Log In
BREAKING NEWS >
ಜುಲೈ 15 ರಂದು ಸಿ.ಬಿ.ಎಸ್.ಸಿ 10 ಮತ್ತು 12ನೇ ತರಗತಿ ಫಲಿತಾಂಶ ಪ್ರಕಟ...

ಬಿಹಾರ: 40 ಜನರಿದ್ದ ದೋಣಿ ಮಗುಚಿ ಬಿದ್ದು 7 ಸಾವು, ಹಲವರು ನಾಪತ್ತೆ

ಪಾಟ್ನ: ಬಿಹಾರ-ಬಂಗಾಳ ಗಡಿ ಸಮೀಪವಿರುವ ಮಹಾನಂದ್ ನದಿಯಲ್ಲಿ ದೋಣಿ ಮಗುಚಿಬಿದ್ದ ಪರಿಣಾಮ 7 ಮಂದಿ ಸಾವನ್ನಪ್ಪಿ, ಹಲವರು ನಾಪತ್ತೆಯಾಗಿರುವ ಘಟನೆ ಗುರುವಾರ ಸಂಭವಿಸಿದೆ.

40 ಮಂದಿಯಿದ್ದ ಖಾಸಗಿ ದೋಣಿಯೊಂದು ಜಗನ್ನಾಥಪುರ ಘಾಟ್ ನಿಂದ ಬಿಹಾರದ ಮುಕುಂದಪುರಕ್ಕೆ ಪ್ರಯಾಣಿಕರನ್ನು ಕರೆದೊಯ್ಯುತ್ತಿತ್ತು. ಈ ವೇಳೆ ದೋಣಿ ಮಗುಚಿ ಬಿದ್ದಿದ್ದು, 7 ಜನರು ಸಾವನ್ನಪ್ಪಿದ್ದಾರೆಂದು ವರದಿಗಳು ತಿಳಿಸಿವೆ.

ಘಟನೆ ಬಳಿಕ ಸ್ಥಳಕ್ಕೆ ಬಂದಿರುವ ಜಿಲ್ಲಾ ಪೊಲೀಸ್, ನಾಗರೀಕ ಆಡಳಿತ ಮಂಡಳಿ ಹಾಗೂ ಎನ್’ಡಿಆರ್’ಎಫ್ ಪಡೆಗಳು ರಕ್ಷಣಾ ಕಾರ್ಯಾಚರಣೆ ಆರಂಭಿಸಿವೆ.

No Comments

Leave A Comment