Log In
BREAKING NEWS >
ಉಡುಪಿ ನಗರಸಭೆ ಅಧ್ಯಕ್ಷರಾಗಿ ಸುಮಿತ್ರಾ ನಾಯಕ್ ಹಾಗೂ ಉಪಾಧ್ಯಕ್ಷರಾಗಿ ಲಕ್ಷ್ಮಿ ‌ಮಂಜುನಾಥ್ ಕೊಳ ಆಯ್ಕೆ....

ಮೀನುಗಾರಿಕಾ ಬೋಟ್ ಮುಳುಗಡೆ-8 ಮಂದಿಯನ್ನು ರಕ್ಷಿಸಿದ ಕರಾವಳಿ ಕಾವಲು ಪಡೆ

ಮಂಗಳೂರು; ಕಾರವಾರ ಬಂದರಿನ ಬಳಿ ಸಮುದ್ರದಲ್ಲಿ ಎಂಜಿನ್ ವೈಫಲ್ಯದಿಂದಾಗಿ ಮುಳುಗುವ ಹಂತ ತಲುಪಿದ್ದ ಮೀನುಗಾರಿಕೆ ಬೋಟ್ ಮತ್ತು ಅದರಲ್ಲಿದ್ದ ೮ ಮಂದಿಯನ್ನು ರಕ್ಷಿಸುವಲ್ಲಿ ಕರಾವಳಿ ಕಾವಲು ಪಡೆ ಯಶಸ್ವಿಯಾಗಿದೆ.

ಶ್ರೀದುರ್ಗಾ ಹೆಸರಿನ ಬೋಟ್ ಮುಳುಗಡೆ ಆಗುವ ಹಂತಕ್ಕೆ ತಲುಪಿತ್ತು. ಈ ಬಗ್ಗೆ ಕಾರವಾರ ಮೀನುಗಾರಿಕೆ ಇಲಾಖೆಗೆ ಮಾಹಿತಿ ಬಂದಿದ್ದು. ಅದನ್ನು ಕೂಡಲೇ ಕರಾವಳಿ ಕಾವಲು ಪಡೆಗೆ ರವಾನಿಸಲಾಗಿತ್ತು. ಮಾಹಿತಿಯಂತೆ ಶುಕ್ರವಾರ ಬೆಳಿಗ್ಗೆ ಕಾರ್ಯಾಚರಣೆಗೆ ಇಳಿದ ಕರಾವಳಿ ಕಾವಲು ಪಡೆ, ಬೋಟ್ ಇರುವ ಸ್ಥಳಕ್ಕೆ ತೆರಳಿ, ಅದರಲ್ಲಿದ್ದ 8 ಜನರನ್ನು ಸುರಕ್ಷಿತವಾಗಿ ದಡ ಸೇರಿಸಲಾಯಿತು. ದೋಣಿಯನ್ನು ಟೋಯಿಂಗ್ ಮೂಲಕ ಕಾರವಾರ ಬಂದರಿಗೆ ತರಲಾಗಿದೆ.

ಯಾವುದೇ ರೀತಿಯ ಹಾನಿ ಸಂಭವಿಸಿಲ್ಲ ಬೋಟ್ ಮತ್ತು ಅದರಲ್ಲಿದ್ದ ಸಿಬ್ಬಂದಿ ಹಾಗೂ ಸಾಮಾಗ್ರಿಗಳನ್ನು ಸುರಕ್ಷಿತವಾಗಿ ದಡಕ್ಕೆ ತರಲಾಗಿದೆ ಎಂದು ಕರಾವಳಿ ಕಾವಲು ಪಡೆ ಕಮಾಂಡೆಂಟ್ ಎಸ್ ಎಸ್ ದಸಿಲ್ ತಿಳಿಸಿದ್ದಾರೆ.

No Comments

Leave A Comment