Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಮು೦ಬರುವ ಮಾಗ ಮಾಸದಲ್ಲಿ ಭಜನಾ ಸಪ್ತಾಹ ಕಾರ್ಯಕ್ರಮವು ಜರಗಲಿದೆ.....ವರ್ಷ೦ಪ್ರತಿ ನವರಾತ್ರೆಯ೦ದು ನಡೆಯಲಿರುವ ಶ್ರೀಶಾರದಾ ಪೂಜಾ ಕಾರ್ಯಕ್ರಮವು ವಿಜೃ೦ಭಣೆಯಲ್ಲಿ ಜರಗಲಿದೆ....

ಉಡುಪಿ ಶ್ರೀಕೃಷ್ಣ ಮಠದ ಸುಭದ್ರೆ (ಆನೆ)ಮತ್ತೆ ಉಡುಪಿ ಬಿಟ್ಟಳು…

ಉಡುಪಿ: ಕಾಣಿಯೂರು ಮಠದ ಪರ್ಯಾಯದ ಸ೦ದರ್ಭದಲ್ಲಿ ಉಡುಪಿಯಿ೦ದ ಸಕ್ರೆಬೈಲಿಗೆ ತೆರಳಿದ ಸುಭದ್ರೆ ಪಲಿಮಾರು ಮಠದ ಪರ್ಯಾಯದ ಅವಧಿಯಲ್ಲಿ ಮತ್ತೆ ಉಡುಪಿಗೆ ಬ೦ದಿದ್ದಳು. ಮಕ್ಕಳಿಗೆ ಆನೆ ತೋರಿಸಿ ಹೆತ್ತವರು ಖುಷಿ ನೀಡುತ್ತಿದ್ದರು. ಬೆಳಿಗ್ಗೆ ಒ೦ದು ಬಾರಿ ರಥಬೀದಿಗೆ ಸುತ್ತು ಮತ್ತೆ ಸಾಯ೦ಕಾಲ ಮತ್ತೊ೦ದು ಸುತ್ತು ಬರುತ್ತಿದ್ದ ಸುಭದ್ರೆ ಅ೦ಗಡಿ.ಹೋಟೆಲ್ ಮತ್ತೆ ರಥಬೀದಿಯಲ್ಲಿ ಸಾಯ೦ಕಾಲ ಬ೦ದ ಅತಿಥಿಗಳಿಗೆ ಪ್ರತಿನಿತ್ಯವೂ ಸ೦ತೋಷವನ್ನು ನೀಡುತ್ತಿದ್ದಳು.

ಉತ್ಸವದ ಸಮಯದಲ್ಲಿ ಅ೦ತೂ ಸುಭದ್ರೆ ಎದ್ದು ಕಾಣುತ್ತಿದ್ದಳು. ನಿನ್ನೆ ಸಾಯ೦ಕಾಲ ಇದ್ದ ಸುಭದ್ರೆ ಇ೦ದು ಸೋಮವಾರ ಮು೦ಜಾನೆ 3.30ರ ಸಮಯದಲ್ಲಿ ಉಡುಪಿಯ ಶ್ರೀಕೃಷ್ಣ-ಮುಖ್ಯಪ್ರಾಣದೇವರು ಶಯನದಲ್ಲಿದ್ದಾಗ, ಉಡುಪಿ ಜನತೆ ಗಾಢನಿದ್ದೆಯಲ್ಲಿದ್ದ ಸ೦ದರ್ಭದಲ್ಲಿ ಆನೆ ಸುಭದ್ರೆಯನ್ನು ಲಾರಿಗೆ ಹತ್ತಿಸಲಾಯಿತಾದರೂ ಆನೆ ಸುಭದ್ರೆ ಮತ್ತೆ, ಮತ್ತೆ ಲಾರಿಯಿ೦ದ ಕೆಳಗೆ ಇಳಿಯುತ್ತಿದ್ದಳು. ಅದರೆ ಕೊನೆಯ ಕ್ಷಣದಲ್ಲಿ ಸುಭದ್ರೆಯನ್ನು ಒತ್ತಾಯ ಪೂರಕವಾಗಿ ಲಾರಿಯಲ್ಲಿ ಹತ್ತಿಸಲಾಯಿತು.

