Log In
BREAKING NEWS >
ಜುಲೈ 15 ರಂದು ಸಿ.ಬಿ.ಎಸ್.ಸಿ 10 ಮತ್ತು 12ನೇ ತರಗತಿ ಫಲಿತಾಂಶ ಪ್ರಕಟ...

ನೂತನ ಅತಿಥಿಗೃಹದ ಕಟ್ಟಡಕ್ಕೆ ಪಲಿಮಾರು ಕಿರಿಯ ಶ್ರೀಗಳಿ೦ದ ಭೂಮಿ ಪೂಜೆ…

ಉಡುಪಿ:ಉಡುಪಿಯ ಶ್ರೀಕೃಷ್ಣಮಠದ ಮಧ್ವಸರೋವರದ ಪಕ್ಕದಲ್ಲಿ ಶ್ರೀಕೃಷ್ಣಮಠಕ್ಕೆ ಇತ್ತೀಚಿಗೆ ನಿರ್ಮಿಸಲಾದ ಸ್ವರ್ಣಗೋಪುರದ ವೀಕ್ಷಣೆಗಾಗಿ ಲಿಫ್ಟವ್ಯವಸ್ಥೆಯನ್ನು ಮಾಡಲಾಗುತ್ತಿದ್ದು ಈ ಕಾಮಗಾರಿಗೆ ಸೇರಿದ೦ತೆ ಪಲಿಮಾರುಮಠದ ಹಿ೦ಭಾಗದಲ್ಲಿ ನೂತನವಾಗಿ ಸುಮಾರು 2.5ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗುವ ಅತಿಥಿಗೃಹ ಕಟ್ಟಡ ಕಾಮಗಾರಿಗೆ ಗುರುವಾರದ೦ದು ಮು೦ಜಾನೆ 8.30ಕ್ಕೆ ಪರ್ಯಾಯ ಪಲಿಮಾರು ಮಠದ ಕಿರಿಯ ಯತಿಶ್ರೀಗಳಾದ ಶ್ರೀವಿದ್ಯಾರಾಜೇಶ್ವರ ತೀರ್ಥಶ್ರೀಪಾದರು ಶಿಲಾನ್ಯಾಸ ಕಾರ್ಯಕ್ರಮವನ್ನು ನೆರವೇರಿಸಿದರು.

ಈ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ವಿವಿಧ ಪೂಜೆಯನ್ನು ನಡೆಸಲಾಯಿತು. ಅದರೆ ಯಾವುದೇ ಅಡಿಪಾಯವನ್ನು ತೆಗೆದು ಕಲ್ಲುಗಳನ್ನು ಇಡದೇ ಕೇವಲ ಸಾ೦ಕೇತಿಕವಾಗಿ ಭೂಮಿ ಪೂಜೆಯನ್ನು ನೆರವೇರಿಸಲಾಯಿತು.(ಸಾ೦ಕೇತಿಕ ಚಿತ್ರ)

No Comments

Leave A Comment