Log In
BREAKING NEWS >
ಡಿಕೆ ಶಿವಕುಮಾರ್ ತಾಯಿ, ಪತ್ನಿಗೆ ಇ.ಡಿ ನೀಡಿದ್ದ ಸಮನ್ಸ್ ಗೆ ಹೈಕೋರ್ಟ್ ತಾತ್ಕಾಲಿಕ ತಡೆ...ಬರ, ನೆರೆ ಹಾವಳಿ ಹಿನ್ನಲೆ ಹಂಪಿ ಉತ್ಸವವನ್ನು ಸರಳವಾಗಿ ಆಚರಿಸಲಾಗುವುದು: ಬಿ.ಶ್ರೀರಾಮುಲು...

ದಸರಾ ಸಂಭ್ರಮ: ಅರಮನೆಯಲ್ಲಿ ಕಳೆಗಟ್ಟಿದ ಆಯುಧ ಪೂಜೆ ಸಂಭ್ರಮ

ಮೈಸೂರು: ರಾಜ್ಯದಾದ್ಯಂತ ಇಂದು ಆಯುಧ ಪೂಜೆಯ ಸಂಭ್ರಮ ಮನೆಮಾಡಿದೆ. ಮೈಸುರು ಅರಮನೆಯಲ್ಲಿ ರಾಜ ಪರಿವಾರದಿಂದ ಅರಮನೆಯಲ್ಲಿ ಆಯುಧ ಪೂಜೆ ಸಂಭ್ರಮದಿಂದ ನಡೆಯಿತು.

ಮಹಾರಾಜ ಯದುವಿರ್ ಕೃಷ್ಣರಾಜ ಚಾಮರಾಜ ಒಡೆಯರ್ ಅವರು ಅರಮನೆಯ ಖಾಸಗಿ ಆಯುಧಗಳಿಗೆ ಪೂಜೆ ನೆರವೇರಿಸಿದರು. ದರ್ಬಾರ್ ರಾಜಪೋಷಾಕು ಧರಿಸಿ ಕಲ್ಯಾಣ ಮಂಟಪದಲ್ಲಿ ಪೂಜೆ ನೆರವೇರಿಸಿದರು.

ನಂತರ ಮಹಾರಾಜರು ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸುಗಳಿಗೆ ಪೂಜೆ ಸಲ್ಲಿಸಿದರು. ವಾದ್ಯಘೋಷ, ಪೊಲೀಸ್ ಬ್ಯಾಂಡ್ ಸಂಗೀತದೊಂದಿಗೆ ಪೂಜಾ ಕಾರ್ಯ ನಡೆಯಿತು.

 

ರಾಜಮಾತೆ ಪ್ರಮೋದಾ ದೇವಿ,  ತ್ರಿಷಿಕಾ ಕುಮಾರಿ ಒಡೆಯರ್, ಪುತ್ರ ಆದ್ಯವೀರ್ ಭಾಗವಹಿಸಿದರು.

No Comments

Leave A Comment