ಕೊಲೆ ಆಪಾದನೆ: ಮಾರುಕಟ್ಟೆಯಿಂದ ತೃತೀಯ ಲಿಂಗಿಗಳಿಗೆ ಬಹಿಷ್ಕಾರ
ಸೂರತ್: ತೃತೀಯ ಲಿಂಗಿಗಳಿಗೆ ಮಾರುಕಟ್ಟೆಗೆ ಬಾರದಂತೆ ಬಹಿಷ್ಕಾರ ಹಾಕಿದ ಘಟನೆ ಗುಜರಾತ್ ನ ಸೂರತ್ ನಲ್ಲಿ ನಡೆದಿದೆ. ವ್ಯಕ್ತಿಯೋರ್ವನ ಕೊಲೆಗೆ ತೃತೀಯಲಿಂಗಿಗಳು ಕಾರಣರಾಗಿದ್ದಾರೆ ಎಂಬ ಆಪಾದನೆಯ ಹಿನ್ನಲೆಯಲ್ಲಿ ತೃತೀಯಲಿಂಗಿ ಸಮುದಾಯಕ್ಕೆ ಬಹಿಷ್ಕಾರ ಹಾಕಲಾಗಿದೆ.
ಸುದ್ದಿಸಂಸ್ಥೆಯೊಂದಕ್ಕೆ ಮಾತನಾಡಿದ ಸೂರತ್ ನ ಜಪಾನ್ ಮಾರುಕಟ್ಟೆ ಸಮಿತಿ ಅಧ್ಯಕ್ಷ ಲಲಿತ್ ಶರ್ಮಾ, ತೃತೀಯ ಲಿಂಗಿಗಳು ಜನರಿಗೆ ಕಿರುಕುಳ ನೀಡುತ್ತಾರೆ. ಇಂತಹ ಘಟನೆಗಳು ಮರುಕಳಿಸಬಾರದಂತೆ ಎಚ್ಚರಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದರು.
ತೃತೀಯಲಿಂಗಿಗಳನ್ನು ನಿಷೇಧಿಸಿದ ನಿರ್ಧಾರದ ನೋಟೀಸ್ ನ್ನು ಮಾರುಕಟ್ಟೆಯ ಗೋಡೆಗಳಲ್ಲಿ ಅಂಟಿಸಲಾಗಿದೆ. ಯಾರೋ ಒಬ್ಬ ಮಾಡಿದ ಅಪರಾಧಕ್ಕೆ ಇಡೀ ಸಮುದಾಯಕ್ಕೆ ನಿಷೇಧ ಹೇರುವುದು ಎಷ್ಟು ಸರಿ. ವಿಶೇಷ ದಿನಗಳಲ್ಲಿ ಇಂತಹ ಮಾರುಕಟ್ಟೆಯಲ್ಲಿ ನಾವು ಉತ್ತಮ ಹಣ ಸಂಪಾದಿಸುತ್ತೇವೆ. ಹಾಗಾಗಿ ಈ ನಿಷೇಧವನ್ನು ತೆರವುಗೊಳಿಸಬೇಕು ಎಂದು ತೃತೀಯ ಲಿಂಗಿ ಪಾಯಲ್ ಕೌರ್ ಹೇಳಿಕೆ ನೀಡಿದ್ದಾರೆ.