Log In
BREAKING NEWS >
ಉಡುಪಿಯ ಮತ್ತೊ೦ದು ಕನ್ನಡ ವೆಬ್ ಸೈಟ್ ಸುದ್ದಿಕಿರಣ.ಕಾ೦ ಸೋಮವಾರ(ಇ೦ದು) ಲೋಕಾರ್ಪಣೆ .... ಅ.27ರ ಮ೦ಗಳವಾರದ೦ದು ಶ್ರೀಶಾರದಾ ವಿರ್ಸಜನಾ ಕಾರ್ಯಕ್ರಮವು ಜರಗಲಿದೆ.

ಆರ್ಥಿಕ ಉತ್ತೇಜನಕ್ಕೆ ಕ್ರಮ; ದೇಶೀಯ ಕಂಪೆನಿಗಳ ಕಾರ್ಪೊರೇಟ್ ತೆರಿಗೆ ಶೇ. 25.17ಕ್ಕೆ ಇಳಿಸಿದ ಕೇಂದ್ರ ಸರ್ಕಾರ

ಗೋವಾ: ದೇಶದ ಆರ್ಥಿಕತೆಗೆ ಉತ್ತೇಜನ ನೀಡಲು ಕೇಂದ್ರ ಸರ್ಕಾರ ಶುಕ್ರವಾರ ದೇಶೀಯ ಕಂಪೆನಿಗಳ ಮೇಲೆ ಎಲ್ಲಾ ಸೆಸ್ ಮತ್ತು ಹೆಚ್ಚುವರಿ ಶುಲ್ಕ ಒಳಗೊಂಡಂತೆ ಕಾರ್ಪೊರೇಟ್ ತೆರಿಗೆಯನ್ನು ಶೇಕಡಾ 25.17ಕ್ಕೆ ಇಳಿಸಿದೆ.

ಪ್ರಸಕ್ತ ಹಣಕಾಸು ವರ್ಷ ಏಪ್ರಿಲ್ 1ರಿಂದ ಹೊಸ ತೆರಿಗೆ ದರ ಅನ್ವಯವಾಗಲಿದೆ ದೇಶೀಯ ಕಂಪೆನಿಗಳಿಗೆ ಅನ್ವಯವಾಗಲಿದೆ ಎಂದು ವಿತ್ತಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ಕಾರ್ಪೊರೇಟ್ ತೆರಿಗೆ ಕಡಿತ ಮತ್ತು ಇತರ ಪರಿಹಾರ ಕ್ರಮಗಳಿಂದ ವಾರ್ಷಿಕವಾಗಿ 1.45 ಲಕ್ಷ ಕೋಟಿ ರೂಪಾಯಿ ಹಣ ಸಂಗ್ರಹವಾಗಲಿದ್ದು ಇದರಿಂದ ಕಂಪೆನಿಗಳ ಹೂಡಿಕೆ ಮತ್ತು ಬೆಳವಣಿಗೆಗೆ ಅನುಕೂಲವಾಗಲಿದೆ ಎಂದರು.

ಕೇಂದ್ರ ಸರ್ಕಾರದ ಕಾರ್ಪೊರೇಟ್ ತೆರಿಗೆ ಕಡಿತದಿಂದಾಗಿ ದೇಶೀಯ ಕಂಪೆನಿಗಳು ಯಾವುದೇ ಪ್ರೋತ್ಸಾಹ ಧನ ಅಥವಾ ರಿಯಾಯಿತಿ ಪಡೆದಿರದಿದ್ದರೆ ಶೇಕಡಾ 22ರಷ್ಟು ಕಾರ್ಪೋರೇಟ್ ತೆರಿಗೆ ಕಟ್ಟಬೇಕಾಗುತ್ತದೆ. ಆದಾಯ ತೆರಿಗೆ ಕಾಯ್ದೆ ಮತ್ತು ಹಣಕಾಸು ಕಾಯ್ದೆಯಲ್ಲಿನ ಬದಲಾವಣೆಯನ್ನು ಸರ್ಕಾರ ವಿಧೇಯಕ ಮೂಲಕ ತರಲಿದೆ.

ಶೇಕಡಾ 22ರಷ್ಟು ಆದಾಯ ತೆರಿಗೆ ಕಡಿತವನ್ನು ಬಯಸುವ ಕಂಪೆನಿಗಳು ಕನಿಷ್ಠ ಪರ್ಯಾಯ ತೆರಿಗೆ(ಮ್ಯಾಟ್) ಕಟ್ಟಬೇಕಾಗಿಲ್ಲ. ಅಕ್ಟೋಬರ್ 1ರ ನಂತರ ಸೇರಲ್ಪಟ್ಟ ಹೊಸ ದೇಶೀಯ ಉತ್ಪಾದನಾ ಕಂಪೆನಿಗಳು ಯಾವುದೇ ಪ್ರೋತ್ಸಾಹ ಧನವಿಲ್ಲದೆ ಆದಾಯ ತೆರಿಗೆಯನ್ನು ಶೇಕಡಾ 15ರ ದರದಲ್ಲಿ ಪಾವತಿಸಬಹುದು.

ಈ ಮಧ್ಯೆ, ತೆರಿಗೆ ದರ ಹೊಸ ಉತ್ಪಾದನಾ ಕಂಪೆನಿಗಳಿಗೆ ಎಲ್ಲಾ ಸೆಸ್ ಮತ್ತು ಹೆಚ್ಚುವರಿ ಶುಲ್ಕ ಸೇರಿ ಶೇಕಡಾ 17.01 ಆಗುತ್ತದೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಶಕ್ತಿಕಾಂತ್ ದಾಸ್ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದು, ಇದೊಂದು ದೃಢ ಹೆಜ್ಜೆ ಎಂದು ವ್ಯಾಖ್ಯಾನಿಸಿದ್ದಾರೆ.

No Comments

Leave A Comment