Log In
BREAKING NEWS >
2019ರ ವಿಶ್ವ ಸುಂದರಿ ಪ್ರಕಟ: ಭಾರತದ ಸುಮನ್ ರಾವ್ ದ್ವಿತೀಯ ರನ್ನರ್ ಅಪ್....ಫಾಸ್ಟ್ ಟ್ಯಾಗ್ ಕಡ್ಡಾಯ: ಲಾಸ್ಟ್ ಸ್ಟಾಪ್ ಬದಲಾಯಿಸಿದ ಖಾಸಗಿ ಬಸ್ ಗಳು...

ಸಿಗದ ನೆರೆ ಪರಿಹಾರ: ಚಿಕ್ಕಮಗಳೂರಿನ ರೈತ ಆತ್ಮಹತ್ಯೆ

ಚಿಕ್ಕಮಗಳೂರು : ಪ್ರವಾಹದಿಂದ ಆಸ್ತಿ-ಪಾಸ್ತಿ ಕಳೆದುಕೊಂಡ ಹಿನ್ನೆಲೆ ಮನನೊಂದು ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೂಡಿಗೆರೆ ತಾಲೂಕಿನ ಕಳಸ ಸಮೀಪ ನಡೆದಿದೆ.

ಚಂದ್ರೇಗೌಡ (55) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ರೈತ.

ಭಾರಿ ಮಳೆಯಿಂದ ಕಳಸ ಸಮೀಪದ ಎಸ್.ಕೆ.ಮೇಗಲ್ ಗ್ರಾಮದ ಚಂದ್ರೇಗೌಡ ಅವರ ಅರ್ಧ ಎಕರೆ ಭತ್ತದ ಗದ್ದೆ, ಅರ್ಧ ಎಕರೆ ಕಾಫಿ ತೋಟ ಹಾಳಾಗಿತ್ತು. ತೋಟ ಸರಿಪಡಿಸಲೆಂದು ಅವರು ಕೈ ಸಾಲ ಮಾಡಿದ್ದರು. ಆದರೆ ಸರ್ಕಾರದಿಂದ ಯಾವುದೇ ಪರಿಹಾರ ಸಿಗದ ಹಿನ್ನೆಲೆಯಲ್ಲಿ ಮನನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಕಳಸ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

No Comments

Leave A Comment