Log In
BREAKING NEWS >
ಅರ್ಧಕ್ಕೆ ನಿಂತ ಪರ್ಕಳ ರಾ. ಹೆದ್ದಾರಿ ಕಾಮಗಾರಿ: ಅಂಗಡಿ, ಮನೆಯೊಳಗೆ ಕೆಸರು ನೀರು....

INX ಮೀಡಿಯಾ ಪ್ರಕರಣ; ಚಿದಂಬರಂ ಜಾಮೀನು ಅರ್ಜಿ ತಿರಸ್ಕರಿಸಿದ ದೆಹಲಿ ಹೈಕೋರ್ಟ್

ನವದೆಹಲಿ: ಐಎನ್ ಎಕ್ಸ್ ಮೀಡಿಯಾ ಭ್ರಷ್ಟಾಚಾರ ಪ್ರಕರಣದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ವಿತ್ತ ಸಚಿವ ಪಿ.ಚಿದಂಬರಂಗೆ ಜಾಮೀನು ನೀಡಲು ದೆಹಲಿ ಹೈಕೋರ್ಟ್ ಸೋಮವಾರ ನಿರಾಕರಿಸಿದೆ.

ಕಳೆದ ಒಂದು ತಿಂಗಳಿನಿಂದ ಐಎನ್ ಎಕ್ಸ್ ಮೀಡಿಯಾ ಭ್ರಷ್ಟಾಚಾರ ಪ್ರಕರಣದಲ್ಲಿ ಚಿದಂಬರಂ ತಿಹಾರ್ ಜೈಲಿನಲ್ಲಿ ಕಾಲಕಳೆಯುತ್ತಿದ್ದಾರೆ. ಪ್ರಕರಣದ ಕುರಿತಂತೆ ಸಿಬಿಐ ಚಿದಂಬರಂ ವಿಚಾರಣೆ ಪೂರ್ಣಗೊಂಡ ನಂತರ ತಿಹಾರ್ ಜೈಲಿನಲ್ಲಿದ್ದು, ಈವರೆಗೆ ಜಾಮೀನು ಸಿಕ್ಕಿಲ್ಲ.

ಸಾಕ್ಷ್ಯಗಳನ್ನು ತಿರುಚುವ ಸಾಧ್ಯತೆಯನ್ನು ತಳ್ಳಿಹಾಕಿರುವ ಹೈಕೋರ್ಟ್, ಮಿ.ಚಿದಂಬರಂ ಪ್ರಕರಣದ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದ್ದಿರುವುದಾಗಿ ಆದೇಶದಲ್ಲಿ ತಿಳಿಸಿದ್ದು, ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.

No Comments

Leave A Comment