Log In
BREAKING NEWS >
ಬಿರುಕು ಬಿಟ್ಟ ಬೈಂದೂರು -ಕುಂದಾಪುರ ರಾ. ಹೆದ್ದಾರಿ 66ರ ಅರಾಟೆ ಹೊಸ ಸೇತುವೆ: ಸಂಚಾರ ಸ್ಥಗಿತ...

ಎನ್‌ಕೌಂಟರ್ ಸ್ಪೆಷಲಿಸ್ಟ್ ದಯಾ ನಾಯಕ್ ಗೆ ಭಡ್ತಿ – ಎಟಿಎಸ್ ಗೆ ವರ್ಗಾವಣೆ

ಕಾರ್ಕಳ:ಎನ್‌ಕೌಂಟರ್ ಸ್ಪೆಷಲಿಸ್ಟ್ ಎಂದು ದೇಶಾದ್ಯಂತ ಪರಿಚಿತರಾಗಿರುವ ಮತ್ತು ಮುಂಬೈನಲ್ಲಿ ಭೂಗತ ಜಗತ್ತಿನ ಗ್ಯಾಂಗ್‌ಗಳನ್ನು ಯಶಸ್ವಿಯಾಗಿ ಹುಟ್ಟಡಗಿಸಿದ ಕಾರ್ಕಳ ತಾಲೂಕಿನ ಎಣ್ಣೆಹೊಳೆ ಮೂಲದ ದಯಾ ನಾಯಕ್ ಅವರಿಗೆ ಬಡ್ತಿ ನೀಡಿ, ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದ (ಎಟಿಎಸ್)ದ ಮುಂಬೈ ಘಟಕಕ್ಕೆ ಕಳುಹಿಸಲಾಗಿದೆ. ದಯಾ ನಾಯಕ್ ಇದುವರೆಗೂ ಮುಂಬೈನ ಖಾರ್ ನಲ್ಲಿ ಕೆಲಸ ಮಾಡುತ್ತಿದ್ದರು.

ಇದರೊಂದಿಗೆ, ದಯಾ ನಾಯಕ್ ಅವರು ಎಟಿಎಸ್ ಮುಂಬೈ ಘಟಕಕ್ಕೆ ನೇಮಕಗೊಂಡ ಏಕೈಕ ಹಿರಿಯ ತುಳು-ಕನ್ನಡಿಗ ಪೊಲೀಸ್ ಅಧಿಕಾರಿಯಾಗಿ ಹೊರಹೊಮ್ಮಿದ್ದಾರೆ.

90 ರ ದಶಕದಲ್ಲಿ ಮುಂಬೈನಲ್ಲಿ ಭೂಗತ ಲೋಕವು ವಿಜೃಂಭಿಸುತ್ತಿದ್ದಾಗ ದಯಾ ನಾಯಕ್ ಪೊಲೀಸ್ ಪಡೆಗೆ ಸೇರಿದ್ದರು. ಮಾತ್ರವಲ್ಲದೆ ನಿರ್ಭಯವಾಗಿ ಭೂಗತ ಜಗತ್ತನ್ನು ಹತೋಟಿಗೆ ತೆಗೆದುಕೊಂಡು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಯಶಸ್ವಿಯಾದರು. 80 ಕ್ಕೂ ಹೆಚ್ಚು ಭೂಗತ ಪಾತಾಕಿಗಳನ್ನು ಎನ್ ಕೌಂಟರ್ ಮಾಡುವ ಮೂಲಕ ಎನ್ಕೌಂಟರ್ ಸ್ಪೆಷಲಿಸ್ಟ್ ಎಂದೇ ಪ್ರಸಿದ್ಧರಾದರು. ಮುಂಬೈನಲ್ಲಿ ಡ್ರಗ್ಸ್ ಜಾಲವನ್ನು ಮಟ್ಟ ಹಾಕುವಲ್ಲಿ ಶ್ರಮಿಸಿ ಯಶಸ್ವಿಯಾಗಿದ್ದಾರೆ. ಮಾತ್ರವಲ್ಲದೆ ಹಲವು ಸಂಕೀರ್ಣವಾದ ಪ್ರಕರಣಗಳನ್ನು ಭೇದಿಸುವಲ್ಲಿ ಅವರು ಯಶಸ್ವಿಯಾದರು.

ದಯಾ ನಾಯಕ್ ಅವರಿಗೆ 2004 ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಲಭಿಸಿದೆ. ದಯಾನಾಯಕ್ ಅವರು ಎಣ್ಣೆ ಹೊಳೆಯಲ್ಲಿ ಶಾಲೆಯನ್ನು ನಿರ್ಮಿಸಿ ಕಟ್ಟಡವನ್ನು ಸರ್ಕಾರಕ್ಕೆ ಹಸ್ತಾಂತರಿಸಿದರು. ಅವರ ಸಾಧನೆಗಳು ಆಧರಿಸಿ ಹಲವು ಹಿಂದಿ ಚಲನಚಿತ್ರಗಳನ್ನು ಸಹ ಮಾಡಲಾಗಿದೆ

ಪ್ರಾಮಾಣಿಕತೆ, ಕಠಿಣ ಪರಿಶ್ರಮ, ಕರ್ತವ್ಯ ಪ್ರಜ್ಞೆ ಮತ್ತು ಸ್ನೇಹಪರತೆ ಇಂದು ತನ್ನನ್ನು ಈ ಮಟ್ಟಕ್ಕೆ ಸಾಧಿಸಲು ಸಹಾಯ ಮಾಡಿದೆ ಎಂದು ದಯಾ ನಾಯಕ್ ಸಂತೋಷ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲದೆ ಮುಂಬೈನಲ್ಲಿ ಅಪರಾಧ ಮತ್ತು ಅಪರಾಧಿಗಳ ವಿರುದ್ಧ ಹೋರಾಟ ಮುಂದುವರಿಸುವುದಾಗಿ ಹೇಳಿದ್ದಾರೆ.

No Comments

Leave A Comment