Log In
BREAKING NEWS >
ಅರ್ಧಕ್ಕೆ ನಿಂತ ಪರ್ಕಳ ರಾ. ಹೆದ್ದಾರಿ ಕಾಮಗಾರಿ: ಅಂಗಡಿ, ಮನೆಯೊಳಗೆ ಕೆಸರು ನೀರು....

ಕಾಶ್ಮೀರಕ್ಕಾಗಿ ಪಂಜಾಬ್ ನಲ್ಲಿ ಶಸ್ತ್ರಾಸ್ತ್ರ, ಮದ್ದುಗುಂಡು ಬೀಳಿಸಿದ ಪಾಕ್ ಡ್ರೋಣ್ ಗಳು

ನವದೆಹಲಿ: ಪಾಕಿಸ್ತಾನ ಕಾಶ್ಮೀರಕ್ಕಾಗಿ ಪಂಜಾಬ್ ನಲ್ಲಿ ಜಿಪಿಎಸ್ ಹೊಂದಿದ್ದ ಡ್ರೋಣ್ ಗಳ ಮೂಲಕ ಶಸ್ತ್ರಾಸ್ತ್ರಗಳು ಮತ್ತು ಮದ್ದು ಗುಂಡುಗಳನ್ನು ಬೀಳಿಸಿದ್ದು, ಅವುಗಳನ್ನು ಭಾರತೀಯ ಸೇನೆ ಜಪ್ತಿ ಮಾಡಿದೆ.

ಸುಮಾರು 10 ಕೆಜಿ ತೂಕ ಹೊತ್ತೊಯ್ಯಬಲ್ಲ ಡ್ರೋಣ್ ಗಳು ಪಂಜಾಬ್ ನ ಟಾರನ್ ಟಾರನ್ ಜಿಲ್ಲೆಯ ಖಾಲ್ರಾ ಸಮೀಪದ ರಾಜೋಕೆ ಗ್ರಾಮದ ಬಳಿ ಎಕೆ 47, ಸೆಟಲೈಟ್ ಫೋನ್ ಹಾಗೂ ಹ್ಯಾಂಡ್ ಗ್ರೆನೇಡ್ಸ್ ಗಳನ್ನು ಬೀಳಿಸುತ್ತಿರುವ ಮಾಹಿತಿಯನ್ನು ಪಂಜಾಬ್ ಪೊಲೀಸರು ಬಹಿರಂಗಗೊಳಿಸಿದ್ದಾರೆ.

ಪಂಜಾಬ್ ನಲ್ಲಿ ಇದೇ ಮೊದಲ ಬಾರಿಗೆ ಡ್ರೋಣ್ ಮೂಲಕ ಶಸ್ತ್ರಾಸ್ತ್ರಗಳನ್ನು ಎಸೆಯುತ್ತಿರುವ ಘಟನೆ ವರದಿಯಾಗಿದೆ. ಶಸ್ತ್ರಾಸ್ತ್ರ, ಸೆಟಲೈಟ್ ಫೋನ್ ಹಾಗೂ ಹ್ಯಾಂಡ್ ಗ್ರೆನೇಡ್ಸ್ ಗಳನ್ನು ಎಸೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಾಕಿಸ್ತಾನದ ಡ್ರೋಣ್ ಗಳು ಏಳರಿಂದ ಎಂಟು ಬಾರಿ ಶಸ್ತ್ರಾಸ್ತ್ರಗಳು ಮತ್ತು ಮದ್ದು ಗುಂಡುಗಳನ್ನು ತಂದು ಬೀಳಿಸಿದ್ದು, ಐದು ಎಕೆ 47, 16 ಮ್ಯಾಗಜೀನ್ ಹಾಗೂ 30 ಬೋರ್ ಪಿಸ್ತೂಲ್ ಸೇರಿದಂತೆ ಹಲವು ಮದ್ದು ಗುಂಡುಗಳನ್ನು ಜಪ್ತಿ ಮಾಡಲಾಗಿದೆ.

ನಿನ್ನೆಯಷ್ಟೇ ಪಾಕಿಸ್ತಾನ ಡ್ರೋಣ್ ಗಳು ಶಸ್ತ್ರಾಸ್ತ್ರಗಳು ಮತ್ತು ಮದ್ದು ಗುಂಡುಗಳನ್ನು ಬೀಳಿಸುತ್ತಿದ್ದು ಈ ಬಗ್ಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಒತ್ತಾಯಿಸಿದ್ದರು.

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ(ಆರ್ಟಿಕಲ್ 370) ವಿಶೇಷ ಸ್ಥಾನಮಾನ ರದ್ದುಪಡಿಸಿದ ನಂತರ ಪಾಕಿಸ್ತಾನದ ಡ್ರೋಣ್ ಗಳು ಅನಗತ್ಯ ಉಪದ್ರವದಲ್ಲಿ ತೊಡಗಿವೆ. ಇನ್ನು ಪಂಜಾಬ್ ನಲ್ಲಿ ಶಸ್ತ್ರಾಸ್ತ್ರಗಳು ಮತ್ತು ಮದ್ದು ಗುಂಡುಗಳನ್ನು ಬೀಳಿಸುತ್ತಿವೆ. ಈ ಸಮಸ್ಯೆಯನ್ನು ತ್ವರಿತಗತಿಯಲ್ಲಿ ನಿವಾರಿಸಲು ಅಗತ್ಯ ಕ್ರಮಕೈಗೊಳ್ಳುವಂತೆ ಅಮಿತ್ ಶಾರಿಗೆ ಅಮರೀಂದರ್ ಸಿಂಗ್ ಟ್ವೀಟ್ ಮೂಲಕ ಒತ್ತಾಯಿಸಿದ್ದರು.

No Comments

Leave A Comment