Log In
BREAKING NEWS >
ಉಡುಪಿಯ ಮತ್ತೊ೦ದು ಕನ್ನಡ ವೆಬ್ ಸೈಟ್ ಸುದ್ದಿಕಿರಣ.ಕಾ೦ ಸೋಮವಾರ(ಇ೦ದು) ಲೋಕಾರ್ಪಣೆ .... ಅ.27ರ ಮ೦ಗಳವಾರದ೦ದು ಶ್ರೀಶಾರದಾ ವಿರ್ಸಜನಾ ಕಾರ್ಯಕ್ರಮವು ಜರಗಲಿದೆ.

ಅನುಮತಿ ಇಲ್ಲದೇ ವಿದೇಶಿಗರಿಗೆ ಶಿಪ್ ಯಾರ್ಡ್ ನೊಳಗೆ ಪ್ರವೇಶ ಕೊಟ್ಟವರಾರು?

ಕೊಚ್ಚಿ: ಕೇರಳದ ಕೊಚ್ಚಿ ಶಿಪ್ ಯಾರ್ಡ್ ನಲ್ಲಿ ತಯಾರಾಗುತ್ತಿರುವ ಸ್ವದೇಶಿ ನಿರ್ಮಿತ ಐಎನ್ಎಸ್ ವಿಕ್ರಾಂತ್ ಯುದ್ಧ ವಿಮಾನವಾಹಕ ನೌಕೆಯಲ್ಲಿ ಹಾರ್ಡ್ ವೇರ್ ಕಳ್ಳತನ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆಯುತ್ತಿದ್ದು, ಇದೀಗ ಕೊಚ್ಚಿ ಶಿಪ್ ಯಾರ್ಡ್ ಗೆ ಅನಾಮಿಕ ವಿದೇಶಿಗರು ಎಂಟ್ರಿಕೊಟ್ಟಿದ್ದರು ಎಂದು ಹೇಳಲಾಗಿದೆ.

ಈ ಕುರಿತಂತೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ವರದಿ ಮಾಡಿದ್ದು, ಕಳ್ಳತನ ಸಂಭವಿಸಿದೆ ಎನ್ನಲಾಗುತ್ತಿರುವ ಆಗಸ್ಟ್ 29ರಿಂದ ಸೆಪ್ಟೆಂಬರ್ 12ರ ಅವಧಿಯಲ್ಲಿ ಕೊಚ್ಚಿನ್ ಶಿಪ್ ಯಾರ್ಡ್ ಗೆ ವಿದೇಶಿಗರು ಆಗಮಿಸಿದ್ದರು ಎಂಬ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ. ವಿವಿಧ ಕಾರಣಗಳನ್ನು ನೀಡಿ ಪದೇ ಪದೇ ವಿದೇಶಿಗರು ಶಿಪ್ ಯಾರ್ಡ್ ಗೆ ಅಗಮಿಸಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ. ಇದೇ ಕಾರಣಕ್ಕೆ ಪ್ರಸ್ತುತ ಐಎನ್ಎಸ್ ವಿಕ್ರಾಂತ್ ನಲ್ಲಿನ ತಂತ್ರಾಂಶ ಕಳ್ಳತನಕ್ಕೂ ವಿದೇಶಿಗರ ಶಿಪ್ ಯಾರ್ಡ್ ಭೇಟಿಗೂ ಸಂಬಂಧ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಶಿಪ್ ಯಾರ್ಡ್ ಗೆ ಯಾರೇ ಭೇಟಿ ನೀಡಿದರೂ ಅಲ್ಲಿ ಭದ್ರತೆಗೆ ನಿಯೋಜನೆಯಾಗಿರುವ ಸಿಐಎಎಸ್ಎಫ್ ಸಿಬ್ಬಂದಿ ಅವರ ದಾಖಲಾತಿಗಳನ್ನು ಪರಿಶೀಲಿಸಿ ದಾಖಲೆಗಳನ್ನು ಕಡತಗಳಲ್ಲಿ ನಮೂದಿಸಿರುತ್ತಾರೆ. ಆದರೆ ಶಿಪ್ ಯಾರ್ಡ್ ಗೆ ಭೇಟಿ ನೀಡಿದ್ದ ವಿದೇಶಿಗರ ದಾಖಲಾತಿಗಳನ್ನು ಪರಿಶೀಲಿಸಿದಾಗ ಅವರು ಹೊಂದಾಣಿಕೆಯಾಗುತ್ತಿಲ್ಲ ಎನ್ನಲಾಗಿದೆ. ಹೀಗಾಗಿ ಈ ದಾಖಲೆಗಳನ್ನು ಗುಪ್ತಚರ ಇಲಾಖೆಗೆ ನೀಡಲಾಗಿದ್ದು, ಅಲ್ಲಿಂದ ಮಾಹಿತಿ ಲಭ್ಯವಾದ ಬಳಿಕ ಮುಂದಿನ ತನಿಖಾ ಕ್ರಮದ ಕುರಿತು ಆಲೋಚಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

No Comments

Leave A Comment