Log In
BREAKING NEWS >
2019ರ ವಿಶ್ವ ಸುಂದರಿ ಪ್ರಕಟ: ಭಾರತದ ಸುಮನ್ ರಾವ್ ದ್ವಿತೀಯ ರನ್ನರ್ ಅಪ್....ಫಾಸ್ಟ್ ಟ್ಯಾಗ್ ಕಡ್ಡಾಯ: ಲಾಸ್ಟ್ ಸ್ಟಾಪ್ ಬದಲಾಯಿಸಿದ ಖಾಸಗಿ ಬಸ್ ಗಳು...

ವಿಶ್ವಸಂಸ್ಥೆಯಲ್ಲಿ ಇಮ್ರಾನ್ ಖಾನ್ ಆರೋಪಕ್ಕೆ ಬೆವರಿಳಿಸಿದ ಭಾರತದ ವಿದಿಶಾ ಮೈತ್ರಾ

ವಾಷಿಂಗ್ಟನ್:ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ (ಯುಎನ್ ಜಿಎ) ನಿರೀಕ್ಷೆಯಂತೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಕಾಶ್ಮೀರ ವಿಷಯವನ್ನು ಪ್ರಸ್ತಾಪಿ ಆರೋಪಿಸಿದ್ದ ಗಂಟೆಯ ಬಳಿಕ ಭಾರತ ತೀಕ್ಷ್ಣ ಪ್ರತಿಕ್ರಿಯೆ ನೀಡುವ ಮೂಲಕ ಬಾಯ್ಮುಚ್ಚಿಸಿದೆ.

ಭಯೋತ್ಪಾದನೆ ಮಟ್ಟ ಹಾಕುವ ಬಗ್ಗೆ ಪಾಠ ಮಾಡಬೇಡಿ:

ಮಾನವ ಹಕ್ಕುಗಳ ಬಗ್ಗೆ ಮತ್ತು ಭಯೋತ್ಪಾದನೆಯನ್ನು ನಿಗ್ರಹಿಸುವ ಬಗ್ಗೆ ಪಾಠ ಮಾಡುವ ಯಾವ ಅಧಿಕಾರವೂ ಪಾಕಿಸ್ತಾನಕ್ಕೆ ಇಲ್ಲ ಎಂಬುದಾಗಿ ವಿಶ್ವಸಂಸ್ಥೆಯಲ್ಲಿ ಭಾರತ ಮೊದಲ ಖಾಯಂ ಕಾರ್ಯದರ್ಶಿಯಾಗಿರುವ ವಿದಿಶಾ ಮೈತ್ರಾ ನೀಡಿರುವ ಖಡಕ್ ಉತ್ತರ ಇದು.

 

ವಿಶ್ವಸಂಸ್ಥೆ ಪಟ್ಟಿಮಾಡಿರುವ 130 ಉಗ್ರರಿಗೆ ಆಶ್ರಯ ನೀಡಿರುವ ದೇಶ ಪಾಕಿಸ್ತಾನ. ಅಷ್ಟೇ ಅಲ್ಲ 25 ಭಯೋತ್ಪಾದಕ ಸಂಘಟನೆಗಳನ್ನು ಪೋಷಿಸುತ್ತಿದೆ. 9/11 ಮಾಸ್ಟರ್ ಮೈಂಡ್ ಉಗ್ರ ಒಸಾಮಾ ಬಿನ್ ಲಾಡೆನ್ ಗೆ ಬೆಂಬಲ ನೀಡಿರುವುದನ್ನು ಪಾಕಿಸ್ತಾನ ಪ್ರಧಾನಿ ನಿರಾಕರಿಸುತ್ತಾರೆಯೇ ಎಂದು ಪ್ರಶ್ನಿಸಿದರು.

ಪಾಕಿಸ್ತಾನ ಭಯೋತ್ಪಾದನೆಯನ್ನೇ ಏಕಸ್ವಾಧೀನ ಪಡೆಯನ್ನಾಗಿ ಮಾಡಿಕೊಂಡು ಅದನ್ನೇ ಬೆಂಬಲಿಸುತ್ತಾ ಬಂದಿರುವುದು ಇಡೀ ಜಗತ್ತಿಗೆ ತಿಳಿದಿದೆ. ಭಯೋತ್ಪಾದನೆ ಕುರಿತ ಪಾಕ್ ಪ್ರಧಾನಿ ಖಾನ್ ಸಮರ್ಥನೆ ನಾಚಿಕೆಗೇಡಿನ ಮತ್ತು ಬೆಂಕಿಹೊತ್ತಿಸುವ ಕೆಲಸವಾಗಿದೆ ಎಂದು ವಾಗ್ದಾಳಿ ನಡೆಸಿದರು.

ವಿಶ್ವಸಂಸ್ಥೆಯಲ್ಲಿ ಇಮ್ರಾನ್ ಖಾನ್ ಬರೆದುಕೊಟ್ಟ ಭಾಷಣವನ್ನು ಮಾಡಿದ್ದಾರೆ. ಇದರಲ್ಲಿ ಬಹಳಷ್ಟು ವಿರೋಧಾಭಾಸ ಹಾಗೂ ದ್ವೇಷವೇ ತುಂಬಿದೆ. ಬರೆದುಕೊಟ್ಟಿರುವ ದ್ವೇಷದ ಮಾತುಗಳನ್ನೇ ಆಡಿದ್ದಾರೆ ಎಂದು ವಿದಿಶಾ ಚಾಟಿ ಬೀಸಿದರು.

ಇಮ್ರಾನ್ ತಮ್ಮ ಭಾಷಣದಲ್ಲಿ ಶ್ರೀಮಂತ v/s ಬಡವ, ಉತ್ತರ v/s ದಕ್ಷಿಣ, ಮುಸ್ಲಿಂ v/s ಇತರರು ಎಂಬಂತೆ ಜಗತ್ತಿನೆದರು ಚಿತ್ರಿಸುವ ಕೆಲಸ ಮಾಡಿದ್ದಾರೆ. ಭಯೋತ್ಪಾದನೆ ವಿಚಾರದಲ್ಲಿ ನ್ಯೂಕ್ಲಿಯರ್ ದಾಳಿ ಬೆದರಿಕೆ ಒಡ್ಡುವುದು ಅವಸಾನದ ಸಂಕೇತವೇ ಹೊರತು ನಾಯಕತ್ವದ ಲಕ್ಷಣವಲ್ಲ ಎಂದು ಭಾರತ ಪಾಕಿಸ್ತಾನಕ್ಕೆ ತಕ್ಕ ತಿರುಗೇಟು ನೀಡಿದೆ.

No Comments

Leave A Comment