Log In
BREAKING NEWS >
ಜುಲೈ 15 ರಂದು ಸಿ.ಬಿ.ಎಸ್.ಸಿ 10 ಮತ್ತು 12ನೇ ತರಗತಿ ಫಲಿತಾಂಶ ಪ್ರಕಟ...

ನೋಬಾಲ್, ವೈಡ್ ಬಾಲ್; ಕೆಪಿಎಲ್ ನಲ್ಲಿ ನಡೆದಿತ್ತು ಕೋಟಿ ಕೋಟಿ ಮ್ಯಾಚ್ ಫಿಕ್ಸಿಂಗ್

ಬೆಂಗಳೂರು: ಕರ್ನಾಟಕ ಪ್ರೀಮಿಯರ್ ಲೀಗ್ ನಲ್ಲಿ ನಡೆದಿದೆ ಎನ್ನಲಾಗಿದ್ದ ಫಿಕ್ಸಿಂಗ್ ಈಗ ಅಧಿಕೃತವಾಗಿದೆ. ಇತ್ತೀಚೆಗೆ ಸಿಸಿಬಿ ಪೊಲೀಸರಿಂದ ಬಂಧನಕ್ಕೊಳಗಾದ ಅಶ್ಪಾಕ್ ಆಲಿ ಫಿಕ್ಸಿಂಗ್ ನಿಂದ ಕೋಟ್ಯಾಂತರ ರೂ. ಗಳಿಸಿದ್ದ ಎಂದು ವರದಿಯಾಗಿದೆ.

ಬಿಸಿಸಿಐ ನ ಮಾಹಿತಿ ಮೇರೆಗೆ ಬೆಂಗಳೂರು ಸಿಸಿಬಿ ಪೊಲೀಸರು ಬೆಳಗಾವಿ ಪ್ಯಾಂಥರ್ಸ್ ತಂಡದ ಮಾಲಕ ಅಶ್ಪಾಕ್ ಆಲಿಯನ್ನು ಬಂಧಿಸಲಾಗಿತ್ತು. ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿದೆ.

ಬೆಳಗಾವಿ ತಂಡದ ಮಾಲಕ  20ಕ್ಕೂ ಹೆಚ್ಚು ಆಟಗಾರರೊಂದಿಗೆ ನಿರಂತರ ದೂರವಾಣಿ ಸಂಪರ್ಕ ಹೊಂದಿದ್ದ. ಪಂದ್ಯ ಆರಂಭಕ್ಕೂ ಮುನ್ನ ಆಲಿ ಆಟಗಾರರನ್ನು ಸಂಪರ್ಕಿಸಿ ಫಿಕ್ಸಿಂಗ್ ನಡೆಸುತ್ತಿದ್ದ ಎನ್ನಲಾಗಿದೆ.

ನೋ ಬಾಲ್, ವೈಡ್ ಬಾಲ್
ಅಶ್ಪಾಕ್ ಆಲಿ ಆಟಗಾರರಿಗೆ ವೈಡ್ ಬಾಲ್ ಮತ್ತು ನೋ ಬಾಲ್ ಎಸೆಯುವಂತೆ ಹೇಳಿ ಫಿಕ್ಸಿಂಗ್ ಮಾಡಿಸುತ್ತಿದ್ದ. ಈ ವೇಳೆ ಅಪಾರ ಪ್ರಮಾಣದ ಬೆಟ್ಟಿಂಗ್ ಕಟ್ಟಿ ಹಣ ಸಂಪಾದಿಸುತ್ತಿದ್ದ.

ಎಲ್ಲಾ ತಂಡದಲ್ಲಿದ್ದಾರೆ
ವಿವಿಧ ಜಿಲ್ಲೆಗಳ ಆಟಗಾರರೊಂದಿಗೆ ಆಲಿ ಸಂಪರ್ಕ ಹೊಂದಿದ್ದ.ಈ ಆಟಗಾರರಿಗೆ ಇಂದಿರಾ ನಗರದ ಅಪಾರ್ಟ್ ಮೆಂಟ್ ಒಂದರಲ್ಲಿ ವಸತಿ ವ್ಯವಸ್ಥೆ ಮಾಡಿ ಅವರಿಗೆ ಪಾರ್ಟಿ, ಹಣ ನೀಡಿ ಫಿಕ್ಸಿಂಗ್ ನಡೆಸುತ್ತಿದ್ದ ಎನ್ನಲಾಗಿದೆ. 20ಕ್ಕೂ ಹೆ್ಚ್ಚು ಜನರು ಆಲಿಯ ಜಾಲದಲ್ಲಿದ್ದು, ಇವರು ಎಲ್ಲಾ ತಂಡದಲ್ಲಿದ್ದಾರೆ ಎಂದು ವರದಿಯಾಗಿದೆ.

ಟೂರ್ಸ್ ಆಂಡ್ ಟ್ರಾವೆಲ್ಸ್ ವ್ಯವಹಾರ
ಅಶ್ಫಾಕ್ ಆಲಿ ಮೂಲತಃ ಟೂರ್ಸ್ ಆಂಡ್ ಟ್ರಾವೆಲ್ ಕಂಪನಿ ನಡೆಸುತ್ತಿದ್ದ. ಈತ ದುಬೈನಲ್ಲಿ ಕೂಡಾ ಒಂದು ಶಾಖೆ ಹೊಂದಿದ್ದ. ಕಳೆದ ಮೂರು ಆವೃತ್ತಿಗಳಲ್ಲಿ ಈತ ಫಿಕ್ಸಿಂಗ್ ನಡೆಸುತ್ತಿದ್ದು, ಪ್ರತೀ ಆವೃತ್ತಿಯಲ್ಲೂ 50 ಕೋಟಿಯಷ್ಟು ಸಂಪಾದಿಸುತ್ತಿದ್ದ ಎನ್ನಲಾಗಿದೆ.

ಅಂತಾರಾಷ್ಟ್ರೀಯ ಆಟಗಾರರು?
ಆಲಿ ನಡೆಸುತ್ತಿದ್ದ ಫಿಕ್ಸಿಂಗ್ ನಲ್ಲಿ ಸ್ಥಳೀಯ ಆಟಗಾರರೊಂದಿಗೆ ಇಬ್ಬರು ಅಂತಾರಾಷ್ಟ್ರೀಯ ಆಟಗಾರರು ಭಾಗಿಯಾಗಿದ್ದಾರೆ. ಫಿಕ್ಸಿಂಗ್ ಬಗ್ಗೆ ಕೆಲ ರಣಜಿ ಆಟಗಾರರಿಗೆ ಮಾಹಿತಿ ಇತ್ತಾದರು ಹೇಳಿಕೊಳ್ಳುವಂತಿರಲಿಲ್ಲ ಎನ್ನಲಾಗಿದೆ.

ಸಿಸಿಬಿ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಇನ್ನಷ್ಟು ಜನರ ಕೈವಾಡ ಹೊರ ಬಿಳುವ ಸಾಧ್ಯತೆಯಿದೆ.

No Comments

Leave A Comment