ಮುಂದಿನ ವಾರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಡ್ರೋನ್ ದಾಳಿ ಬಳಿಕ ಸೌದಿ ಅರಾಮ್ಕೋ ವ್ಯವಸ್ಥೆ ಪುನಃಸ್ಥಾಪನೆ ಹೊಸದಿಲ್ಲಿ: ಪೆಟ್ರೋಲ್ ಬೆಲೆ ಏರಿಕೆಗೆ ಅ.3ರಂದು ತುಸು ಬ್ರೇಕ್ ಬಿದ್ದಿದೆ. ಮುಂದಿನ ವಾರಗಳಲ್ಲಿ ಇನ್ನಷ್ಟು ಬೆಲೆ ಇಳಿಯುವುದಾಗಿ ಸರಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಹೇಳಿದೆ. ಗುರುವಾರ ಪೆಟ್ರೋಲ್ ಬೆಲೆ 10 ಪೈಸೆ ಇಳಿಕೆಯಾಗಿದ್ದು, ಡೀಸೆಲ್ ಬೆಲೆ 6 ಪೈಸೆ ಇಳಿಕೆಯಾಗಿದೆ. ಸೆ.14ರಂದು ಸೌದಿ ಅರೇಬಿಯಾದ ಅರಾಮ್ಕೋ ತೈಲ ಕಂಪೆನಿ ಮೇಲೆ ಡ್ರೋನ್ ದಾಳಿ ಬಳಿಕ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯಾಗಿತ್ತು. ಪೂರೈಕೆಯಲ್ಲಿ ವ್ಯತ್ಯಯ ಮತ್ತು ಅಂ.ರಾ. ಮಾರುಕಟ್ಟೆಯಲ್ಲಿಯ ಪರಿಣಾಮದಿಂದಾಗಿ ಬೆಲೆ ಏರಿಕೆ ಕಂಡಿತ್ತು. ಸದ್ಯ ಸಮಸ್ಯೆ ಸರಿಪಡಿಸಲಾಗಿದೆ. ಕಚ್ಚಾ ತೈಲದ ಬೆಲೆಯೂ ತುಸು ಇಳಿಕೆಯಾಗಿದ್ದು, ಪೆಟ್ರೋಲ್ ಬೆಲೆಯೂ ಇಳಿಯುವ ನಿರೀಕ್ಷೆ ಹೆಚ್ಚಿದ ಎಂದು ಇಂಡಿಯನ್ ಆಯಿಲ್ನ ಅಧ್ಯಕ್ಷ ಸಂಜೀವ್ ಸಿಂಗ್ ಹೇಳಿದ್ದಾರೆ. ದಕ್ಷಿಣ ಏಷ್ಯಾ ದೇಶಗಳು ಅತಿ ಹೆಚ್ಚಾಗಿ ಅರಬ್ ದೇಶಗಳನ್ನು ತೈಲ ಪೂರೈಕೆಗೆ ನೆಚ್ಚಿಕೊಂಡಿದ್ದು, ಅಲ್ಲಿನ ತೈಲ ವ್ಯವಸ್ಥೆ, ಪೂರೈಕೆ ವ್ಯವಸ್ಥೆಯಲ್ಲಿ ತುಸು ಏರುಪೇರಾದರೂ ಅದರ ಪರಿಣಾಮ ಇಲ್ಲಿನ ಮಾರುಕಟ್ಟೆ ಮೇಲೆ ಆಗುಗುತ್ತದೆ. ಆದ್ದರಿಂದ ಇಂಧನ ವಲಯ ಸುರಕ್ಷತೆ ಮತ್ತು ಕ್ರಮಬದ್ಧ ಪೂರೈಕೆಗೆ ಆದ್ಯತೆ ಎಲ್ಲ ದೇಶಗಳ ಪ್ರಮುಖ ಅಜೆಂಡಾ ಆಗಿದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ. Share this:TweetWhatsAppEmailPrintTelegram