Log In
BREAKING NEWS >
ಬಿರುಕು ಬಿಟ್ಟ ಬೈಂದೂರು -ಕುಂದಾಪುರ ರಾ. ಹೆದ್ದಾರಿ 66ರ ಅರಾಟೆ ಹೊಸ ಸೇತುವೆ: ಸಂಚಾರ ಸ್ಥಗಿತ...

‘ಯದುವೀರ್ ಒಡೆಯರ್ ಖಾಸಗಿ ದರ್ಬಾರ್ ಗೆ ಸಜ್ಜಾಗಿದೆ ಅರಮನೆಯ ಸುವರ್ಣ ಸಿಂಹಾಸನ’

ಮೈಸೂರು: ನಾಡಹಬ್ಬ ದಸರಾದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ರಾಜವಂಶಸ್ಥರ ಖಾಸಗಿ ದರ್ಬಾರ್​ಗೆ ಸಿದ್ಧತೆಗಳು ಆರಂಭಗೊಂಡಿದ್ದು, ಅರಮನೆಯಲ್ಲಿ ಸಿಂಹಾಸನ ಜೋಡಣೆ ಕಾರ್ಯಕ್ಕೆ ಚಾಲನೆ ನೀಡಲಾಗಿದೆ

ದಸರಾ ಉದ್ಘಾಟನೆ ಇನ್ನು 5 ದಿನ ಬಾಕಿ ಉಳಿದಿರುವಂತೆಯೇ ಭದ್ರತಾ ಕೋಣೆಯಲ್ಲಿದ್ದ ಚಿನ್ನದ ಸಿಂಹಾಸನವನ್ನು ಹೊರ ತೆಗೆದು ಅರಮನೆಯ ದರ್ಬಾರ್ ಹಾಲ್​ನಲ್ಲಿ ಇಡಲಾಗಿದೆ..

ಬೆಳಗ್ಗೆ 10.45ರಿಂದ 11.30ಕ್ಕೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ಜೋಡಣೆ ಕಾರ್ಯ ಆರಂಭವಾಗಿದ್ದು, ದಸರಾ ಉದ್ಘಾಟನೆ ದಿನ ಸೆ.29ರಂದು ಪೂರ್ಣ ಪ್ರಮಾಣದಲ್ಲಿ ಆಸನಕ್ಕೆ ಸಿಂಹಗಳನ್ನು ಜೋಡಣೆ ಮಾಡಿ ಪೂಜೆ ನೆರವೇರಿಸಿದ ಬಳಿಕ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸಿಂಹಾಸನಾರೋಹಣ ಮಾಡಲಿದ್ದಾರೆ.

ಸೆಪ್ಟಂಬರ್ 29 ರಂದು ಅರಮನೆಯಲ್ಲಿ ಸಂಪ್ರದಾಯಬದ್ದವಾದ ವಿಧಿ ವಿಧಾನಗಳು ನಡೆಯಲಿದ್ದು, ಬೆಳಗ್ಗೆ 8.10ಕ್ಕೆ ನವಗ್ರಹ ಹೋಮದೊಂದಿಗೆ ಆರಂಭವಾಗಲಿದೆ, ಯಧುವೀರ್ ಶ್ರೀಕಂಠದತ್ತ ಒಡೆಯರ್ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಲಿದ್ದಾರೆ.

ಸಿಂಹಾಸನವನ್ನು 14 ಭಾಗಗಳಾಗಿ ಮಾಡಲಾಗಿರುತ್ತದೆ, ಛತ್ರಿ, ಪ್ರಮುಖ ಕುರ್ಚಿ, ಅವುಗಳಲ್ಲಿ ಪ್ರಮುಖವಾದವು, ಚಿನ್ನದ ಸಿಂಹಾಸನದಲ್ಲಿರುವ ಸೀಟ್ ಅನ್ನು ಅಯಾಯಾ ರಾಜರುಗಳ ಗಾತ್ರಕ್ಕೆ ಅನುಸಾರವಾಗಿ ಆಯಾಯಾ ಕಾಲಘಟ್ಟಗಳಲ್ಲಿ ಬದಲಾಯಿಸಲಾಗಿತ್ತು.

ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸುಗಳಿಗೆ ಎಂಬ್ರಾಯ್ಡರಿ ಮಾಡಿರುವ ಬಟ್ಟೆಹಗಳಲ್ಲಿ ಸಿಂಗರಿಸಿ, ಅರಮನೆಗೆ ಕರೆತಂದು ಪೂಜೆ ಮಾಡಲಾಗುತ್ತದೆ.

No Comments

Leave A Comment