Log In
BREAKING NEWS >
ಹಿರಿಯಡ್ಕದ ನಡುರಸ್ತೆಯಲ್ಲಿ ಹಾಡುಹಗಲೇ ಯುವಕನ ಕೊಚ್ಚಿಕೊಲೆ....ಗುಜರಾತ್​ನ ONGC ಘಟಕದಲ್ಲಿ ಬೆಂಕಿ ಅವಘಡ; ಬೆಳ್ಳಂಬೆಳಗ್ಗೆ ಭಾರೀ ಸ್ಫೋಟಕ್ಕೆ ಬೆಚ್ಚಿಬಿದ್ದ ಜನ....

ಉಡುಪಿ ದಸರಾ – ಶಾರದೋತ್ಸವಕ್ಕೆ ಚಾಲನೆ

ಉಡುಪಿ: ಉಡುಪಿ ಸಾರ್ವ ಜನಿಕ ಶ್ರೀ ಶಾರದೋತ್ಸವ ಸಮಿತಿ, ಉಡುಪಿ ದಸರಾ ಇದರ 4ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ ಅ. 5ರಿಂದ 8ರ ವರೆಗೆ ಶ್ರೀಕೃಷ್ಣ ಮಠದ ವಾಹನ ಪಾರ್ಕಿಂಗ್‌ ವಠಾರದಲ್ಲಿ ನಡೆಯಲಿದ್ದು ಕಾರ್ಯಕ್ರಮವನ್ನು ಶನಿವಾರ ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ಡಾ| ಜಿ. ಶಂಕರ್‌ ಉದ್ಘಾಟಿಸಿ ಶುಭ ಕೋರಿದರು.

ಇಂದ್ರಾಳಿ ಶ್ರೀ ಪಂಚದುರ್ಗಾಪರ ಮೇಶ್ವರೀ ದೇವಸ್ಥಾನದ ಮೊಕ್ತೇಸರ ಜಯಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಾಯಿರಾಧಾ ಗ್ರೂಪ್ಸ್‌ ಆಡಳಿತ ನಿರ್ದೇಶಕ ಮನೋಹರ ಎಸ್‌. ಶೆಟ್ಟಿ, ಕಾರ್ತಿಕ್‌ ಹೊಟೇಲ್‌ ಮಾಲಕ ಹರಿಯಪ್ಪ ಕೋಟ್ಯಾನ್‌, ಮತೊÕéದ್ಯಮಿ ಸಾಧು ಸಾಲ್ಯಾನ್‌, ಪೆರ್ಡೂರು ಮೇಳದ ಯಜಮಾನ ವೈ. ಕರುಣಾಕರ ಶೆಟ್ಟಿ, ಗಾಯಕಿ ಕಲಾವತಿ ದಯಾನಂದ, ಮುನಿಯಾಲು ಉದಯ ಕುಮಾರ್‌ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ಉದಯ ಕುಮಾರ್‌ ಶೆಟ್ಟಿ, ಅನಿವಾಸಿ ಭಾರತಿಯ ಉದ್ಯಮಿ ಬಿ.ಕೆ. ಶೆಟ್ಟಿ, ಎಂಐಟಿ ಪ್ರಾಧ್ಯಾಪಕ ಉದಯ ಕುಮಾರ್‌ ಶೆಟ್ಟಿ, ನ್ಯಾಯವಾದಿ ಉಮೇಶ ಶೆಟ್ಟಿ, ಕೆ.ಎಸ್‌.ಹೆಗ್ಡೆ ಕಾಲೇಜಿನ ಉಪನ್ಯಾಸ ಸುಧೀರ್‌ರಾಜ್‌, ದಸ್ತಾವೇಜು ಬರಹಗಾರ ರತ್ನಕುಮಾರ್‌, ಶಾರದೋತ್ಸವ ಸಮಿತಿಯ ಉಪಾಧ್ಯಕ್ಷೆ ಸುಪ್ರಭಾ ಆಚಾರ್ಯ, ಸಾಂಸ್ಕೃತಿಕ ಕಾರ್ಯದರ್ಶಿಜ್ಯೋತಿ ದೇವಾಡಿಗ ಉಪಸ್ಥಿತರಿದ್ದರು.

ಶಾರದೋತ್ಸವ ಸಮಿತಿ ಅಧ್ಯಕ್ಷ ಸುಪ್ರಸಾದ ಶೆಟ್ಟಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಎಂ. ಲಕ್ಷ್ಮೀನಾರಾಯಣ ರಾವ್‌ ವಂದಿಸಿದರು.

No Comments

Leave A Comment