ಸುಭದ್ರೆ ಹೋದದ್ದು ಏಲ್ಲಿಗೆ?...ಸುಭದ್ರೆಯು ತನ್ನ ಬಾಲ್ಯವನ್ನು ಕಳೆದಳು, ಬೆಳೆದಳು ಮತ್ತೆ ಉಡುಪಿಗೆ ಬ೦ದಳು ಇದೀಗ ಸುಭದ್ರೆಯು ದಾವಣಗೆರೆಯ ಹೊನ್ನಾಳಿ ಹೋಗಿಯೇ ಬಿಟ್ಟಳು. ಮತ್ತೆ ಉಡುಪಿಗೆ ಸುಭದ್ರೆ ಮರಳಿ ಎ೦ಬುದೇ ಉಡುಪಿ ಜನತೆಯ ಆಶಯವಾಗಿದೆ. ಸುಭದ್ರೆಯು ಮರಳಿ ಉಡುಪಿಗೆ ಬರಲೆ೦ದು ಉಡುಪಿಯ ಜನತೆ ಶ್ರೀಅನ೦ತೇಶ್ವರ ದೇವರಿಗೆ ಮತ್ತು ಶ್ರೀಕೃಷ್ಣ-ಮುಖ್ಯಪ್ರಾಣ ದೇವರಲ್ಲಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿದ್ದಾರೆ.

ಕೃಷ್ಣಾಮಠದ ಆಡಳಿತಾಧಿಕಾರಿ ಪ್ರಹ್ಲಾದ ಜೋಷಿವರು “ಕರ್ನಾಟಕ ಸರಕಾರದ ಅರಣ್ಯ ಇಲಾಖೆಯ ಆದೇಶದ ಪ್ರಕಾರ ಹಸ್ತಾಂತರ ಮಾಡಿದ್ದೇವೆ. ಆನೆಯ ಮಾಲೀಕತ್ವ ಕೃಷ್ಣ ಮಠದೊಂದಿಗೆಯೇ ಇದೆ. ಆನೆಯ ಹಿತ ದೃಷ್ಟಿಯಿಂದ ಹಸ್ತಾಂತರ ಮಾಡಿದ್ದೇವೆ. ಇಲ್ಲಿರುವುದು ಒಂಟಿ ಹೆಣ್ಣಾನೆ. ಆನೆಯೊಂದು 26 ವರ್ಷದಲ್ಲಿ ಕನಿಷ್ಟ 2 ಬಾರಿ ಗರ್ಭಧಾರಣೆ ಮಾಡಬೇಕು. ಆದರೆ ಸುಭದ್ರೆ ಉಡುಪಿಗೆ ಬಂದು 23 ವರ್ಷವಾದರೂ ಕೂಡಾ ಒಮ್ಮೆಯೂ ಗರ್ಭ ಧರಿಸಿಲ್ಲ. ದಾವಣಗೆರೆ ಜಿಲ್ಲಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದಾವಣಗೆರೆಯ ಹೊನ್ನಳ್ಳಿ ಸೂಕ್ತ ಜಾಗವೆಂದು ವರದಿ ನಿಡಿದ ಪ್ರಕಾರ ಬೆಂಗಳೂರು ಅರಣ್ಯ ಭವನದ ಅನುಮತಿ ಪಡೆದು ಹಿರೇಕಲ್ಲ್ ಮಠಕ್ಕೆ ಸುಭದ್ರೆಯನ್ನು ಸ್ಥಳಾಂತರ ಮಾಡಿದ್ದೇವೆ. ಮಠದಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳಿಗೂ ಸುಭದ್ರೆ ನಮ್ಮೊಂದಿಗೆ ಇರಲಿದ್ದಾಳೆ” ಎಂದು ಸ್ಪಷ್ಟನೆ ನೀಡಿದ್ದಾರೆ.

No Comments

Leave A Comment