Log In
BREAKING NEWS >
ಡಿಕೆ ಶಿವಕುಮಾರ್ ತಾಯಿ, ಪತ್ನಿಗೆ ಇ.ಡಿ ನೀಡಿದ್ದ ಸಮನ್ಸ್ ಗೆ ಹೈಕೋರ್ಟ್ ತಾತ್ಕಾಲಿಕ ತಡೆ...ಬರ, ನೆರೆ ಹಾವಳಿ ಹಿನ್ನಲೆ ಹಂಪಿ ಉತ್ಸವವನ್ನು ಸರಳವಾಗಿ ಆಚರಿಸಲಾಗುವುದು: ಬಿ.ಶ್ರೀರಾಮುಲು...

ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಹುದ್ದೆಗೆ 12 ವಕೀಲರ ಹೆಸರು ಶಿಫಾರಸು

ಬೆಂಗಳೂರು: ರಾಜ್ಯ ಹೈಕೋರ್ಟ್ ನ ನ್ಯಾಯಮೂರ್ತಿ ಹುದ್ದೆಗೆ 12 ವಕೀಲರ ಹೆಸರುಗಳನ್ನು ಶಿಫಾರಸು ಮಾಡಿ ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿದೆ.

ಹೈಕೋರ್ಟಿನಲ್ಲಿ   ನ್ಯಾಯಮೂರ್ತಿಗಳ ಹುದ್ದೆ ಕೊರತೆಯಲ್ಲಿರುವುದರಿಂದ  ಶಿಫಾರಸು ಮಾಡಿರುವ ವಕೀಲರ ಹೆಸರುಗಳಿಗೆ ಅನುಮೋದನೆ ನೀಡುವಂತೆ  ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದಲ್ಲಿ ನ್ಯಾಯಮೂರ್ತಿ ಎಸ್. ಎ. ಬೊಬ್ಡೆ ಹಾಗೂ ನ್ಯಾಯಮೂರ್ತಿ ಎನ್. ವಿ. ರಮಣ ಅವರನ್ನೊಳಗೊಂಡ ಕೊಲಿಜಿಯಂ ಕೇಂದ್ರ ಸರ್ಕಾರಕ್ಕೆ  ಅಕ್ಟೋಬರ್ 3 ರಂದು  ಶಿಫಾರಸು ಮಾಡಿದೆ.

ಈ ಹಿಂದೆ ಶಿಫಾರಸು ಮಾಡಲಾದ ಪಟ್ಟಿಯಲ್ಲಿ ವಾಪಾಸ್ ಕಳುಹಿಸಲಾಗಿದ್ದ ನಾಲ್ವರು ವಕೀಲರ ಹೆಸರನ್ನು ಮರು ಪರಿಶೀಲಿಸುವಂತೆಯೂ  ಕೋರಲಾಗಿದೆ. ಇದರಿಂದಾಗಿ ಒಟ್ಟು 12 ವಕೀಲರ ಹೆಸರುಗಳು  ಈಗ ಕೇಂದ್ರದ ಮುಂದಿವೆ.

ಸವಣೂರು ವಿಶ್ವಜಿತ್ ಶೆಟ್ಟಿ, ಮರಳೂರು ಇಂದ್ರಕುಮಾರ್ ಅರುಣ್, ಮೊಹಮದ್ ಗೌಸ್  ಶುಕೂರೆ ಕಮಲ್ ಮತ್ತು ಇಂಗಳಗುಪ್ಪೆ ಸೀತಾರಾಮಯ್ಯ ಇಂದಿರೇಶ್ ಅವರ ಹೆಸರನ್ನು ಮರು ಪರಿಶೀಲಿಸುವಂತೆ ಕೋರಲಾಗಿತ್ತು.

 ನೇರನಹಳ್ಳಿ ಶ್ರೀನಿವಾಸನ್  ಸಂಜಯಗೌಡ, ಮೂಲಿಮನಿ ಜ್ಯೋತಿ, ರಂಗಸ್ವಾಮಿ ನಟರಾಜ್,  ನಾಗೇಂದ್ರ  ರಾಮಚಂದ್ರ ನಾಯಕ್, ಚಂದನಗೌಡರ ಹೇಮಂತ, ರವಿ ವೆಂಕಪ್ಪ ಹೊಸಮನಿ, ಪ್ರದೀಪ್ ಸಿಂಗ್ ಯೆರೂರು ಹಾಗೂ ಮಹೇಶನ್ ನಾಗಪ್ರಸನ್ನ  ಅವರ ಹೆಸರನ್ನು ಹೆಸರನ್ನು ಶಿಫಾರಸು ಮಾಡಲಾಗಿದೆ.

 ಕರ್ನಾಟಕ ಹೈಕೋರ್ಟಿನ್ ಬೆಂಗಳೂರು ಪ್ರಧಾನ ಪೀಠ, ಧಾರವಾಡ ಹಾಗೂ ಕಲಬುರ್ಗಿ ಪೀಠಗಳಿಗೆ ಮಂಜೂರಾಗಿರುವ ಒಟ್ಟು ಹುದ್ದೆಗಳ ಸಂಖ್ಯೆ 62, ಸದ್ಯ 34 ಮಂದಿ ನ್ಯಾಯಮೂರ್ತಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ.

No Comments

Leave A Comment