Log In
BREAKING NEWS >
ಜುಲೈ 15 ರಂದು ಸಿ.ಬಿ.ಎಸ್.ಸಿ 10 ಮತ್ತು 12ನೇ ತರಗತಿ ಫಲಿತಾಂಶ ಪ್ರಕಟ...

ಪುಣೆಯಲ್ಲಿ ಮತ್ತೆ ಧಾರಾಕಾರ ಮಳೆ, ಪ್ರವಾಹ; 12 ಮಂದಿ ಸಾವು, 150 ಮನೆಗೆ ಹಾನಿ

ನವದೆಹಲಿ:ಪುಣೆಯಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಗುರುವಾರವೂ ಶಾಲಾ, ಕಾಲೇಜಿಗೆ ರಜೆ ಘೋಷಿಸಲಾಗಿದ್ದು, ಈವರೆಗೆ ಪ್ರವಾಹಕ್ಕೆ ಸಿಲುಕಿ ಸಾವನ್ನಪ್ಪಿದವರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ.

ಪುಣೆಯ ನಗರ, ಪುರಂದರ್, ಬಾರಾಮತಿ, ಭೋರ್ ಮತ್ತು ಹವೇಲಿ ತೆಹಸಿಲ್ಸಾದಲ್ಲಿರುವ ಶಾಲಾ, ಕಾಲೇಜಿಗೆ ರಜೆ ಘೋಷಿಸಲಾಗಿದೆ ಎಂದು ಪುಣೆ ಜಿಲ್ಲಾಧಿಕಾರಿ ನಾವಲ್ ಕಿಶೋರ್ ರಾಮ್ ತಿಳಿಸಿದ್ದಾರೆ.

ಸಾಕಾರ್ ನಗರ ಪ್ರದೇಶದಲ್ಲಿ ಭಾರೀ ಮಳೆಗೆ ಗೋಡೆ ಕುಸಿದು ಬಿದ್ದು ಆರು ಮಂದಿ ಸಾವನ್ನಪ್ಪಿದ್ದರು. ಉಳಿದ ನಾಲ್ವರು ಮಳೆ ಸಂಬಂಧಿ ಘಟನೆಯಲ್ಲಿ ಸಾವನ್ನಪ್ಪಿದ್ದಾರೆ. ಸುಮಾರು 150ಕ್ಕೂ ಹೆಚ್ಚು ಮನೆಗಳು ಹಾನಿಗೊಂಡಿರುವುದಾಗಿ ವರದಿ ವಿವರಿಸಿದೆ.

 

 

ಭಾರೀ ಮಳೆ, ಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋದ ವಾಹನವೊಂದನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ(ಎನ್ ಡಿಆರ್ ಎಫ್) ಗುರುವಾರ ಬೆಳಗ್ಗೆ ಪುಣೆಯ ಸಿಂಧ್ ಗಢ್ ರಸ್ತೆ ಸಮೀಪದ ಕಾಲುವೆ ಹತ್ತಿರ ಪತ್ತೆಹಚ್ಚಿದ್ದು ಅದರಲ್ಲಿ ವ್ಯಕ್ತಿಯ ಶವ ದೊರಕಿರುವುದಾಗಿ ವರದಿ ಹೇಳಿದೆ.

No Comments

Leave A Comment