Log In
BREAKING NEWS >
ಮಹಾರಾಷ್ಟ್ರದಲ್ಲಿ ಸರಕಾರಿ ನೌಕರರಿಗೆ ಉದ್ಧವ್‌ ಬಂಪರ್‌ ಗಿಫ್ಟ್‌: ವಾರಕ್ಕೆ ಐದು ದಿನ ಮಾತ್ರ ಕೆಲಸ...

ನಿವೃತ್ತಿಯಾಗಲ್ಲ; ಮುಂದಿನ ಐಪಿಎಲ್ ಚೆನ್ನೈಗೆ ಆಡುತ್ತೇನೆ: ಹರ್ಭಜನ್ ಸಿಂಗ್

ಮುಂಬೈ: ಭಾರತದ ಆಫ್ ಸ್ಪಿನ್ ದಿಗ್ಗಜ ಹರ್ಭಜನ್ ಸಿಂಗ್ ತಮ್ಮ ನಿವೃತ್ತಿ ಕುರಿತಾದ ಸುದ್ದಿಗಳನ್ನು ತಳ್ಳಿ ಹಾಕಿದ್ದು, ಮುಂದಿನ ಆವೃತ್ತಿಯಲ್ಲಿ ಚೆನ್ನೈ ಪರವಾಗಿ ಐಪಿಎಲ್ ಆಡುವುದಾಗಿ ಹೇಳಿದ್ದಾರೆ.

ಇಂಗ್ಲೆಂಡ್ ನಲ್ಲಿ ನಡೆಯಲಿರುವ ಹೊಸ ಫ್ರಾಂಚೈಸಿ ಲಿಗ್ ‘ದಿ ಹಂಡ್ರೆಡ್’ ನಲ್ಲಿ ಹರ್ಭಜನ್ ಹೆಸರು ನೋಂದಾಯಿಸಿರುವುದರಿಂದ ಟರ್ಬನೇಟರ್ ಬಿಸಿಸಿಐಗೆ ವಿದಾಯ ನೀಡುತ್ತಾರೆ ಎಂದು ಹೇಳಲಾಗಿತ್ತು. ಬಿಸಿಸಿಐ ಆಡಳಿತದಡಿಯಲ್ಲಿ ಬರುವ ಯಾವುದೇ ಆಟಗಾರ ವಿದೇಶಿ ಟೂರ್ನಮೆಂಟ್ ಆಡುವಂತಿಲ್ಲ. ಹಿಗಾಗಿ ಹರ್ಭಜನ್ ವಿದಾಯ ಹೇಳುತ್ತಾರೆ ಎಂದು ವರದಿಯಾಗಿತ್ತು.

ನಾನು ನಿವೃತ್ತಿಯಾಗುತ್ತಿಲ್ಲ. ‘ದಿ ಹಂಡ್ರೆಡ್’ ಡ್ರಾಫ್ಟ್ ನಿಂದ ಹೆಸರು ಹಿಂದೆ ಪಡೆದಿದ್ದೇನೆ. ಒಂದು ವೇಳೆ ಐಪಿಎಲ್ ಮತ್ತು ‘ದಿ ಹಂಡ್ರೆಡ್’ ನಡುವೆ ಆಯ್ಕೆ ಬಂದರೆ ನಾನು ಖಂಡಿತ ಐಪಿಎಲ್ ಅನ್ನು ಆಯ್ದುಕೊಳ್ಳುತ್ತೇನೆ ಎಂದು 39 ವರ್ಷದ ಪಂಜಾಬ್ ಸ್ಪಿನ್ನರ್ ಹೇಳಿದ್ದಾರೆ.

 

ಹರ್ಭಜನ್ 2016ರ ಏಷ್ಯಾ ಕಪ್ ನಲ್ಲಿ ಕೊನೆಯದಾಗಿ ಭಾರತದ ಪರವಾಗಿ ಆಡಿದ್ದರು.

No Comments

Leave A Comment