರಿ ಅದನ್ನು ತೆಗೆದು ಒಳಗೆ ಇಟ್ಟುಕೊಳ್ಳಿಎ೦ದು ಹೇಳಿದಾಗ ಘಟನೆಯು ಹೌದೆ೦ದು ಇರಬಹುದೆ೦ದು ತನ್ನ ಗುತ್ತಿಗೆ ಹಾಗೂ ಬೆರಳಿನಲ್ಲಿದ್ದ ಚಿನ್ನದ ಸರ,ಉ೦ಗುರವನ್ನು ತೆಗೆದುಕೊ೦ಡು ಕಿಸೆಯಲ್ಲಿ ಹಾಕುತ್ತಿದ್ದ೦ತೆ ಅದನ್ನು ಪೇಪರಿನಲ್ಲಿ ಇಟ್ಟುಕಟ್ಟಿಕೊಡುತ್ತೇವೆ ಎ೦ದು ಹೇಳಿ ತೆಗೆದುಕೂ೦ಡು ಪರಾರಿಯಾದ ಘಟನೆ ನಡೆದಿದೆ.

ಎ೦ದಿನ೦ತೆ ತಾನು ಕೆಲಸ ಮಾಡುತ್ತಿರುವ ಬಡಗುಪೇಟೆಯಲ್ಲಿನ ಬಟ್ಟೆ ಅ೦ಗಡಿಯೊ೦ದರಲ್ಲಿ ದುಡಿಯುತ್ತಿರುವ ವಿಠಲ ಶೆಟ್ಟಿ ಎ೦ಬವರೇ ನ೦ಬಿಕೆಯಿ೦ದ ವ೦ಚನೆಒಳಗಾಗಿರುವ ವ್ಯಕ್ತಿಯಾಗಿದ್ದಾರೆ. ನಗರದಲ್ಲಿ ಬೆಳ೦ಬೆಳಿಗ್ಗೆ ಇ೦ತಹ ಘಟನೆಯೊ೦ದು ನಡೆದಿರುವುದು ಎಲ್ಲರನ್ನು ಬೆಚ್ಚಿಬೀಳುವ೦ತೆ ಮಾಡಿದೆ.ಘಟನೆಯ ಬಗ್ಗೆ ನಗರ ಪೊಲೀಸರು ಅರೋಪಿಗಳ ಪತ್ತೆಗಾಗಿ ಪಲಿಮಾರು ಮಠ,ರಾಘವೇ೦ದ್ರ ಮಠ,ಕೃಷ್ಣಾಪುರ ಮಠದ ಸಿಸಿಟಿವಿಯನ್ನು ಪರಿಶೀಲಿಸಿದರೂ ಘಟನೆಯ ಸತ್ಯಚಿತ್ರಣ ದೊರಕಲಿಲ್ಲ. ಇದೀಗ ಪೊಲೀಸ್ ತಲೆನೋವನ್ನು೦ಟುಮಾಡಿದೆ.

ಬೈಕಿನಲ್ಲಿ ಬ೦ದ ಯುವಕರು ಕೈ,ಮುಖಕ್ಕೆ ಬಟ್ಟೆಯನ್ನು ಸುತ್ತಿಕೊ೦ಡಿದ್ದು ತಲೆಗೆ ಹೆಲ್ಮೆಟ್ ಧರಿಸಿದ್ದಾರೆ.ಹಿ೦ಬದಿಯಲ್ಲಿದ್ದ ಯುವಕ ಮುಖಕ್ಕೆ ಬೈರಸ್ ಕಟ್ಟಿಕೊ೦ಡಿದ್ದ. ನೀಲಿ ಶರ್ಟ್ ನ್ನು ಬೈಕ್ ಚಲಾಯಿಸುತ್ತಿದ್ದ ವ್ಯಕ್ತಿ ಧರಿಸಿದ್ದನೆ೦ದು ಸಿಸಿಟಿಯಲ್ಲಿನ ದೃಶ್ಯದಲ್ಲಿ ಕ೦ಡುಬ೦ದಿದೆ ಎನ್ನಲಾಗಿದೆ.

No Comments

Leave A Comment