Log In
BREAKING NEWS >
ಉಡುಪಿಯಲ್ಲಿ ಡಿಸೆ೦ಬರ್ 13ರಿ೦ದ 15 ವರೆಗೆ ಶ್ರೀಕೃಷ್ಣಮಠದ ರಾಜಾ೦ಗಣದಲ್ಲಿ ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವಸಮ್ಮೇಳನ ಜರಗಲಿದೆ....ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದ 91ನೇ ಭಜನಾ ಸಪ್ತಾಹ ಮಹೋತ್ಸವದ ನೇರಪ್ರಸಾರ ಕಾರ್ಯಕ್ರಮಕ್ಕೆ ಸಹಕರಿಸಿದ ದೇವಸ್ಥಾನದ ಆಡಳಿತ ಮ೦ಡಳಿಗೆ ಹಾಗೂ ಭಜನಾ ಸಪ್ತಾಹ ಮಹೋತ್ಸವದ ಸಮಿತಿಯವರಿಗೆ ಮತ್ತು ಜಾಹೀರಾತನ್ನು ನೀಡಿ ಸಹರಿಸಿದ ಎಲ್ಲಾ ಜಾಹೀರಾತುದಾರರಿಗೆ ಕರಾವಳಿ ಕಿರಣ ಡಾಟ್ ಬಳಗದ ವತಿಯಿ೦ದ ಧನ್ಯವಾದಗಳು ಹಾಗೂ ಏಳುದಿನಗಳ ನಮ್ಮ ಅ೦ತರ್ಜಾಲ ಪತ್ರಿಕೆಯನ್ನು ವೀಕ್ಷಿಸಿದ ಎಲ್ಲಾ ಓದುಗರಿಗೆ,ಅಭಿಮಾನಿಗಳಿಗೆ ಅಭಿನ೦ದನೆಗಳನ್ನು ಸಲ್ಲಿಸುತ್ತೇವೆ.

ಮಂಗಳೂರು ಜ್ಯುವೆಲ್ಲರಿ ಕಳವು ಕೇಸ್:ಇಬ್ಬರು ಅಘ್ಘಾನಿ ಪ್ರಜೆ ಸೇರಿ ಮೂವರ ಸೆರೆ

ಮಂಗಳೂರು: ಮಂಗಳೂರಿನ ಭವಂತಿ ಸ್ಟ್ರೀಟ್‍ನಲ್ಲಿನ ಅರುಣ್ ಜ್ಯುವೆಲ್ಲರ್ಸ್‍ನಲ್ಲಿ ಇತ್ತೀಚೆಗೆ ನಡೆದ ಚಿನ್ನಾಭರಣ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಅಘ್ಘಾನಿಸ್ತಾನದ ಪ್ರಜೆ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.

ಆರೋಪಿಗಳನ್ನು ಕಾಸರಗೋಡಿನ ಇಲ್ಲಾಪು ವಲಪ್ಪು, ಕಲ್ನಾಡ್ ಗ್ರಾಮ, ಚೆಂಬರಿಕಾ, ಚೆಮ್ನಾಡ್‍ನ ಮುತಾಸಿಮ್ ಸಿ ಎಮ್ ಅಲಿಯಾಸ್ ತಸ್ಲೀಮ್ (39) , ಅಪ್ಘಾನಿಸ್ತಾನದ ಕಾಬೂಲ್ ಜಿಲ್ಲೆಯ ಕಾಬೂಲ್ ನ, ಪ್ರಸ್ತುತ ನ್ಯೂ ಡೆಲ್ಲಿಯ ಕಿರ್ಕಿ ಎಕ್ಸ್ ಟೆನ್ಷನ್ ನ ಮಾಳವೀಯಾ ನಗರದಲ್ಲಿ ನೆಲೆಸಿರುವ ವಲಿ ಮೊಹಮ್ಮದ್ ಶಫಿ ಅಲಿಯಾಸ್ ವಲಿ (45), ಅಜೀಮ್ ಮೊಹಮ್ಮದ್ ಕುರಮ್ ಅಲಿಯಾಸ್ ಅಜೀಂ (22) ಎಂಬುವರನ್ನು ಬಂಧಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಕಾಸರಗೋಡಿನ ಕುನ್ನಿ ಅಹಮ್ಮದ್, ಅಪ್ಘಾನಿಸ್ತಾನದ ಫರೀದ್ ತಲೆ ಮರೆಸಿಕೊಂಡಿರುತ್ತಾರೆ.

ಈ ಕಳವು ಪ್ರಕರಣದಲ್ಲಿ ಚಿನ್ನಾಭರಣ, ಬೆಳ್ಳಿಯ ಆಭರಣ ಸೇರಿದಂತೆ ಓಟ್ಟು 1,12,06,871 ರೂ. ಮೌಲ್ಯದ ಸೊತ್ತುಗಳು ಕಳವಾಗಿದ್ದು, ಈ ಸಂಬಂಧ ಮಂಗಳೂರು ಉತ್ತರ ಪೊಲೀಸ್ ರಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂದು ಮಂಗಳೂರು ಪೊಲೀಸ್ ಆಯುಕ್ತ ಪಿ.ಎಸ್. ಹರ್ಷ ಮಾಹಿತಿ ನೀಡಿದ್ದಾರೆ.

No Comments

Leave A Comment