Log In
BREAKING NEWS >
ಉಡುಪಿ ನಗರಸಭೆ ಅಧ್ಯಕ್ಷರಾಗಿ ಸುಮಿತ್ರಾ ನಾಯಕ್ ಹಾಗೂ ಉಪಾಧ್ಯಕ್ಷರಾಗಿ ಲಕ್ಷ್ಮಿ ‌ಮಂಜುನಾಥ್ ಕೊಳ ಆಯ್ಕೆ....

ಜಡೇಜಾ-ಶಮಿ ಮೆರೆದಾಟ; ಆಫ್ರಿಕಾ ಪರದಾಟ; ಮೊದಲ ಟೆಸ್ಟ್ ಗೆದ್ದ ಟೀಂ ಇಂಡಿಯಾ

ವಿಶಾಖಪಟ್ಟಣ: ಟೀಂ ಇಂಡಿಯಾ ನೀಡಿದ್ದ 395 ರನ್ ಬೃಹತ್ ಮೊತ್ತದ ಗುರಿಯನ್ನು ಬೆನ್ನತ್ತಲು ವಿಫಲವಾದ ಪ್ರವಾಸಿ ದಕ್ಷಿಣ ಆಫ್ರಿಕಾ 191 ರನ್ ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಭಾರತಕ್ಕೆ ಶರಣಾಗಿದೆ. ಈ ಮೂಲಕ ಭಾರತ 203 ರನ್ ಅಂತರದಿಂದ ಗೆದ್ದು ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಭಾರತೀಯ ಬೌಲರ್ ಗಳ ಕರಾರುವಾಕ್ ದಾಳಿಗೆ ಹರಿಣಗಳ ಬ್ಯಾಟ್ಸಮನ್ ಗಳು ಪತರುಗುಟ್ಟಿದರು. ಪೇಸರ್ ಶಮಿ ಮತ್ತು ಸ್ಪಿನ್ನರ್ ಜಡೇಜಾ ದಾಳಿಯನ್ನು ಪ್ರತಿರೋಧಿಸಲು ಯಾವೊಬ್ಬ ಟಾಪ್ ಆರ್ಡರ್  ಆಫ್ರಿಕನ್ ಆಟಗಾರನಿಗೂ ಸಾಧ್ಯವಾಗಿಲ್ಲ. ಕೊನೆಯಲ್ಲಿ ಮುತ್ತುಸ್ವಾಮಿ ಮತ್ತು ಡೇನ್ ಪೀಟ್ ಪ್ರತಿರೋಧ ತೋರಿ ಆಡಿದರೂ ಜಯಗಳಿಸಲು ಸಾಧ್ಯವಾಗಲಿಲ್ಲ.

ಆರಂಭಿಕ ಆಟಗಾರ ಮಾಕ್ರಮ್ 39 ರನ್ ಗಳಿಸಿದರೆ, ಕೆಳ ಕ್ರಮಾಂಕದ ಡೇನ್ ಪೀಟ್ 56 ರನ್ , ಮುತ್ತುಸ್ವಾಮಿ 49 ರನ್ ಗಳಿಸಿದರು.

ಭಾರತದ ಪರ ಬಿಗು ದಾಳಿ ಸಂಘಟಿಸಿದ ಮೊಹಮ್ಮದ್ ಶಮಿ ಐದು ವಿಕೆಟ್ ಪಡೆದರೆ, ರವೀಂದ್ರ ಜಡೇಜಾ ನಾಲ್ಕು ವಿಕೆಟ್ ಪಡೆದರು. ಮತ್ತೊಂದು ವಿಕೆಟ್ ಅಶ್ವಿನ್ ಪಡೆದರು.

No Comments

Leave A Comment