Log In
BREAKING NEWS >
ಉಡುಪಿ ನಗರಸಭೆ ಅಧ್ಯಕ್ಷರಾಗಿ ಸುಮಿತ್ರಾ ನಾಯಕ್ ಹಾಗೂ ಉಪಾಧ್ಯಕ್ಷರಾಗಿ ಲಕ್ಷ್ಮಿ ‌ಮಂಜುನಾಥ್ ಕೊಳ ಆಯ್ಕೆ....

ಮನೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟ: ಯುವಕನಿಗೆ ಗಾಯ

ಬೆಂಗಳೂರು: ಮನೆಯೊಂದರಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟ ಪರಿಣಾಮ ಮನೆಯ ಪೀಠೋಪಕರಣಗಳು ಸುಟ್ಟು, ಕಿಟಕಿ ಗಾಜುಗಳು ಪುಡಿಪುಡಿಯಾಗಿರುವ ಘಟನೆ ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ನಡೆದಿದೆ.

ಯಲಹಂಕ ಕೊಡಗಲಹಟ್ಟಿ ಗ್ರಾಮದ ಪವನ್ ಕುಮಾರ್ (23) ಎಂಬವರ ಮನೆಯಲ್ಲಿ ಈ ಘಟನೆ ನಡೆದಿದ್ದು, ಅವರಿಗೆ ಸುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಫೋಟದ ರಭಸಕ್ಕೆ ಮನೆಯ ಕಿಟಕಿ ಗ್ಲಾಸುಗಳು ಪುಡಿಪುಡಿಯಾಗಿದ್ದು, ಸಮೀಪದ ಮನೆಗೂ ಅಲ್ಪ ಹಾನಿಯಾಗಿದೆ.

No Comments

Leave A Comment