Log In
BREAKING NEWS >
ಅರ್ಧಕ್ಕೆ ನಿಂತ ಪರ್ಕಳ ರಾ. ಹೆದ್ದಾರಿ ಕಾಮಗಾರಿ: ಅಂಗಡಿ, ಮನೆಯೊಳಗೆ ಕೆಸರು ನೀರು....

ಶಿಡ್ಲಘಟ್ಟ ಸಮೀಪ ಅಪಘಾತ: ವಕೀಲ ಸಾವು

ಚಿಕ್ಕಬಳ್ಳಾಪುರ: ಜಿಲ್ಲೆಯ ಶಿಡ್ಲಘಟ್ಟ ಪಟ್ಟಣದ ಚಿಂತಾಮಣಿ ರಸ್ತೆಯ ವೈ.ಹುಣಸೇನಹಳ್ಳಿಶ ಸಮೀಪ ಸೋಮವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಹಿರಿಯ ವಕೀಲ ನೋಟರಿ ನೌಷಾದ್ ಅಲೀ ಮೃತಪಟ್ಟಿದ್ದಾರೆ.

ಶಿಡ್ಲಘಟ್ಟ ನಗರದಿಂದ ಆಂಧ್ರಪ್ರದೇಶದ ಪುಂಗನೂರಿಗೆ ದ್ವಿಚಕ್ರ ವಾಹನದಲ್ಲಿ‌ ತೆರಳುತ್ತಿದ್ದಾಗ ಎದುರುಗಡೆಯಿಂದ‌ ಬಂದ ಟಾಟಾ ಏಸ್ ಡಿಕ್ಕಿ ಹೊಡೆದಿದ್ದರಿಂದ ದ್ವಿಚಕ್ರ ವಾಹನ ಸವಾರ ನೌಷಾದ್ ಅಲೀ ಸ್ಥಳದಲ್ಲಿ ಮೃತಪಟ್ಟಿದ್ದಾರೆ.

ಘಟನಾ ಸ್ಥಳಕ್ಕೆ ಪಿಎಸ್ಐ ಹರೀಶ್, ತಾಲೂಕು ವಕೀಲರ‌ ಸಂಘದ ಪದಾಧಿಕಾರಿಗಳು,ನೌಷಾದ ಅಲೀ ಅವರ ಪತ್ನಿ ನಿವೃತ್ತ ಸಿಡಿಪಿಓ ತಾಜುನ್ನೀಸಾ ಹಾಗೂ ಪುತ್ರಿ ನ್ಯಾಯಾಧೀಶರಾಗಿರುವ‌ ಚಾಂದಿನಿ ಮತ್ತಿತರರು ಭೇಟಿ ನೀಡಿದರು.

ರಸ್ತೆ ಅಪಘಾತದ ನಂತರ ಟಾಟಾ ಏಸ್ ಚಾಲಕ‌ ನಾಪತ್ತೆಯಾಗಿದ್ದಾನೆ. ಈ ಕುರಿತು ಶಿಡ್ಲಘಟ್ಟ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No Comments

Leave A Comment