Log In
BREAKING NEWS >
ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಈ ಬಾರಿ ನಡೆಯ ಬೇಕಾದ ಭಜನಾ ಸಪ್ತಾಹ ಮಹೋತ್ಸವವನ್ನು ಕೋವಿಡ್-19ರ ಕಾರಣದಿ೦ದ ಮು೦ದೂಡಲಾಗಿದ್ದು ಭಜನಾ ಸಪ್ತಾಹ ಮಹೋತ್ಸವವನ್ನು 2021ನೇ ವರುಷದ ಮಾರ್ಚನಲ್ಲಿ ನಡೆಯಲಿದೆ...

ವಿಕ್ರಮ್ ಕಠಿಣ ಲ್ಯಾಂಡಿಂಗ್, ಸ್ಥಳ ಪತ್ತೆಯಾಗಿಲ್ಲ’: ಚಂದ್ರಯಾನ 2 ಬಗ್ಗೆ ಮಾಹಿತಿ ನೀಡಿದ ನಾಸಾ

ವಾಷಿಂಗ್ಟನ್: ಭಾರತದ ಮಹಾತ್ವಾಕಾಂಕ್ಷೆಯ ಚಂದ್ರಯಾನ-2 ಗಗನನೌಕೆಯನ್ನು ಹೊತ್ತೊಯ್ದಿದ್ದ ವಿಕ್ರಮ್ ಉಡ್ಡಯನ ವಾಹಕ ಚಂದ್ರನಲ್ಲಿ ಕಠಿಣ ಲ್ಯಾಂಡಿಂಗ್(hard landing)ನ್ನು ಕಂಡಿದೆ ಎಂದು ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ ಶುಕ್ರವಾರ ಹೇಳಿದೆ. ಇಸ್ರೊ ಸಂಸ್ಥೆಯ ಯೋಜನೆ ಪ್ರಕಾರ ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್ ಕಳೆದ ಸೆಪ್ಟೆಂಬರ್ 7ರಂದು ಸಾಫ್ಟ್ ಲ್ಯಾಂಡಿಂಗ್ ಆಗಬೇಕಾಗಿತ್ತು.

ಚಂದ್ರನ ದಕ್ಷಿಣ ಧ್ರುವದಲ್ಲಿ ಗುರುತು ಸಿಗದ ಕಣ್ಗಾವಲು ಕಕ್ಷೆಯಿಂದ ನಾಸಾ ಸೆರೆಹಿಡಿದಿರುವ ಹೈ ರೆಸೊಲ್ಯೂಷನ್ ಚಿತ್ರದಿಂದ ಇದು ತಿಳಿದುಬಂದಿದೆ. ಇದು ಮುಸ್ಸಂಜೆ ಹೊತ್ತಿನಲ್ಲಿ ತೆಗೆದ ಚಿತ್ರವಾಗಿದ್ದು ವಿಕ್ರಮ್ ಲ್ಯಾಂಡರ್ ನ ಪತ್ತೆಯಾಗಿಲ್ಲ. ಮುಂದಿನ ತಿಂಗಳು ಅಕ್ಟೋಬರ್ ನಲ್ಲಿ ಹೆಚ್ಚು ಬೆಳಕಿನ ಸಮಯದಲ್ಲಿ ಇನ್ನಷ್ಟು ಚಿತ್ರಗಳು ಸಿಗಲಿದೆ ಎಂದು ನಾಸಾ ಹೇಳಿದೆ.

ಇಸ್ರೊ ಯೋಜನೆ ಯಶಸ್ವಿಯಾಗಿ ತಲುಪಬೇಕು ಅನ್ನುವಷ್ಟರಲ್ಲಿ ಕೊನೆ ಕ್ಷಣದಲ್ಲಿ ಚಂದ್ರನ ಸಿಂಪೆಲಿಯಸ್ ಎನ್ ಮತ್ತು ಮ್ಯಾಂಜಿನಸ್ ಸಿ ಕುಳಿಗಳ ಮಧ್ಯೆ ವಿಕ್ರಮ್ ಸಂಪರ್ಕ ಕಳೆದುಕೊಂಡಿತು, ನಾಸಾ ಸೆರೆಹಿಡಿದಿರುವ ಚಿತ್ರದಲ್ಲಿರುವ ಈ ಸ್ಥಳವು ಚಂದ್ರನ ದಕ್ಷಿಣ ಧ್ರುವದಿಂದ ಸುಮಾರು 600 ಕಿ.ಮೀ ದೂರದಲ್ಲಿದೆ. ಈ ದೃಶ್ಯವನ್ನು ಲೂನಾರ್ ರೆಕಾನೈಸನ್ಸ್ ಆರ್ಬಿಟರ್ ಕ್ಯಾಮೆರಾ (ಎಲ್‌ಆರ್‌ಒಸಿ) ಯಿಂದ ಸೆರೆಹಿಡಿಯಲಾಗಿದೆ.

ವಿಕ್ರಮ್ ಲ್ಯಾಂಡರ್ ಕೊನೆಯ ಹಂತದವರೆಗೂ ಸರಿಯಾಗಿಯೇ ಹೋಗುತ್ತಿತ್ತು. ಇನ್ನೇನು ಚಂದ್ರನ ಮೇಲ್ಮೈ ತಲುಪಬೇಕು ಎನ್ನುವಷ್ಟರಲ್ಲಿ 2.1 ಕಿಲೋ ಮೀಟರ್ ದೂರವಿರುವಾಗ ಸಂಪರ್ಕ ಕಳೆದುಕೊಂಡಿತು. ಲ್ಯಾಂಡರ್ ಜೊತೆ ಸಂಪರ್ಕ ಕಲ್ಪಿಸಲು ಮೊನ್ನೆ 21ರವರಗೆ ಅವಕಾಶವಿತ್ತು. ನಂತರ ಇಲ್ಲಿ ಕತ್ತಲು ಆವರಿಸುತ್ತದೆ.

ಪ್ರಗ್ಯಾರ್ ರೋವರ್ ಮೂಲಕ ಕಳುಹಿಸಿಕೊಟ್ಟಿದ್ದ ವಿಕ್ರಮ್ ಲ್ಯಾಂಡರ್ ನ ಜೀವಿತಾವಧಿ 14 ದಿನಗಳಾಗಿತ್ತು.

No Comments

Leave A Comment